ಎಲ್ಲಾರೂ ಮಾಡುವುದು ಹೊಟ್ಟೆಗಾಗಿ… ಅನ್ನೋ ಗಾದೆ ಮಾತು ಯಾವತ್ತಿಗೂ ನಿಜವೇ. ಕೊನೆಯವರೆಗೂ ನಮ್ಮ ಹೊಟ್ಟೆಪಾಡು ಉಳಿಯಬೇಕಾದರೆ ಹಣ ಸಂಪಾದನೆ ಬಹಳ ಮುಖ್ಯ. ಹಣ ಸಂಪಾದನೆ, ಹಣ ಉಳಿತಾಯ ಮತ್ತು ಹಣ ಹೂಡಿಕೆ (Investment) ಈ ಮೂರು ಅಂಶಗಳು ಬಹಳ ಅಗತ್ಯ. ಬಹಳಷ್ಟು ಹಣ ಇದ್ದವರು ಮೊದಲ ಅಂಶ ಕೈಬಿಟ್ಟರೂ ನಡೆದೀತು, ಆದರೆ ಕೊನೆಯ ಎರಡು ಅಂಶಗಳು ತೀರಾ ಮುಖ್ಯ. ಹಣ ಹೂಡಿಕೆಗೆ ಇವತ್ತು ಹಲವು ಆಯ್ಕೆಗಳಿವೆ. ಅದರಲ್ಲಿ ಮ್ಯುಚುವಲ್ ಫಂಡ್ ಎಸ್ಐಪಿಗಳು (Mutual Fund SIP) ಪ್ರಮುಖವಾದುವು. ಈಕ್ವಿಟಿ ಅಥವಾ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಗದವರು ಸರಳವಾಗಿ ಎಸ್ಐಪಿಯೊಂದನ್ನು ಆರಿಸಿಕೊಂಡು ಹೂಡಿಕೆ ಮಾಡಬಹುದು.
ಮ್ಯುಚುವಲ್ ಫಂಡ್ ಎಸ್ಐಪಿ ವಿಚಾರದಲ್ಲಿ 15 X 15 X 15 ಸೂತ್ರವೊಂದನ್ನು ತಜ್ಞರು ಮುಂದಿಡುತ್ತಾರೆ. ಇದು ಕೋಟ್ಯಧಿಪತಿ ಆಗಿಸುವಂತಹ ಸೂತ್ರ. ಎಸ್ಐಪಿ ಸರಾಸರಿಯಾಗಿ ಶೇ. 15ರಷ್ಟು ವಾರ್ಷಿಕ ರಿಟರ್ನ್ ನೀಡುತ್ತದೆಂದು ನಿರೀಕ್ಷಿಸಬಹುದು. ಅದರಂತೆ ನೀವು ತಿಂಗಳಿಗೆ 15,000 ರೂಗಳಂತೆ ಎಸ್ಐಪಿಗೆ ಹಣ ತೊಡಗಿಸಿಕೊಳ್ಳುತ್ತಾ ಹೋದರೆ 15 ವರ್ಷದಲ್ಲಿ ನಿಮ್ಮ ಸಂಪತ್ತು ಒಂದು ಕೋಟಿ ರೂ ಗಡಿ ಮುಟ್ಟುತ್ತದೆ. ಇದು ಸಾಧ್ಯವಾಗಬೇಕಾದರೆ ಎಸ್ಐಪಿ ಇರುವ ಮ್ಯುಚುವಲ್ ಫಂಡ್ ವರ್ಷಕ್ಕೆ ಶೇ. 15ರ ದರದಲ್ಲಿ ಲಾಭ ತರಬೇಕು.
ಇದನ್ನೂ ಓದಿ: Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್ಬಿಐನ ಈ ಮ್ಯುಚುವಲ್ ಫಂಡ್
ಹೂಡಿಕೆಯಲ್ಲಿ ಇನ್ನೂ ಒಂದು ಪ್ರಮುಖ ಅಂಶ ಇದೆ. ಅದು ಕಾಂಪೌಂಡಿಂಗ್ ಎಫೆಕ್ಟ್. ನಿಮ್ಮ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಬೀಳುವಂತೆ, ಹೂಡಿಕೆಯಲ್ಲೂ ಕೂಡ ನಿಮ್ಮ ಹಣಕ್ಕೆ ಬರುವ ಲಾಭ, ಆ ಲಾಭಕ್ಕೂ ಲಾಭ ಹೀಗೆ ಹಣ ಬೆಳೆಯುತ್ತಾ ಹೋಗುತ್ತದೆ.
ಇದನ್ನೂ ಓದಿ: ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?
ನೀವು ಮ್ಯುಚುವಲ್ ಫಂಡ್ ಎಸ್ಐಪಿಯಲ್ಲಿ ಹೆಚ್ಚೆಚ್ಚು ಅವಧಿ ಹೂಡಿಕೆ ಮಾಡಿದಷ್ಟೂ ಹಣ ಬೆಳೆಯುವ ವೇಗ ಹೆಚ್ಚುತ್ತಾ ಹೋಗುತ್ತದೆ. ನಿಮ್ಮ ಹೂಡಿಕೆ ಮೊತ್ತ ದ್ವಿಗುಣಗೊಳ್ಳುವ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ