ಹೂಡಿಕೆ
ಷೇರುಪೇಟೆಯಲ್ಲಿ ವ್ಯವಹಾರ ನಡೆಸಿದವರೆಲ್ಲರೂ ಶ್ರೀಮಂತರಾಗುವುದಿಲ್ಲ. ಅಥವಾ ಎಲ್ಲವನ್ನೂ ಕಳೆದುಕೊಂಡು ಬಿಕಾರಿಗಳೂ ಆಗುವುದಿಲ್ಲ. ಮಾರುಕಟ್ಟೆಯ ಏರಿಳಿತ, ಹೂಡಿಕೆ ಮಾಡಿದ ಕಂಪನಿಯ ಏರಿಳಿತ, ಭವಿಷ್ಯದ ದಾರಿ ಇವೆಲ್ಲವನ್ನೂ ತಕ್ಕಮಟ್ಟಿಗೆ ಅಂದಾಜಿಸಬಲ್ಲವರು ವೈಯಕ್ತಿಕವಾಗಿ ಷೇರುಗಳ ಮೇಲೆ ಹೂಡಿಕೆ ಮಾಡಬಹುದು. ಇಂಥ ಕೆಲಸಕ್ಕೆಂದೇ ಇರುವ ಪರಿಣಿತ ಸ್ಟಾಕ್ ಬ್ರೋಕರ್ಗಳ (Stock Brokers) ಮೂಲಕವೂ ಷೇರುಗಳ ಮೇಲೆ ಹಣ ಹೂಡಬಹುದು. ಇನ್ನು, ಮ್ಯೂಚುವಲ್ ಫಂಡ್ (Mutual Fund) ಮೇಲೆ ಹಣ ಹಾಕುವುದು ಷೇರುಪೇಟೆ ವ್ಯವಹಾರದಲ್ಲಿ ಸೇಫ್ ಮಾರ್ಗ ಎಂದು ಹೇಳಲಾಗುತ್ತದೆ.
ಅಷ್ಟಕ್ಕೂ ಮ್ಯೂಚುವಲ್ ಫಂಡ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ನೂರಾರು ಮ್ಯೂಚುವಲ್ ಫಂಡ್ಗಳಿದ್ದು, ಇವು ಷೇರುಪೇಟೆಯಲ್ಲಿ ವಿವಿಧ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಅದಕ್ಕೆಂದೇ ಷೇರುಪೇಟೆ, ಮತ್ತು ಹಣಕಾಸು ಹಾಗೂ ಆರ್ಥಿಕ ಮಾರುಕಟ್ಟೆಯ ಸೂಕ್ಷ್ಮತೆಗಳನ್ನು ಬಲ್ಲಂತಹ ತಜ್ಞರನ್ನು ಮ್ಯೂಚುವಲ್ ಫಂಡ್ಗಳು ನೇಮಿಸಿಕೊಳ್ಳುತ್ತವೆ.
ಇದನ್ನೂ ಓದಿ: Yes Bank: ಯೆಸ್ ಬ್ಯಾಂಕ್ ಷೇರುಗಳನ್ನು ಮನಬಂದಂತೆ ಮಾರುತ್ತಿರುವ ಜನರು; ಯಾಕಿಷ್ಟು ನೂಕುನುಗ್ಗುಲು?
ಮ್ಯೂಚುವಲ್ ಫಂಡ್ಗಳು ಎಂಥ ಷೇರುಗಳಲ್ಲಿ ಹೂಡಿಕೆ ಮಾಡಬೇಕೆಂದು ಯಾವ ಮಾನದಂಡ ಅನುಸರಿಸುತ್ತವೆ ಎಂಬುದೂ ಕುತೂಹಲದ ಸಂಗತಿ. ನಿರ್ದಿಷ್ಟ ಕಾಲಾವಧಿಯಲ್ಲಿ ವ್ಯವಹಾರ ಮತ್ತು ಲಾಭ ಆರೋಗ್ಯಕರ ಮಟ್ಟದಲ್ಲಿರುವ ಕಂಪನಿಗಳನ್ನು ನೋಡಿ ಹೂಡಿಕೆಗೆ ಆಯ್ಕೆ ಮಾಡಲಾಗುತ್ತದೆ. 2018ರಿಂದ 2022ರ ಅವಧಿಯಲ್ಲಿ ಸ್ಥಿರ ಬೆಳವಣಿಗೆ ಕಂಡ ಇಂಥ ಕೆಲ ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಕಂಪನಿಗಳು ಮತ್ತು ಇವುಗಳ ಷೇರುಗಳಲ್ಲಿ ಎಷ್ಟು ಮ್ಯೂಚುವಲ್ ಫಂಡ್ಗಳು ಹೂಡಿಕೆ ಮಾಡಿವೆ ಎಂಬ ಮಾಹಿತಿ ಇಲ್ಲಿದೆ….
- ಆಯಿಲ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 29. ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 11
- ಅಜಂತ ಫಾರ್ಮ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 12; ಹೂಡಿಕೆ ಮಾಡಿರುವ ಮ್ಯುಚುವಲ್ ಫಂಡ್ಗಳ ಸಂಖ್ಯೆ 48
- ಇಂಡಿಯನ್ ಎನರ್ಜಿ ಎಕ್ಸ್ಚೇಂಜ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 17; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 15
- ಅಫಲ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 90; ಹೂಡಿಕೆ ಮಾಡಿರುವ ಮ್ಯುಚುವಲ್ ಫಂಡ್ಗಳ ಸಂಖ್ಯೆ 27
- ಜಿಂದಾಲ್ ಸ್ಟೀಲ್ ಅಂಡ್ ಪವರ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 23; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 75
- ಫಿನೋಲೆಕ್ಸ್ ಇಂಡಸ್ಟ್ರೀಸ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 13; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 19.
- ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಆಫ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 25; ಹೂಡಿಕೆಯಾಗಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 55
- ಅಬ್ಬಾಟ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 11; ಹೂಡಿಕೆ ಆದ ಮ್ಯೂಚುವಲ್ ಫಂಡ್ಗಳ ಸಂಖ್ಯೆ 72.
- ಗೇಟ್ವೇ ಡಿಸ್ಟ್ರಿಪಾರ್ಕ್ಸ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 16; ಹೂಡಿಕೆಯಾದ ಮ್ಯೂಚುವಲ್ ಫಂಡ್ಗಳ ಸಂಖ್ಯೆ 26
- ಪ್ರೂಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸಸ್: ಆದಾಯ ಹೆಚ್ಚಳ ಶೇ. 22; ಹೂಡಿಕೆಯಾದ ಮ್ಯೂಚುವಲ್ ಫಂಡ್ಗಳ ಸಂಖ್ಯೆ 23
- ಬಾಯೆರ್ ಕ್ರಾಪ್ಸೈನ್ಸ್: ಆದಾಯ ಹೆಚ್ಚಳ ಶೇ. 19; ಹೂಡಿಕೆ ಮಾಡಿರುವ ಮ್ಯೂಚುವಲ್ ಪಂಡ್ಗಳ ಸಂಖ್ಯೆ 24
- ಗುಜರಾತ್ ಗ್ಯಾಸ್: ಆದಾಯ ಹೆಚ್ಚಳ ಶೇ. 28; ಮ್ಯುಚವಲ್ ಫಂಡ್ ಸಂಖ್ಯೆ 87
- ಗ್ಲ್ಯಾಂಡ್ ಫಾರ್ಮಾ: ಆದಾಯ ಹೆಚ್ಚಳ ಶೇ. 28; ಮ್ಯೂಚುವಲ್ ಫಂಡ್ಗಳು 98
- ಆಸ್ಟ್ರಾಲ್: ಆದಾಯ ಹೆಚ್ಚಳ ಶೇ. 28; ಹೂಡಿಕೆಯಾಗಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 65
- ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಆದಾಯ ಹೆಚ್ಚಳ ಶೇ. 35; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 52.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ