ಹಣದುಬ್ಬರ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೆಲ ತಿಂಗಳು ಕಾಲ ಸತತವಾಗಿ ರೆಪೋ ದರ ಏರಿಸಿದ ಪರಿಣಾಮ ಬಡ್ಡಿ ದರ 250 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಾಯಿತು. ಸಹಜವಾಗಿ ಬ್ಯಾಂಕ್ನ ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿ ದರಗಳೂ ಹೆಚ್ಚಾಗಿವೆ. ನಿಶ್ಚಿತ ಠೇವಣಿಗಳು ಮತ್ತೆ ಬೇಡಿಕೆ ಪಡೆದಿವೆ. ಉಳಿತಾಯದ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ನಿಶ್ಚಿತ ಠೇವಣಿಗಳು ಈಗಲೂ ಜನಸಾಮಾನ್ಯರ ನೆಚ್ಚಿನ ಸಾಧನಗಳಾಗಿವೆ. ತುಸು ಹೆಚ್ಚು ರಿಸ್ಕ್ ಎನಿಸುವ ಷೇರುಗಳ ಮೇಲಿನ ಹೂಡಿಕೆ, ಮ್ಯೂಚುವಲ್ ಫಂಡ್, ಎಸ್ಐಪಿಗಿಂತ ನಿಶ್ಚಿತ ಠೇವಣಿ ಯೋಜನೆಗಳು ಹೆಚ್ಚು ಸುರಕ್ಷಿತ ಎನಿಸುವುದರಿಂದ ಜನರ ಒಲವು ಎಫ್ಡಿಯತ್ತಲೇ ಹೆಚ್ಚಿದೆ. ಈಗ ಅಂಚೆ ಕಚೇರಿಗಳಲ್ಲೂ ನಿಶ್ಚಿತ ಠೇವಣಿ (Term Deposits) ಯೋಜನೆಗಳಿವೆ. ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿನ ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಬಡ್ಡಿ ದರದಲ್ಲಿ ಅಂತ ವ್ಯತ್ಯಾಸ ಇಲ್ಲದು. ಆದರೂ ಕೂಡ ಅಂಚೆ ಕಚೇರಿಯಲ್ಲಿನ ಎಫ್ಡಿ ಸ್ಕೀಮ್ಗಳು ತುಲನಾತ್ಮಕವಾಗಿ ಉತ್ತಮ ಎಂದು ಪರಿಗಣಿತವಾಗಿವೆ. ಬ್ಯಾಂಕ್ಗಿಂತ ಅಂಚೆ ಕಚೇರಿ ಎಫ್ಡಿಗಳು ಯಾಕೆ ಉತ್ತಮ ಎಂಬ ಮಾಹಿತಿ ಇಲ್ಲಿದೆ…
ಪೋಸ್ಟ್ ಆಫೀಸ್ನಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 6.8ರಿಂದ 7.5ರವರೆಗೂ ಬಡ್ಡಿ ಕೊಡಲಾಗುತ್ತದೆ. ಬ್ಯಾಂಕುಗಳಲ್ಲಿ ಎಫ್ಡಿಗಳಿಗೆ ನಿರ್ದಿಷ್ಟ ಬಡ್ಡಿ ಎಂಬುದಿಲ್ಲ. ಒಂದೊಂದು ಬ್ಯಾಂಕ್ನಲ್ಲೂ ಬಡ್ಡಿ ದರದಲ್ಲಿ ವ್ಯತ್ಯಾಸ ಇರುತ್ತದೆ. ಕೆಲ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 9ರವರೆಗೂ ಬಡ್ಡಿ ಕೊಡಲಾಗುತ್ತದೆ. ಕೆಲ ಬ್ಯಾಂಕುಗಳಲ್ಲಿ ಬಡ್ಡಿ ಶೇ. 7ಕ್ಕೆ ಸೀಮಿತವಾಗಬಹುದು.
ಪೋಸ್ಟ್ ಆಫೀಸ್ ಸ್ಕೀಮ್ಗಳು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಹೀಗಾಗಿ, ನೀವು ಪೋಸ್ಟ್ ಆಫೀಸ್ನಲ್ಲಿ ಇರಿಸುವ ಉಳಿತಾಯ ಹಣ ಬಹುತೇಕ ಸುರಕ್ಷಿತ ಎಂದು ಭಾವಿಸಬಹುದು. ಈ ಅಂಚೆ ಕಚೇರಿ ಯೋಜನೆಗಳಿಗೆ ಸರ್ಕಾರವೇ ಗ್ಯಾರಂಟಿ.
ಇದನ್ನೂ ಓದಿ: Chanakya Niti: ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಚಾಣಕ್ಯ ನೀಡಿದ ಈ ಸಲಹೆಗಳನ್ನು ಅನುಸರಿಸಿ
ಇನ್ನು, ಬ್ಯಾಂಕ್ ಎಫ್ಡಿಯಾದರೆ ಇದಕ್ಕೆ ಆ ಬ್ಯಾಂಕೇ ಜವಾಬ್ದಾರಿ. ಬ್ಯಾಂಕ್ ದಿವಾಳಿಯಾದರೆ ಗ್ರಾಹಕರ ಹಣಕ್ಕೆ ಖಾತ್ರಿ ಎಂಬುದಿರುವುದಿಲ್ಲ. ಬ್ಯಾಂಕ್ನಲ್ಲಿ ಇರಿಸುವ ಎಫ್ಡಿಯಲ್ಲಿ 5 ಲಕ್ಷ ರೂವರೆಗಿನ ಮೊತ್ತಕ್ಕೆ ಆರ್ಬಿಐ ವಿಮಾ ಗ್ಯಾರಂಟಿ ಒದಗಿಸುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಅನಿಶ್ಚಿತತೆ ಎದುರಾಗಬಹುದು. ಅಲ್ಲದೇ, ಆರ್ಬಿಐ ರೆಪೋ ದರ ಇಳಿಸಿದರೆ ಬ್ಯಾಂಕು ಕೂಡ ಬಡ್ಡಿ ದರಗಳನ್ನು ಇಳಿಕೆ ಮಾಡಬಹುದು.
ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿಗಳನ್ನು 10 ವರ್ಷಗಳವರೆಗೂ ಇರಿಸಬಹುದು. ಪೋಸ್ಟ್ ಆಫೀಸ್ನಲ್ಲಿ ಗರಿಷ್ಠ ಅವಧಿ 5 ಮಾತ್ರ.
ತೆರಿಗೆ ಅನುಕೂಲತೆಯ ವಿಷಯಕ್ಕೆ ಬಂದರೆ ಬ್ಯಾಂಕ್ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿಗಳು ಬಹುತೇಕ ಸಮಸ್ಥಿತಿಯಲ್ಲಿವೆ. ಎರಡರಲ್ಲೂ 1.5 ಲಕ್ಷ ರೂವರೆಗೂ ಟ್ಯಾಕ್ಸ್ ಬೆನಿಫಿಟ್ ಪಡೆಯಬಹುದು.
ಇದನ್ನೂ ಓದಿ: Gold Loans: ಶೇ. 10ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ? ಅತಿ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ಕೊಡುವ ಬ್ಯಾಂಕುಗಳಿವು
ಜನರು ತಮ್ಮ ಅಮೂಲ್ಯ ಗಳಿಕೆಯ ಉಳಿತಾಯ ಹಣವನ್ನು ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಮಹತ್ವದ ಸಂಗತಿಗಳನ್ನು ಪರಾಮರ್ಶಿಸುವುದು ಉಚಿತ. ಅಧಿಕ ಬಡ್ಡಿ ಅಥವಾ ಅಧಿಕ ರಿಟರ್ನ್ ಬರಬೇಕು ಎಂಬುದೊಂದೇ ಮಾನದಂಡವಾದರೆ ಅದರ ಹಿಂದೆ ಅಪಾಯವೂ ಸಂಯೋಜಿತವಾಗಿರುತ್ತದೆ ಎಂಬುದು ಗೊತ್ತಿರಬೇಕು.
ನಮ್ಮ ಹಣದ ಸುರಕ್ಷತೆ ಜೊತೆಗೆ ಉತ್ತಮ ಎನಿಸುವ ಬಡ್ಡಿ ದರ ಸಿಗುವುದು ಮುಖ್ಯ. ಈ ಲೆಕ್ಕ ನೋಡಿದಾಗ ಪೋಸ್ಟ್ ಆಫೀಸ್ ಸ್ಕೀಮ್ಗಳು ಬ್ಯಾಂಕುಗಳ ಎಫ್ಡಿಗಿಂತ ಉತ್ತಮ ಆಯ್ಕೆ ಆಗಬಹುದು.