ಐಟಿಆರ್ ಸಲ್ಲಿಸಿದ್ದರೂ ರೀಫಂಡ್ ಇನ್ನೂ ಬಂದಿಲ್ಲವಾ? ಸಂಭಾವ್ಯ ಕಾರಣಗಳೇನು, ರೀಫಂಡ ಸ್ಟೇಟಸ್ ಪರಿಶೀಲಿಸುವುದು ಹೇಗೆ, ಇತ್ಯಾದಿ ಮಾಹಿತಿ

|

Updated on: Aug 02, 2023 | 12:31 PM

Check Tax Refund Status: ಐಟಿ ರಿಟರ್ನ್ ಸಲ್ಲಿಸಿ ಹಲವು ದಿನಗಳಾದರೂ ರೀಫಂಡ್ ಇನ್ನೂ ಬಂದಿಲ್ಲದಿದ್ದರೆ ಆನ್​ಲೈನ್​ನಲ್ಲೇ ರೀಫಂಡ್ ಸ್ಟೇಟಸ್ ಪರಿಶೀಲಿಸಬಹುದು. ಐಟಿಆರ್​ನಲ್ಲಿ ನೀವು ದಾಖಲಿಸಿದ ಮಾಹಿತಿ ತಪ್ಪಾಗಿದ್ದರೆ ರೀಫಂಡ್ ಬಂದಿಲ್ಲದೇ ಹೋಗಿರಬಹುದು.

ಐಟಿಆರ್ ಸಲ್ಲಿಸಿದ್ದರೂ ರೀಫಂಡ್ ಇನ್ನೂ ಬಂದಿಲ್ಲವಾ? ಸಂಭಾವ್ಯ ಕಾರಣಗಳೇನು, ರೀಫಂಡ ಸ್ಟೇಟಸ್ ಪರಿಶೀಲಿಸುವುದು ಹೇಗೆ, ಇತ್ಯಾದಿ ಮಾಹಿತಿ
ಐಟಿಆರ್ ಫೈಲಿಂಗ್
Follow us on

ದಂಡರಹಿತವಾಗಿ ಐಟಿ ರಿಟರ್ನ್ ಫೈಲ್ ಮಾಡುವ ಗುಡುವು (ITR Filing) ಜುಲೈ 31ಕ್ಕೆ ಮುಗಿದಿದೆ. ಈಗ 5,000 ರೂವರೆಗೂ ದಂಡ ಕಟ್ಟು ಐಟಿಆರ್ ಸಲ್ಲಿಸಬೇಕಾಗುತ್ತದೆ. ಡೆಡ್​ಲೈನ್ ಒಳಗೆ 6.77 ಕೋಟಿಗೂ ಹೆಚ್ಚು ಮಂದಿ ರಿಟರ್ನ್ ಸಲ್ಲಿಸಿರುವುದು ತಿಳಿದುಬಂದಿದೆ. 2022-23ರ ಹಣಕಾಸು ವರ್ಷದಲ್ಲಿ ನೀವು ಕಟ್ಟಿರುವ ಒಟ್ಟು ಆದಾಯ ತೆರಿಗೆ ಮೊತ್ತ ಎಷ್ಟಿದೆ, ನಿಮಗೆ ಸಿಗುವ ತೆರಿಗೆ ರಿಯಾಯಿತಿ ಎಷ್ಟು ಎಂಬ ವಿವರವನ್ನು ಐಟಿಆರ್​ನಲ್ಲಿ ನೀಡುತ್ತೇವೆ. ನೀವು ಹೆಚ್ಚುವರಿ ತೆರಿಗೆ ಕಟ್ಟಿದ್ದರೆ ಅದನ್ನು ಆದಾಯ ತೆರಿಗೆ ಇಲಾಖೆ ರೀಫಂಡ್ ಮಾಡುತ್ತದೆ.

ಸಾಮಾನ್ಯವಾಗಿ ಐಟಿಆರ್ ಸಲ್ಲಿಕೆಯಾದ 7ರಿಂದ 120 ದಿನದೊಳಗೆ ರೀಫಂಡ್ ಬರುತ್ತದೆ. ಸಾಮಾನ್ಯವಾಗಿ ಐಟಿಆರ್ ಸಲ್ಲಿಸಿದ ಕೆಲವೇ ದಿನಗಳಲ್ಲಿ ರೀಫಂಡ್ ಬರುವುದುಂಟು. ಈಗ ನೀವು ಐಟಿಆರ್ ಸಲ್ಲಿಸಿ ತಿಂಗಳ ಮೇಲಾದರೂ ಇನ್ನೂ ರೀಫಂಡ್ ಬಂದಿಲ್ಲವಾ? ಈ ಕೆಳಕಾಣಿಸಿದ ಕೆಲ ಕ್ರಮಗಳನ್ನು ಪ್ರಯತ್ನಿಸಿ.

ರೀಫಂಡ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್​ಸೈಟ್ ಮತ್ತು ಎನ್​ಎಸ್​ಡಿಎಲ್ ವೆಬ್​ಸೈಟ್ ಮೂಲಕ ಆದಾಯ ತೆರಿಗೆಯ ರೀಫಂಡ್ ಸ್ಟೇಟಸ್ ಏನಿದೆ ಎಂಬುದನ್ನು ಪರಿಶೀಲಿಸಬಹುದು. ಅವೆರಡು ವೆಬ್​ಸೈಟ್​ಗಳ ವಿಳಾಸ ಇಲ್ಲಿದೆ:

ಇದನ್ನೂ ಓದಿ: ITR: ಆದಾಯ ತೆರಿಗೆ ರಿಟರ್ನ್ ಇನ್ನೂ ಎಷ್ಟು ಮಂದಿ ಫೈಲ್ ಮಾಡಿಲ್ಲ? ತಡವಾಗಿ ಸಲ್ಲಿಸಿದವರು ದಂಡ ಎಷ್ಟು ಕಟ್ಟಬೇಕು?

ಇನ್ಕಮ್ ಟ್ಯಾಕ್ಸ್ ವೆಬ್​ಸೈಟ್ ಮೂಲಕ ಐಟಿಆರ್ ಸ್ಟೇಟಸ್ ನೋಡುವುದು ಹೇಗೆ?

  • ಇನ್ಕಮ್ ಟ್ಯಾಕ್ಸ್ ವೆಬ್​ಸೈಟ್ ತೆರೆದು, ಲಾಗಿನ್ ಆಗಿ
  • ಲಾಗಿನ್ ಆಗಲು ಪ್ಯಾನ್ ನಂಬರ್ ನಿಮ್ಮ ಯೂಸರ್ ಐಡಿ ಆಗಿರುತ್ತದೆ.
  • ಲಾಗಿನ್ ಆದ ಬಳಿಕ ‘ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್’ ಅನ್ನು ಆಯ್ದುಇಕೊಂಡು, ‘ವ್ಯೂ ಫೈಲ್ಡ್ ರಿಟರ್ನ್ಸ್’ ಅನ್ನು ಕ್ಲಿಕ್ ಮಾಡಿ
  • ಇತ್ತೀಚೆಗೆ ಸಲ್ಲಿಕೆಯಾದ ಐಟಿಆರ್ ಅನ್ನು ಚೆಕ್ ಮಾಡಿ
  • ಬಳಿಕ ‘ವ್ಯೂ ಡೀಟೇಲ್ಸ್’ ಅನ್ನು ಆರಿಸಿದಾಗ ಐಟಿಆರ್​ನ ಸ್ಟೇಟಸ್ ತೋರಿಸುತ್ತದೆ.

ಎನ್​ಎಸ್​ಡಿಎಲ್ ವೆಬ್​ಸೈಟ್​ನಲ್ಲಿ ರೀಫಂಡ್ ಸ್ಟೇಟಸ್ ನೋಡುವುದು ಹೇಗೆ?

  • ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್​ಎಸ್​ಡಿಎಲ್) ವೆಬ್​ಸೈಟ್ ತೆರೆದು ಲಾಗಿನ್ ಅಗಿರಿ.
  • ಪ್ಯಾನ್ ನಂಬರ್ ಮತ್ತು ಅಸೆಸ್ಮೆಂಟ್ ನಂಬರ್ ಆಯ್ಕೆ ಮಾಡಿ
  • ಇಲ್ಲಿ ರೀಫಂಡ್ ಸ್ಟೇಟಸ್ ಕಾಣುತ್ತದೆ.
  • ಹಾಗೆಯೇ, ರೀಫಂಡ್ ಆಗಿದ್ದರೆ, ಫಾರ್ಮ್ 26ಎಎಸ್ ಫಾರ್ಮ್​ನಲ್ಲಿರುವ ‘ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ಸ್’ನಲ್ಲಿ ರೀಫಂಡ್ ಪೇಯ್ಡ್ ಎಂದು ತಿಳಿಸಿರಲಾಗುತ್ತದೆ.

ಇದನ್ನೂ ಓದಿ: ITR: ಡೆಡ್​ಲೈನ್ ಮುಗಿಯಿತು; ಈವರೆಗೆ ಸಲ್ಲಿಕೆಯಾದ ಐಟಿಆರ್​ಗಳೆಷ್ಟು? ಹೊಸ ದಾಖಲೆ ಎಂದು ಐಟಿ ಇಲಾಖೆ ಟ್ವೀಟ್

ರೀಫಂಡ್ ಬರದಿದ್ದರೆ ಏನು ಕಾರಣ ಇರಬಹುದು?

  • ಐಟಿಆರ್​ನಲ್ಲಿ ಬ್ಯಾಂಕ್ ಖಾತೆಯ ವಿವರ ತಪ್ಪಾಗಿದ್ದಿರಬಹುದು.
  • ಐಟಿಆರ್ ಫೈಲಿಂಗ್ ವೇಳೆ ಕೆಲ ಪ್ರಮುಖ ಮಾಹಿತಿ ನಮೂದಾಗುವುದು ತಪ್ಪಿಹೋಗಿರಬಹುದು.
  • ತೆರಿಗೆಪಾವತಿದಾರರು ನೀಡಿರುವ ಮಾಹಿತಿ ಸುಳ್ಳಾಗಿರಬಹುದು.
  • 26ಎಎಸ್​ನಲ್ಲಿ ಟಿಡಿಎಸ್ ವಿಚಾರದಲ್ಲಿ ನೀವು ನೀಡಿರುವ ಮಾಹಿತಿಗೂ ಬ್ಯಾಂಕ್ ಇತ್ಯಾದಿ ಟಿಡಿಎಸ್ ಕಡಿತಗಾರರು ಸಲ್ಲಿಸಿದ ಟಿಡಿಎಸ್ ರಿಟರ್ನ್​ನ ಮಾಹಿತಿಗೂ ತಾಳೆ ಆಗದೇ ಇದ್ದಿರಬಹುದು.
  • ನಿಮ್ಮ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ಇನ್ನೂ ಪ್ರೋಸಸ್ ಮಾಡದೇ ಇದ್ದಿರಬಹುದು.

ರೀಫಂಡ್ ಬರದಿದ್ದರೆ ಏನು ಮಾಡಬೇಕು?

  • ಆದಾಯ ತೆರಿಗೆ ಇಲಾಖೆಯಿಂದ ನಿಮ್ಮ ಐಟಿಆರ್ ಸಂಬಂಧ ಯಾವುದಾದರೂ ಇಮೆಲ್ ಬಂದಿದೆಯಾ ಪರಿಶೀಲಿಸಿ
  • ಐಟಿ ಇಲಾಖೆ ಯಾವುದಾದರೂ ಹೆಚ್ಚುವರಿ ಮಾಹಿತಿ ಕೋರಿದ್ದರೆ ಕೂಡಲೇ ಸ್ಪಂದಿಸಿ
  • ನೀವು ಫೈಲ್ ಮಾಡಿದ ಐಟಿಆರ್​ನಲ್ಲಿ ಬ್ಯಾಂಕ್ ಖಾತೆ ಇತ್ಯಾದಿ ಮಾಹಿತಿ ಸರಿಯಿದೆಯಾ ಎಂದು ಮತ್ತೊಮ್ಮೆ ಪರಿಶೀಲಿಸಿ. ತಪ್ಪಿದ್ದರೆ ಸರಿಪಡಿಸಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ