ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ (PAN- Permanent Account Number) ಎನ್ನುವುದು 10 ಅಂಕಿಗಳಿರುವ ಕಾರ್ಡ್ ಆಗಿದೆ. ಭಾರತದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಹಣಕಾಸು ವಹಿವಾಟು ನಡೆಸಲು ಮತ್ತು ತೆರಿಗೆ ಪಾವತಿಸಲು ಇದು ಅಗತ್ಯ ದಾಖಲೆಯಾಗಿದೆ. ದೇಶದ ಹಣಕಾಸು ಹರಿವಿನ ಮೇಲೆ ನಿಗಾ ಇರಿಸಲು ಈ ಪ್ಯಾನ್ ನಂಬರ್ಗಳು ಆದಾಯ ತೆರಿಗೆ ಇಲಾಖೆಗೆ ಬಹಳ ಸಹಾಯಕವಾಗುತ್ತವೆ. ಆಧಾರ್ನಷ್ಟೇ ಮಹತ್ವದ ದಾಖಲೆಯಾಗಿರುವ ಪ್ಯಾನ್ ಕಾರ್ಡ್ ಕೆಲವೊಮ್ಮೆ ಕಳೆದುಹೋಗುವ ಸಂಭವ ಇರುತ್ತದೆ. ಹಾಗೊಂದು ವೇಳೆ ಆದಲ್ಲಿ ಡೂಪ್ಲಿಕೇಟ್ ಪ್ಯಾನ್ ಪಡೆಯಬಹುದು. ಪ್ಯಾನ್ ರೀಪ್ರಿಂಟ್ ಪಡೆಯಬಹುದು. ಇ–ಪ್ಯಾನ್ ಪಡೆಯಬಹುದು. ಆನ್ಲೈನ್ನಲ್ಲಿ ಇ–ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡಬಹುದು.
ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡಲು ಹಲವು ಪ್ಲಾಟ್ಫಾರ್ಮ್ಗಳ ಆಯ್ಕೆಗಳಿವೆ. ಎನ್ಎಸ್ಡಿಎಲ್ ಪ್ಯಾನ್ ಪೋರ್ಟಲ್, ಯುಟಿಐಟಿಎಸ್ಎಲ್, ಆಧಾರ್, ಐಟಿ ಇಫೈಲಿಂಗ್ ವೆಬ್ಸೈಟ್ಗಳಲ್ಲಿ ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇಂಥ ಇ–ಪ್ಯಾನ್ ಕಾರ್ಡ್ಗಳನ್ನು ಮೂಲ ಪ್ಯಾನ್ ಕಾರ್ಡ್ನಂತೆಯೇ ಬಳಸಬಹುದು.
ಇದನ್ನೂ ಓದಿ: IT Returns: ಐಟಿ ರಿಟರ್ನ್ಸ್ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮೊದಲೇ ಪ್ಯಾನ್ ಕಾರ್ಡ್ ಹೊಂದಿರುವವರು ಇ–ಪ್ಯಾನ್ ಪಡೆಯಲು ಆಗುವುದಿಲ್ಲ. ಹೊಸದಾಗಿ ಪ್ಯಾನ್ ಕಾರ್ಡ್ಗೆ ಅರ್ಜಿ ಹಾಕಿ, ಅದು ಅಲಾಟ್ ಆಗಿದ್ದು, ಆ ಕಾರ್ಡ್ ಇನ್ನೂ ವಿಳಾಸ ತಲುಪದೇ ಇದ್ದ ಸಂದರ್ಭದಲ್ಲಿ ಅದರ ಇ ಪ್ರತಿಯನ್ನು ಆನ್ಲೈನ್ನಲ್ಲಿ ಪಡೆಯಬಹುದು. ಮೇಲೆ ಹೇಳಿದ ಪೋರ್ಟಲ್ಗಳಲ್ಲಿ ಅದರ ಸೌಲಭ್ಯಗಳು ಲಭ್ಯ ಇರಲಿವೆ.
ಎನ್ಎಸ್ಡಿಎಲ್ onlineservices.nsdl.com/paam/ReprintEPan.html ವೆಬ್ಸೈಟ್ಗೆ ಹೋಗಿ ಡೂಪ್ಲಿಕೇಟ್ ಪ್ಯಾನ್ ಪ್ರತಿ ಪಡೆಯಬಹುದು.
ಯುಟಿಐಟಿಎಸ್ಎಲ್ ಪೋರ್ಟಲ್ನಲ್ಲೂ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪ್ರಿಂಟ್ ಪಡೆಯಬಹುದು.
ಇನ್ನಷ್ಟು ಯುಟಿಲಿಟಿ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ ಮಾಡಿ