ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡಲು ಸಮಯ ಇಲ್ಲದವರಿಗೆ ಈಕ್ವಿಟಿ ಫಂಡ್ಗಳು (Equity Mutual funds) ಇದ್ದದ್ದರಲ್ಲಿ ಉತ್ತಮ ಆಯ್ಕೆ. ನಿಮ್ಮ ಹಣವನ್ನು ಬೆಳೆಸಲು ಈ ಮ್ಯುಚುವಲ್ ಫಂಡ್ ಉಪಯುಕ್ತ ಎನಿಸುತ್ತದೆ. ನೀವು ದೀರ್ಘಕಾಲದ ದೃಷ್ಟಿಯಿಂದ ಹೂಡಿಕೆ ಮಾಡುವುದು ಸೂಕ್ತ. ಈ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಎಸ್ಐಪಿ ಪ್ಲಾನ್ (SIP- sytematic investment plan) ಪಡೆಯಬಹುದು. ಇದರಿಂದ ನೀವು ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಹೋಗಬಹುದು. ಸಂಯಮ ಕಳೆದುಕೊಳ್ಳದೆ ಸುದೀರ್ಘ ಕಾಲ ಸ್ಥಿರವಾಗಿ ಪ್ರತೀ ತಿಂಗಳು ತಪ್ಪಿಸದೇ ಹಣ ಹೂಡಿಕೆ ಮಾಡುವುದು ಯಶಸ್ಸಿ ಮಂತ್ರ. ಅದರಲ್ಲೂ ಈಕ್ವಿಟಿ ಫಂಡ್ಗಳು ದೀರ್ಘಾವಧಿಯಲ್ಲಿ ಬಹಳ ಹೆಚ್ಚು ಲಾಭ ತಂದುಕೊಡಬಲ್ಲುವು.
ನೀವು ಎಷ್ಟು ವರ್ಷ ಕಾಲ ಎಷ್ಟು ಮೊತ್ತದ ಹೂಡಿಕೆ ಮಾಡುತ್ತೀರಿ, ಅದರಿಂದ ಎಷ್ಟು ರಿಟರ್ನ್ ಬರಬಹುದು ಎಂಬ ಒಂದು ಕಲ್ಪನೆ ಅಥವಾ ಅಂದಾಜು ಹೊಂದಿರಬೇಕು. ಮ್ಯೂಚುವಲ್ ಫಂಡ್ಗಳು 20 ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಶೇ. 12ರಿಂದ ಶೇ. 20ರ ವಾರ್ಷಿಕ ದರದಲ್ಲಿ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
ನೀವು ಎಸ್ಐಪಿ ನಡೆಸುವುದಾದರೆ ನಿಮ್ಮ ಹೂಡಿಕೆಯನ್ನು ಕ್ಷಿಪ್ರವಾಗಿ ಬೆಳೆಸಲು ಒಂದು ಉತ್ತಮ ತಂತ್ರ ಇದೆ. ನಿಮ್ಮ ಆದಾಯ ಪ್ರತೀ ವರ್ಷ ಹೆಚ್ಚಾಗುವ ಸಾಧ್ಯತೆ ಇದ್ದೇ ಇದೆ. ಶೇ. 5ರಿಂದ ಶೇ. 30ರವರೆಗೂ ನಿಮ್ಮ ಆದಾಯ ಹೆಚ್ಚಾಗಬಹುದು. ಅದಕ್ಕೆ ಅನುಗುಣವಾಗಿ ನಿಮ್ಮ ಎಸ್ಐಪಿ ಹೂಡಿಕೆಯ ಪ್ರಮಾಣವನ್ನೂ ಹೆಚ್ಚಿಸಬೇಕು. ಇದರಿಂದ ನಿಮ್ಮ ಹೂಡಿಕೆ ಬಹಳ ವೇಗವಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ
ನೀವು 100 ಕೋಟಿ ರೂ ಹಣ ಸೇರಿಸಬೇಕು ಎಂಬ ಗುರಿ ಹೊಂದಿದ್ದಲ್ಲಿ, ಅದನ್ನು ಈಡೇರಿಸಲು ಸಾಧ್ಯವಾಗುವ ಅಂಶಗಳನ್ನು ಗಮನಿಸಿ ನೋಡಿ. ಮೇಲೆ ತಿಳಿಸಿದ ರೀತಿಯಲ್ಲಿ ನಿಮ್ಮ ಹೂಡಿಕೆಯ ಪ್ರಮಾಣವನ್ನು ಒಂದು ವರ್ಷದಲ್ಲಿ ಶೇ. 20ರಷ್ಟು ಹೆಚ್ಚಿಸಲು ಸಾಧ್ಯವಾದರೆ 100 ಕೋಟಿ ರೂ ಗುರಿ ಈಡೇರಿಸುವುದು ಸುಲಭವಾಗುತ್ತದೆ.
ನಿಮ್ಮ ಈಕ್ವಿಟಿ ಮ್ಯೂಚುವಲ್ ಫಂಡ್ ಎಸ್ಐಪಿ ಒಂದು ವರ್ಷಕ್ಕೆ ಶೇ. 16ರಷ್ಟು ರಿಟರ್ನ್ ಕೊಡುತ್ತದೆಂದು ಭಾವಿಸಿದಲ್ಲಿ ನೀವು ತಿಂಗಳಿಗೆ 21,000 ರೂ ಎಸ್ಐಪಿ ಪ್ಲಾನ್ನಿಂದ ಆರಂಭಿಸಬಹುದು. ಹೀಗಾದಲ್ಲಿ 30 ವರ್ಷದ ಬಳಿಕ ನೀವು 100 ಕೋಟಿ ರೂ ಒಡೆಯರಾಗಬಲ್ಲಿರಿ.
ಗಮನಿಸಿ, ನೀವು ತಿಂಗಳಿಗೆ 21,000 ರೂ ಹಣದಿಂದ ಹೂಡಿಕೆ ಆರಂಭಿಸುತ್ತೀರಿ. ಒಂದು ವರ್ಷದ ಬಳಿಕ ನೀವು ತಿಂಗಳಿಗೆ ಕಟ್ಟುವ ಎಸ್ಐಪಿ ಮೊತ್ತ ಶೇ. 20ರಷ್ಟು ಹೆಚ್ಚಾಗಬೇಕು. ಅಂದರೆ ಎರಡನೇ ವರ್ಷದಲ್ಲಿ 25ರಿಂದ 26 ಸಾವಿರ ರೂನಷ್ಟು ಹಣವನ್ನು ಪ್ರತೀ ತಿಂಗಳು ಹೂಡಿಕೆ ಮಾಡಬೇಕು. 3ನೆ ವರ್ಷ ನಿಮ್ಮ ಮಾಸಿಕ ಹೂಡಿಕೆ 31,000 ರೂ ಆಗಬೇಕು. ಈ ರೀತಿ ವರ್ಷ ವರ್ಷಕ್ಕೆ ಹೂಡಿಕೆ ಹೆಚ್ಚಿಸುತ್ತಾ 30 ವರ್ಷ ಕಾಲ ಅದೇ ವೇಗ ಪಾಲನೆ ಮಾಡಬೇಕು.
ಇದನ್ನೂ ಓದಿ: ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?
ಅದಕ್ಕೆ ತಕ್ಕಂತೆ ನಿಮ್ಮ ಮ್ಯೂಚುವಲ್ ಫಂಡ್ ಶೇ. 16ರ ವಾರ್ಷಿಕ ದರದಲ್ಲಿ ರಿಟರ್ನ್ ಕೊಡಬೇಕು. ಇವೆಲ್ಲವೂ ನೀವು ನಿರೀಕ್ಷಿಸಿದಂತೆ ಆದಲ್ಲಿ 30 ವರ್ಷದಲ್ಲಿ 100 ಕೊಟಿ ರೂ ನಿಮ್ಮದಾಗಬಹುದು.
ನೀವು ವರ್ಷಕ್ಕೆ ಶೇ. 20 ಸಾಧ್ಯವಾಗದೇ ಹೋದರೂ ಶೇ. 5ರಷ್ಟನ್ನಾದರೂ ಹೆಚ್ಚಿಸುತ್ತಾ ಹೋಗಬಹುದು. ಹೆಚ್ಚಿಸುತ್ತಾ ಹೋಗಬಹುದು. ಒಟ್ಟಾರೆ ಈ ಮೂರು ಅಂಶಗಳು ನಿಮ್ಮ ಸಂಪತ್ತುವೃದ್ಧಿಗೆ ಬಹಳ ಸಹಾಯಕವಾಗುತ್ತವೆ.
ಇದನ್ನೂ ಓದಿ: ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ
(ಗಮನಿಸಿ: ಮ್ಯೂಚುವಲ್ ಫಂಡ್ಗಳಿಂದ ನಿರೀಕ್ಷಿಸಿದಷ್ಟು ಆದಾಯ ಬರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ರಿಟರ್ನ್ ಸಿಗುವುದು ಏರುಪೇರಾಗಬಹುದು. ಹೂಡಿಕೆ ಮಾಡುವ ಮುನ್ನ ಹಣಕಾಸು ತಜ್ಞರ ಜೊತೆ ಸಮಾಲೋಚಿಸುವುದು ಒಳಿತು.)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ