ಇಪಿಎಫ್ ಎಂಬುದು ಉದ್ಯೋಗಿಗಳ ನಿವೃತ್ತಿ ನಂತರದ ಜೀವನಭದ್ರತೆಗೆಂದು (Provident Fund) ಸರ್ಕಾರ ರೂಪಿಸಿರುವ ಸ್ಕೀಮ್. ಉದ್ಯೋಗಿ ಪಿಂಚಣಿ ನಿಧಿ ಯೋಜನೆ ಎಲ್ಲಾ ಉದ್ಯೋಗಿಗಳಿಗೂ ಅನ್ವಯ ಆಗುತ್ತದೆ. ಇದರ ಖಾತೆಗೆ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣ ಹಾಗೂ ಅಷ್ಟೇ ಪ್ರಮಾಣದ ಹಣ ಸಂಸ್ಥೆಯಿಂದ ಪ್ರತೀ ತಿಂಗಳು ಜಮೆ ಆಗುತ್ತಿರುತ್ತದೆ. ಈ ಖಾತೆಗೆ ಸರ್ಕಾರ ಪ್ರತೀ ವರ್ಷವೂ ಬಡ್ಡಿ ಹಣ ಸೇರಿಸುತ್ತದೆ. ಹೀಗೆ, ನೀವು ನಿವೃತ್ತರಾಗುವವರೆಗೂ ಇಪಿಎಫ್ ಖಾತೆಯಲ್ಲಿರುವ ಹಣ ನಿಮಗರಿವಿಲ್ಲದಂತೆ ಬೆಳೆಯುತ್ತಾ ಹೋಗಿ, ನಿವೃತ್ತಿಯ ವೇಳೆ ಒಳ್ಳೆಯ ಮೊತ್ತ ಶೇಖರಣೆ ಆಗುತ್ತದೆ. ಆದರೆ, ಕೆಲವೊಮ್ಮೆ ನಮ್ಮ ಜೀವನದಲ್ಲಿ ತುರ್ತು ಅಗತ್ಯಗಳು ಎದುರಾಗಿ ನಮಗೆ ಹಣದ ಕೊರತೆ ಬರಬಹುದು. ಅಂತಹ ಸಂದರ್ಭಗಳಲ್ಲಿ ಇಪಿಎಫ್ ನಿಧಿಯಲ್ಲಿರುವ ನಮ್ಮ ಹಣದಲ್ಲಿ ಒಂದಷ್ಟು ಭಾಗವನ್ನು ಪಡೆಯುವ ಅವಕಅಶ ಇದೆ.
ನಿರುದ್ಯೋಗ, ಮದುವೆ, ಶಿಕ್ಷಣ, ಗೃಹಸಾಲ ಮರುಪಾವತಿ ಇತ್ಯಾದಿ ಕೆಲ ಕಾರಣಗಳಿಗೆ ಇಪಿಎಫ್ ಹಣ ಹಿಂಪಡೆಯುವ ಅವಕಾಶ ಉದ್ಯೋಗಿಗಳಿಗೆ ಇರುತ್ತದೆ. ಈ ರೀತಿ ಹಣ ಹಿಂಪಡೆಯಬೇಕೆಂದರೆ ಉದ್ಯೋಗಿಗಳು ಕನಿಷ್ಠ 5 ವರ್ಷವಾದರೂ ಪಿಎಫ್ ಸೌಲಭ್ಯ ಹೊಂದಿರಬೇಕು. ಪಿಎಫ್ ಹಣ ವಿತ್ಡ್ರಾ ಮಾಡಲು ಇರುವ ವಿವಿಧ ಕಾರಣಗಳ ಪೈಕಿ ಮನೆ ನಿರ್ಮಾಣವೂ ಒಂದು. ಮನೆ ಖರೀದಿಸಿದಾಗ ಅಥವಾ ಮನೆ ಕಟ್ಟುವಾಗ ನೀವು ಪಿಎಫ್ ಖಾತೆಯಿಂದ ಮುಂಗಡವಾಗಿ ಹಣ ಹೇಗೆ ಪಡೆಯಬಹುದು ಎಂಬ ವಿವರ ಇಲ್ಲಿದೆ:
ಮೊದಲಿಗೆ ಇಪಿಎಫ್ನ ಪೋರ್ಟಲ್ ಅಥವಾ ಉಮಂಗ್ ಆ್ಯಪ್ಗೆ ಹೋಗಿ ನಿಮ್ಮ ಯುಎಎನ್ ನಂಬರ್ ಬಳಸಿ ಲಾಗಿನ್ ಆಗಬೇಕು. ಅಲ್ಲಿ ಇಪಿಎಫ್ ವಿತ್ಡ್ರಾಯಲ್ ಆಪ್ಷನ್ ಕಾಣಬಹುದು. ಅದನ್ನು ಕ್ಲಿಕ್ ಮಾಡಿ, ಫಾರ್ಮ್ 31 ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?
ನೀವು ಕೆಲಸ ಮಾಡುವ ಸಂಸ್ಥೆಗೆ ಫಾರ್ಮ್ 31 ಅನ್ನು ಸಲ್ಲಿಸಬೇಕು. ಅವರು ಇದಕ್ಕೆ ಒಪ್ಪಿ ಇಪಿಎಫ್ಒಗೆ ಅದನ್ನು ರವಾನಿಸುತ್ತಾರೆ. ಇದಾದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಇಪಿಎಫ್ಒನಿಂದ ಹಣ ಜಮೆ ಆಗುತ್ತದೆ.
ಇದನ್ನೂ ಓದಿ: EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ
ನಿಮ್ಮ ಪಿಎಫ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಅಡ್ವಾನ್ಸ್ನಲ್ಲಿ ವಿತ್ಡ್ರಾ ಮಾಡಲು ಆಗುವುದಿಲ್ಲ. ಮನೆ ಕಟ್ಟಲು ಎಷ್ಟು ಹಣ ಹಿಂಪಡೆಯಬಹುದು ಎಂಬುದು ಮೂರ್ನಾಲ್ಕು ಅಂಶಗಳ ಮೇಲೆ ಅವಲಂಬಿತವಾಗುತ್ತದೆ.
ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಹಣವನ್ನು ಮಾತ್ರ ನೀವು ಅಡ್ವಾನ್ಸ್ ಆಗಿ ಪಿಎಫ್ ಖಾತೆಯಿಂದ ಹಿಂಪಡೆಯಲು ಸಾಧ್ಯ. ನೀವು ಗೃಹ ನಿರ್ಮಾಣಕ್ಕೆ ಒಮ್ಮೆ ಪಿಎಫ್ ಅಡ್ವಾನ್ಸ್ ಪಡೆದರೆ ಇನ್ನೊಮ್ಮೆ ಆ ಕಾರಣಕ್ಕೆ ಮತ್ತೆ ವಿತ್ಡ್ರಾ ಮಾಡಲು ಆಗುವುದಿಲ್ಲ.