Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Plans: ಪಿಪಿಎಫ್, ಇಪಿಎಫ್, ವಿಪಿಎಫ್- ಈ ಮೂರರಲ್ಲಿ ಯಾವುದು ಬೆಟರ್; ನಿಮಗೆ ಸೂಕ್ತವಾದುದು ಯಾವುದು? ಇಲ್ಲಿದೆ ಹೋಲಿಕೆ

EPF vs PPF vs VPF: ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸ್ವಯಂಪ್ರೇರಿತ ಪಿಂಚಣಿ ನಿಧಿ (ವಿಪಿಎಫ್) ನಮ್ಮ ನಿವೃತ್ತಿ ಬದುಕಿಗೆ ಆಧಾರ ನೀಡಬಲ್ಲ ಸ್ಕೀಮ್​ಗಳಾಗಿವೆ. ಇದರಲ್ಲಿ ಯಾವುದು ನಮಗೆ ಸೂಕ್ತ?

PF Plans: ಪಿಪಿಎಫ್, ಇಪಿಎಫ್, ವಿಪಿಎಫ್- ಈ ಮೂರರಲ್ಲಿ ಯಾವುದು ಬೆಟರ್; ನಿಮಗೆ ಸೂಕ್ತವಾದುದು ಯಾವುದು? ಇಲ್ಲಿದೆ ಹೋಲಿಕೆ
ಉದ್ಯೋಗಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2023 | 11:15 AM

ಈಗ ಹಣ ಹೂಡಿಕೆಗೆ ಹಲವು ಆಯ್ಕೆಗಳಿವೆ. ಎಸ್​ಐಪಿಗಳು ಟ್ರೆಂಡಿಂಗ್​ನಲ್ಲಿವೆ. ಆದರೆ, ಸರ್ಕಾರಿ ಹೂಡಿಕೆ ಸಾಧನಗಳ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ. ಸರ್ಕಾರಿ ಪ್ರಾಯೋಜಿತ ಮತ್ತು ಗ್ಯಾರಂಟಿ ಇರುವ ನಿವೃತ್ತಿ ಯೋಜನೆಗಳಿಗೆ ಬೇಡಿಕೆ ಇದೆ. ಉದ್ಯೋಗಿ ಭವಿಷ್ಯ ನಿಧಿ (EPF- Employee Provident Fund), ಸಾರ್ವಜನಿಕ ಭವಿಷ್ಯ ನಿಧಿ (PPF- Public Provident Fund), ಸ್ವಯಂಪ್ರೇರಿತ ಪಿಂಚಣಿ ನಿಧಿ (VPF- Voluntary Provident Fund) ನಮ್ಮ ನಿವೃತ್ತಿ ಬದುಕಿಗೆ ಆಧಾರ ನೀಡಬಲ್ಲ ಸ್ಕೀಮ್​ಗಳಾಗಿವೆ. ಇದರಲ್ಲಿ ಯಾವುದು ನಮಗೆ ಸೂಕ್ತ? ಇದನ್ನು ತಿಳಿಯುವ ಮುನ್ನ ಈ ಸ್ಕೀಮ್​ಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ.

ಇಪಿಎಫ್ ಎಂದರೇನು?

ಇದು ಪ್ರತಿಯೊಬ್ಬ ಉದ್ಯೋಗಿಗೂ ಸಿಗುವ ಒಂದು ಸ್ಕೀಮ್. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯು ಈ ಸ್ಕೀಮ್ ಅಳವಡಿಸಬೇಕು. ಎಲ್ಲಾ ಉದ್ಯೋಗಿಗೂ ಇಪಿಎಫ್ ಖಾತೆ ತೆರೆಯಬೇಕು. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣವನ್ನು ಇಪಿಎಫ್ ಖಾತೆಗೆ ಹಾಕಬೇಕು. ಸಂಸ್ಥೆಯೂ ಅಷ್ಟೇ ಪ್ರಮಾಣದ ಹಣವನ್ನು ಈ ಖಾತೆಗೆ ಜಮೆ ಮಾಡಬೇಕು. ಹೀಗೆ ಇದರಲ್ಲಿ ಜಮೆಯಾದ ಹಣಕ್ಕೆ ಸರ್ಕಾರ ಪ್ರತೀ ವರ್ಷವೂ ಬಡ್ಡಿ ಸೇರಿಸಿ ತುಂಬುತ್ತದೆ.

ಇಪಿಎಫ್ ಎಂಬುದು ಉದ್ಯೋಗಿ ನಿವೃತ್ತಿರಾದ ಬಳಿಕ ಅವರ ಹಣಕಾಸು ಭದ್ರತೆ ಅಥವಾ ಪಿಂಚಣಿಗೆಂದು ರೂಪಿಸಲಾಗಿರುವ ಸ್ಕೀಮ್. ಇದಕ್ಕೆ ತೆರಿಗೆ ಲಾಭವೂ ಉಂಟು. ತುರ್ತು ಅಗತ್ಯಬಿದ್ದರೆ ಮಧ್ಯದಲ್ಲಿ ಇಪಿಎಫ್ ಖಾತೆಯಿಂದ ಮುಂಗಡ ಹಣ ಹಿಂಪಡೆಯಲು ಸಾಧ್ಯ.

ಇದನ್ನೂ ಓದಿTips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ

ವಿಪಿಎಫ್ ಎಂದರೇನು?

ಇಪಿಎಫ್ ಖಾತೆ ಇರುವ ಉದ್ಯೋಗಿಗಳಿಗೆ ಸಿಗುವ ಹೆಚ್ಚುವರಿ ಆಯ್ಕೆ ಇದು. ಪ್ರಸಕ್ತ ಇಪಿಎಫ್ ಖಾತೆಗೆ ಉದ್ಯೋಗಿಯ ಬೇಸಿಕ್ ಸಂಬಳದ ಶೇ. 12ರಷ್ಟು ಹಣವನ್ನು ತುಂಬಲಾಗುತ್ತದೆ. ಉದ್ಯೋಗಿಗಳು ಇಚ್ಛಿಸಿದರೆ ತಮ್ಮ ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಇದರಿಂದ ಖಾತೆಗೆ ಹಣ ಸಂಗ್ರಹ ಹೆಚ್ಚುತ್ತದೆ.

ಪಿಪಿಎಫ್ ಎಂದರೇನು?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂಬುದೂ ಕೂಡ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂಬ ದೃಷ್ಟಿಯಿಂದ ರೂಪಿಸಿರು ಯೋಜಜನೆ. ಉದ್ಯೋಗಿಗಳು ಮಾತ್ರವಲ್ಲ ಯಾವುದೇ ಸಾರ್ವಜನಿಕರು ಪಿಪಿಎಫ್​ನಲ್ಲಿ ಹೂಡಿಕೆ ಮಾಡಬಹುದು. ಪಿಪಿಎಫ್​ನ ಕನಿಷ್ಠ ಅವಧಿ 15ವರ್ಷದ್ದಾಗಿದೆ. ಇದಕ್ಕೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿCrorepati: 10,000 ರೂ ಎಸ್​ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ

ವಿಪಿಎಫ್, ಇಪಿಎಫ್, ಪಿಪಿಎಫ್ ಈ ಮೂರರಲ್ಲಿ ಯಾವುದು ಉತ್ತಮ?

ಈ ಮೂರು ಸ್ಕೀಮ್​ಗಳು ಉತ್ತಮವೇ. ಪಿಪಿಎಫ್​ನಲ್ಲಿ ನಿಮಗೆ ಸಿಗುವ ಬಡ್ಡಿ ಎಷ್ಟೇ ಮೊತ್ತದ್ದಾದರೂ ತೆರಿಗೆ ಅನ್ವಯ ಆಗುವುದಿಲ್ಲ.

ಇಪಿಎಫ್ ಮತ್ತು ವಿಪಿಎಫ್​ನಲ್ಲಿ ನೀವು ಗಳಿಸುವ ತೆರಿಗೆ ವರ್ಷಕ್ಕೆ 2.5 ಲಕ್ಷ ರೂ ಮೇಲ್ಪಟ್ಟಿದ್ದರೆ ಮಾತ್ರ ಆ ಹೆಚ್ಚುವರಿ ಬಡ್ಡಿ ಹಣಕ್ಕೆ ತೆರಿಗೆ ಬೀಳುತ್ತದೆ. ಸರ್ಕಾರಿ ನೌಕರರಾದರೆ 5 ಲಕ್ಷ ರೂವರೆಗೂ ಬಡ್ಡಿ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ