LIC Jeevan Azad: ಬಿಸಿದೋಸೆಯಂತೆ ಸೇಲ್ ಆಗುತ್ತಿದೆ ಎಲ್​ಐಸಿಯ ಹೊಸ ಪಾಲಿಸಿ ಜೀವನ್ ಆಜಾದ್; 20 ವರ್ಷದ ಪ್ಲಾನ್​ಗೆ ಪ್ರೀಮಿಯಮ್ ಕಟ್ಟುವುದು 12 ವರ್ಷ ಮಾತ್ರ

|

Updated on: May 09, 2023 | 2:37 PM

Best Insurance Plans: ಎಲ್​ಐಸಿಯ ಹೊಸತನಕ್ಕೆ ಸಾಕ್ಷಿ ಅದರ ಎಲ್​ಐಸಿ ಜೀವನ್ ಆಜಾದ್ ಪಾಲಿಸಿ. ಇದು 2023ರ ಜನವರಿಯಲ್ಲಿ ಮಾರುಕಟ್ಟೆಗೆ ಬಂದಿದ್ದು, ಕೆಲವೇ ತಿಂಗಳಲ್ಲಿ ಗಣನೀಯವಾಗಿ ಮಾರಾಟ ಕಂಡಿದೆ. ಎಲ್​ಐಸಿ ಜೀವನ್ ಆಜಾದ್ ಒಂದು ನಾನ್ ಲಿಂಕ್ಡ್ ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿ ಆಗಿದೆ.

LIC Jeevan Azad: ಬಿಸಿದೋಸೆಯಂತೆ ಸೇಲ್ ಆಗುತ್ತಿದೆ ಎಲ್​ಐಸಿಯ ಹೊಸ ಪಾಲಿಸಿ ಜೀವನ್ ಆಜಾದ್; 20 ವರ್ಷದ ಪ್ಲಾನ್​ಗೆ ಪ್ರೀಮಿಯಮ್ ಕಟ್ಟುವುದು 12 ವರ್ಷ ಮಾತ್ರ
ಎಲ್​ಐಸಿ
Follow us on

ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆ (LIC) ಭಾರತದಲ್ಲಿ ಮೊದಲಿಂದಲೂ ತನ್ನ ನಂಬರ್ ಒನ್ ಸ್ಥಾನ ಭದ್ರ ಮಾಡಿಕೊಂಡಿದೆ. ಹಲವು ಖಾಸಗಿ ಇನ್ಷೂರೆನ್ಸ್ ಕಂಪನಿಗಳ ಪೈಪೋಟಿ ಮಧ್ಯೆಯೂ ಎಲ್​ಐಸಿ ಪ್ರಾಬಲ್ಯ ಮುಂದುವರಿದಿದೆ. ಕಾಲಕಾಲಕ್ಕೆ ಅಗಾಗ್ಗೆ ಮತ್ತು ಕಾಲಕ್ಕೆ ಅನುಗುಣವಾಗಿ ಎಲ್​ಐಸಿ ಹೊಸ ಹೊಸ ಪಾಲಿಸಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಸ್ಪರ್ಧೆಯಲ್ಲಿ ತನ್ನ ಮುಂಚೂಣಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಎಲ್​ಐಸಿ ಯಶಸ್ವಿಯಾಗಿದೆ. ಎಲ್​ಐಸಿಯ ಹೊಸತನಕ್ಕೆ ಸಾಕ್ಷಿ ಅದರ ಎಲ್​ಐಸಿ ಜೀವನ್ ಆಜಾದ್ ಪಾಲಿಸಿ (LIC Jeevan Anand Plan). ಇದು 2023ರ ಜನವರಿಯಲ್ಲಿ ಮಾರುಕಟ್ಟೆಗೆ ಬಂದಿದ್ದು, ಕೆಲವೇ ತಿಂಗಳಲ್ಲಿ ಗಣನೀಯವಾಗಿ ಮಾರಾಟ ಕಂಡಿದೆ. ಎಲ್​ಐಸಿ ಜೀವನ್ ಆಜಾದ್ ಒಂದು ನಾನ್ ಲಿಂಕ್ಡ್ ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿ (Non-linked, Non-participating Insurance Policy) ಆಗಿದೆ. ಅಂದರೆ ಇದು ಷೇರುಮಾರುಕಟ್ಟೆಗೆ ಜೋಡಿತವಾಗದ ಹಾಗೂ ಪೂರ್ವನಿಗದಿತ ಪ್ರಮಾಣದಲ್ಲಿ ರಿಟರ್ನ್ ಕೊಡುವ ಪಾಲಿಸಿ.

ಯಾವುದೇ ವೈದ್ಯಕೀಯ ಪರೀಕ್ಷೆ ಬೇಡ; ಸುಲಭವಾಗಿ ಪಾಲಿಸಿ ಪಡೆಯಿರಿ

ಎಲ್​ಐಸಿ ಜೀವನ್ ಆಜಾದ್ ಪಾಲಿಸಿ ಬಹಳ ಜನಪ್ರಿಯವಾಗುತ್ತಿದೆ. ಇದಕ್ಕೆ ಕಾರಣ ಈ ಪಾಲಿಸಿಯ ಸರಳತೆ. 15 ವರ್ಷದಿಂದ 20 ವರ್ಷದವರೆಗೆ ವಿವಿಧ ಅವಧಿಯ ಪಾಲಿಸಿಗಳನ್ನು ಪಡೆಯಬಹುದು. ಪ್ರೀಮಿಯಮ್ ಕಟ್ಟುವುದು 8 ವರ್ಷ ಕಡಿಮೆಗೆ. ಉದಾಹರಣೆಗೆ, 20 ವರ್ಷದ ಎಲ್​ಐಸಿ ಜೀವನ್ ಆಜಾದ್ ಪಾಲಿಸಿ ತೆಗೆದುಕೊಂಡರೆ 12 ವರ್ಷಕ್ಕೆ ಪ್ರೀಮಿಯಮ್ ಕಟ್ಟಬೇಕು. 15 ವರ್ಷದ ಪಾಲಿಸಿಯಾದರೆ 7 ವರ್ಷ ಮಾತ್ರ ಪ್ರೀಮಿಯಮ್ ಕಟ್ಟಬೇಕು.

ಇದನ್ನೂ ಓದಿNo Credit Card: ಕ್ರೆಡಿಟ್ ಕಾರ್ಡ್ ಬಳಸಿ ಇನ್ಷೂರೆನ್ಸ್ ಲೋನ್ ಹಣ ಕಟ್ಟುವಂತಿಲ್ಲ; ಯಾಕೆ ಈ ಹೊಸ ನಿಯಮ?

ಈ ಪಾಲಿಸಿ ಮಾಡಿಸಲು ಕೆಲ ವಯೋಮಿತಿಗಳಿವೆ. ಕನಿಷ್ಠ ವಯಸ್ಸು 90 ದಿನವಾದರೆ, ಗರಿಷ್ಠ ವಯಸ್ಸು 50 ವರ್ಷ ಇದೆ. ಪಾಲಿಸಿ ಮೆಚ್ಯೂರ್ ಆದಾಗ ಪಾಲಿಸಿದಾರರ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರಬಾರದು, ಹಾಗು 70 ವರ್ಷಕ್ಕಿಂತ ಹೆಚ್ಚು ಇರಬಾರದು. 90 ದಿನದ ಮಗುವಿನ ಹೆಸರಿಗೆ ಪಾಲಿಸಿ ಮಾಡಿಸುವುದಾರೆ 19 ಅಥವಾ 20 ವರ್ಷದ ಪಾಲಿಸಿಗಳನ್ನು ಮಾತ್ರ ಪಡೆಯಬಹುದು.

ಎಲ್​​ಐಸಿ ಜೀವನ್ ಆಜಾದ್ ಪಾಲಿಸಿಯಲ್ಲಿ ಕನಿಷ್ಠ ಭರವಸೆಯ ಮೊತ್ತ 2ಲಕ್ಷ ರೂ ಆದರೆ, ಗರಿಷ್ಠ ಮೊತ್ತ 5 ಲಕ್ಷ ರೂ ಆಗಿದೆ. ಪಾಲಿಸಿ ಅವಧಿ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 20 ವರ್ಷವಾದರೂ ಎಂಟು ವರ್ಷಗಳಷ್ಟು ಕಡಿಮೆ ಅವಧಿಗೆ ಮಾತ್ರ ಪ್ರೀಮಿಯಮ್ ಕಟ್ಟುವುದರಿಂದ ಜನರಿಗೂ ಹೆಚ್ಚು ಹೊರೆ ಎನಿಸುವುದಿಲ್ಲ. ಈ ಕಾರಣಕ್ಕೆ ಈ ಪಾಲಿಸಿ ಜನಪ್ರಿಯವಾಗಿದೆ.

ಇದನ್ನೂ ಓದಿBest FD Rates: ಮ್ಯೂಚುವಲ್ ಫಂಡ್​ನಂತೆ ಭರ್ಜರಿ ಲಾಭ ಕೊಡುತ್ತೆ ಸೂರ್ಯೋದಯ್ ಬ್ಯಾಂಕ್​ನ ಎಫ್​ಡಿ; ನಿಶ್ಚಿತ ಠೇವಣಿಗೆ ಶೇ. 9.6ರವರೆಗೂ ಬಡ್ಡಿ

ಎಲ್​​ಐಸಿ ಜೀವನ್ ಆಜಾದ್ ಪಾಲಿಸಿಯಲ್ಲಿ ಸಾವಿಗೆ ಪರಿಹಾರ ಎಷ್ಟು?

ಒಂದು ವೇಳೆ ಎಲ್​ಐಸಿ ಜೀವನ್ ಆಜಾದ್​ನ ಪಾಲಿಸಿದಾರರು ನಿರ್ದಿಷ್ಟ ಅವಧಿ ಪ್ರೀಮಿಯಮ್ ಕಟ್ಟಿದ ಬಳಿಕ ಆಕಸ್ಮಿಕವಾಗಿ ಮೃತಪಟ್ಟರೆ ಡೆತ್ ಬೆನಿಫಿಟ್ ಸಿಗುತ್ತದೆ. ಆವರೆಗೂ ಕಟ್ಟಲಾಗಿರುವ ಪ್ರೀಮಿಯಮ್ ಮೊತ್ತಕ್ಕಿಂತ ಶೇ. 5ರಷ್ಟು ಹೆಚ್ಚು ಹಣವು ವಾರಸುದಾರರಿಗೆ ಸಿಗುವುದು ಖಾತ್ರಿ ಇರುತ್ತದೆ. ಪ್ರೀಮಿಯಮ್ ಕಟ್ಟುವ ಅವಧಿ ಮುಗಿದು, ಪಾಲಿಸಿ ಮೆಚ್ಯೂರ್ ಆಗುವ ಮುನ್ನ ಮೃತಪಟ್ಟರೆ ಕನಿಷ್ಠ ಭರವಸೆಯ ಮೊತ್ತದಷ್ಟಾದರೂ ಹಣ ವಾರಸುದಾರರಿಗೆ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ