No Credit Card: ಕ್ರೆಡಿಟ್ ಕಾರ್ಡ್ ಬಳಸಿ ಇನ್ಷೂರೆನ್ಸ್ ಲೋನ್ ಹಣ ಕಟ್ಟುವಂತಿಲ್ಲ; ಯಾಕೆ ಈ ಹೊಸ ನಿಯಮ?

Repayment Of Loan Against Insurance: ಇನ್ಷೂರೆನ್ಸ್ ಪಾಲಿಸಿ ಒತ್ತೆ ಇಟ್ಟು ಪಡೆಯಲಾದ ಸಾಲದ ಮರುಪಾವತಿಗೆ ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ. ಐಆರ್​ಡಿಎಐ ಈ ನಿಯಮ ಹೊರಡಿಸಿದ್ದು ಎಲ್ಲಾ ಇನ್ಷೂರೆನ್ಸ್ ಕಂಪನಿಗಳಿಗೂ ಈ ಸಂದೇಶ ರವಾನಿಸಿದೆ.

No Credit Card: ಕ್ರೆಡಿಟ್ ಕಾರ್ಡ್ ಬಳಸಿ ಇನ್ಷೂರೆನ್ಸ್ ಲೋನ್ ಹಣ ಕಟ್ಟುವಂತಿಲ್ಲ; ಯಾಕೆ ಈ ಹೊಸ ನಿಯಮ?
ಕ್ರೆಡಿಟ್ ಕಾರ್ಡ್
Follow us
|

Updated on: May 08, 2023 | 2:49 PM

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಟಯರ್-3 ಅಕೌಂಟ್​ಗಳಿಗೆ ಹಣ ತುಂಬಲು ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ ಎಂದು ಪಿಂಚಣಿ ನಿಧಿ ಪ್ರಾಧಿಕಾರ ಪಿಎಫ್​ಆರ್​ಡಿಎ (PFRDA) ಕಳೆದ ವರ್ಷ ಘೋಷಣೆ ಮಾಡಿತ್ತು. ಇದೀಗ ಇನ್ಷೂರೆನ್ಸ್ ಪ್ರಾಧಿಕಾರ ಐಆರ್​ಡಿಎಐ (IRDAI- Insurance Regulatory Development Authority of India) ಕೂಡ ಇಂಥದ್ದೇ ನಿಯಮ ಮಾರಿ ಮಾಡಿದೆ. ಇನ್ಷೂರೆನ್ಸ್ ಪಾಲಿಸಿ ಒತ್ತೆ ಇಟ್ಟು ಪಡೆಯಲಾದ ಸಾಲಕ್ಕೆ ಕ್ರೆಡಿಟ್ ಕಾರ್ಡ್ ಮೂಲಕ ಮರುಪಾವತಿ ಮಾಡುವ ಅವಕಾಶ ಇರುವುದಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮರುಪಾವತಿ ಮಾಡುವ ಅವಕಾಶವನ್ನು ನಿಲ್ಲಿಸಬೇಕು ಎಂದು ಇನ್ಷೂರೆನ್ಸ್ ಕಂಪನಿಗಳಿಗೆ ಐಆರ್​ಡಿಎಐ ಸೂಚಿಸಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಯಾಕೆ ಬೇಡ?

ಕ್ರೆಡಿಟ್ ಕಾರ್ಡ್​ನಿಂದ ಪೇಮೆಂಟ್ ಮಾಡಿದರೆ, ಅದು ಕಿರು ಅವಧಿಗೆ ಯಾವುದೇ ಬಡ್ಡಿ ಇಲ್ಲದೇ ಸಿಗುವ ಸಾಲದಂತೆ. ಇನ್ಷೂರೆನ್ಸ್ ಲೋನ್​ನ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ, ಒಂದು ತಿಂಗಳವರೆಗೂ ಆ ಹಣವನ್ನು ಕ್ರೆಡಿಟ್ ಕಾರ್ಡ್ ಕಂಪನಿಗೆ ಪಾವತಿಸಲು ಕಾಲಾವಧಿ ಇರುತ್ತದೆ. ಇದು ಗ್ರಾಹಕರಿಗೆ ಬಹಳ ಅನುಕೂಲವಾದ ಸಂಗತಿ ಹೌದು. ಆದರೆ, ಹೆಚ್ಚಿನ ಗ್ರಾಹಕರು ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಕಟ್ಟದೇ ಇರುವುದರಿಂದ ಹೆಚ್ಚಿನ ಬಡ್ಡಿ ಮತ್ತು ದಂಡ ಕಟ್ಟಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ನಿಯಮ ಪ್ರಕಾರ ಬಿಲ್ ಅವಧಿಯೊಳಗೆ ಕಟ್ಟಲಿಲ್ಲವೆಂದರೆ ಹೆಚ್ಚು ಬಡ್ಡಿ ಮತ್ತು ದಂಡವನ್ನು ಪಾವತಿಸಬೇಕು. ಇನ್ಷೂರೆನ್ಸ್ ಗ್ರಾಹಕರಿಗೆ ಇಂತಹದ್ದನ್ನು ತಪ್ಪಿಸಲು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗೆ ಅವಕಾಶ ನಿರಾಕರಿಸಲಾಗಿದೆ ಎಂಬುದು ನೀಡಲಾಗಿರುವ ಒಂದು ಕಾರಣ.

ಇದನ್ನೂ ಓದಿONDC: ಕಡಿಮೆ ಬೆಲೆಗೆ ಊಟ ಸಿಗುತ್ತೆ; ಆದ್ರೆ ಟೈಮಿಗೆ ಸರಿಯಾಗಿ ಬರುತ್ತಾ? ಸ್ವಿಗ್ಗಿ, ಜೊಮಾಟೋಗಳ ಅಖಾಡಕ್ಕೆ ಒಎನ್​ಡಿಸಿ

ಇನ್ಷೂರೆನ್ಸ್ ಪಾಲಿಸಿ ಮೇಲೆ ಸಾಲ ಎಷ್ಟು ಸಿಗುತ್ತೆ?

ಎಲ್ಲಾ ವಿಮಾ ಪಾಲಿಸಿಗಳಿಗೂ ಸಾಲ ಸೌಲಭ್ಯ ಸಿಗುವುದಿಲ್ಲ. ಮನಿ ಬ್ಯಾಕ್ ಮತ್ತು ಎಂಡೋಮೆಂಟ್​ನಂತಹ ಇನ್ಷೂರೆನ್ಸ್ ಪಾಲಿಸಿಗಳ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ. ನಿರ್ದಿಷ್ಟ ಅವಧಿಯವರೆಗೆ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಿದ ಬಳಿಕ ಈ ಅವಕಾಶ ಸಿಗುತ್ತದೆ.

ನಾವು ಆವರೆಗೂ ಎಷ್ಟು ಹಣವನ್ನು ಇನ್ಷೂರೆನ್ಸ್ ಪಾಲಿಸಿಗೆ ಪಾವತಿಸಿರುತ್ತೇವೆ, ಅದಕ್ಕೆ ಅನುಗುಣದ ಪ್ರಮಾಣದಲ್ಲಿ ಸಾಲ ಸಿಗುತ್ತದೆ. ಸಾಮಾನ್ಯವಾಗಿ ಇದು ಶೇ. 70ರಿಂದ 90 ಭಾಗದ ಹಣ ಆಗಿರುತ್ತದೆ. ಈ ಸಾಲವನ್ನು ಗ್ರಾಹಕರು ಯಾವ ಬ್ಯಾಂಕಿಂದಲಾದರೂ ಪಡೆಯಬಹುದು. ಬಡ್ಡಿ ದರ ಬಹಳ ಕಡಿಮೆ ಇರುತ್ತದೆ. ಬ್ಯಾಂಕುಗಳ ಅಡಮಾನ ಸಾಲಕ್ಕಿಂತ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ.

ಇದನ್ನೂ ಓದಿBank Deposits: ಅಧಿಕ ಬಡ್ಡಿ ಕೊಡುವ ಬ್ಯಾಂಕ್​ಗಳಲ್ಲಿ ಹಣ ಇರಿಸಲು ಭಯವೇ? ಆರ್​ಬಿಐ ನಿಯಮ ತಿಳಿದಿರಿ; ಅಪಾಯ ತಪ್ಪಿಸಲು ಈ ಉಪಾಯ ಮಾಡಿ

ಇನ್ಷೂರೆನ್ಸ್ ಗ್ರಾಹಕರಿಗೆ ತುರ್ತಾಗಿ ಹಣಕಾಸು ಅಗತ್ಯದ ಪರಿಸ್ಥಿತಿ ಉದ್ಭವಿಸಿದರೆ ಈ ಸಾಲ ಬಹಳ ಸಹಾಯಕ್ಕೆ ಬರುತ್ತದೆ. ಇನ್ಷೂರೆನ್ಸ್ ಕಚೇರಿಗೆ ಹೋಗಿ ಒಂದು ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ, ಇನ್ಷೂರೆನ್ಸ್ ಪಾಲಿಸಿಯ ಮೂಲ ಪ್ರತಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕು. ಸಾಲ ಸ್ಯಾಂಕ್ಷನ್ ಆಗಲು ಹೆಚ್ಚು ಸಮಯ ತಗುಲುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್