AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best FD Rates: ಮ್ಯೂಚುವಲ್ ಫಂಡ್​ನಂತೆ ಭರ್ಜರಿ ಲಾಭ ಕೊಡುತ್ತೆ ಸೂರ್ಯೋದಯ್ ಬ್ಯಾಂಕ್​ನ ಎಫ್​ಡಿ; ನಿಶ್ಚಿತ ಠೇವಣಿಗೆ ಶೇ. 9.6ರವರೆಗೂ ಬಡ್ಡಿ

Suryoday Small Finance Bank: ಮಹಾರಾಷ್ಟ್ರ ಮೂಲದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಶ್ಚಿತ ಠೇವಣಿಗಳಿಗೆ ಶೇ. 9.6ರವರೆಗೂ ಬಡ್ಡಿ ಆಫರ್ ಮಾಡುತ್ತಿದೆ. ಭಾರತೀಯ ಬ್ಯಾಂಕುಗಳ ಪೈಕಿ ಅತಿ ಹೆಚ್ಚು ಎಫ್​ಡಿ ದರ ಕೊಡುತ್ತಿದೆ ಈ ಬ್ಯಾಂಕು.

Best FD Rates: ಮ್ಯೂಚುವಲ್ ಫಂಡ್​ನಂತೆ ಭರ್ಜರಿ ಲಾಭ ಕೊಡುತ್ತೆ ಸೂರ್ಯೋದಯ್ ಬ್ಯಾಂಕ್​ನ ಎಫ್​ಡಿ; ನಿಶ್ಚಿತ ಠೇವಣಿಗೆ ಶೇ. 9.6ರವರೆಗೂ ಬಡ್ಡಿ
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2023 | 3:22 PM

ಬೆಂಗಳೂರು: ಉಳಿತಾಯ ಮಾಡಿದ ಹಣದಿಂದ ಲಾಭ ಪಡೆಯಲು ಜನರು ಈಗಲೂ ಇಚ್ಛಿಸುವ ಮಾರ್ಗ ಎಂದರೆ ಎಫ್​ಡಿ, ಅಥವಾ ನಿಶ್ಚಿತ ಠೇವಣಿ. ಸರ್ಕಾರದ ಉಳಿತಾಯ ಯೋಜನೆಗಳು (Savings Schemes) ವರ್ಷಕ್ಕೆ ಶೇ. 7ರಿಂದ 8ರಷ್ಟು ಮಾತ್ರ ಬಡ್ಡಿ ಕೊಡುತ್ತವೆ. ಕೆಲ ದೊಡ್ಡದೊಡ್ಡ ಬ್ಯಾಂಕುಗಳು (Commercial Banks) ತಮ್ಮಲ್ಲಿನ ನಿಶ್ಚಿತ ಠೇವಣಿಗಳಿಗೆ ಶೇ. 9ರವರೆಗೂ ಬಡ್ಡಿ ಕೊಡುತ್ತವೆ. ಆದರೆ, ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು (Suryoday Small Finance Bank) ಅತಿಹೆಚ್ಚು ಎಫ್​ಡಿ ದರ ಆಫರ್ ಮಾಡಿದೆ. ನಿಶ್ಚಿತ ಠೇವಣಿಗಳಿಗೆ ಈ ಬ್ಯಾಂಕು ವರ್ಷಕ್ಕೆ ಶೇ. 9.6ರವರೆಗೆ ಬಡ್ಡಿ ನೀಡುತ್ತದೆ. ಅಷ್ಟೇ ಅಲ್ಲ 5 ಲಕ್ಷ ರೂಗಿಂತ ಹೆಚ್ಚು ಮೊತ್ತವನ್ನು ಹಾಗೇ ಸುಮ್ಮನೆ ಖಾತೆಯಲ್ಲಿ ಇಟ್ಟರೂ ವರ್ಷಕ್ಕೆ ಶೇ. 7ರಷ್ಟು ಬಡ್ಡಿ ಕೊಡುತ್ತದೆ ಈ ಬ್ಯಾಂಕು. ಹೊಸ ಬಡ್ಡಿ ದರ 2023 ಮೇ 5ರಿಂದ ಜಾರಿಗೆ ಬಂದಿದೆ.

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಎಫ್​ಡಿ ದರಗಳ ವಿವರ

ಮಹಾರಾಷ್ಟ್ರ ಮೂಲದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 2 ಕೋಟಿ ರೂವರೆಗಿನ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಭರ್ಜರಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 4.50ರಿಂದ ಶೇ. 9.60 ವರೆಗೂ ಬಡ್ಡಿ ಬರುತ್ತದೆ. ಇತರ ಸಾಮಾನ್ಯರ ಎಫ್​ಡಿಗಳಿಗೆ ಶೇ. 4ರಿಂದ ಶೇ. 9.10ರವರೆಗೂ ಬಡ್ಡಿ ಸಿಗುತ್ತದೆ. 5 ವರ್ಷದ ಠೇವಣಿಗೆ ಗರಿಷ್ಠ ಬಡ್ಡಿ ನೀಡಲಾಗುತ್ತದೆ.

ಇದನ್ನೂ ಓದಿ: EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 2 ಕೋಟಿ ರೂ ಒಳಗಿನ ನಿಶ್ಚಿತ ಠೇವಣಿಗಳಿಗೆ ಇರುವ ಬಡ್ಡಿ ದರಗಳ ವಿವರ:

  • ಸಾಮಾನ್ಯ ಗ್ರಾಹಕರ 1 ವರ್ಷದ ಠೇವಣಿ: ಶೇ. 6.85
  • ಸಾಮಾನ್ಯ ಗ್ರಾಹಕರ 1-2 ವರ್ಷದ ಠೇವಣಿ: ಶೇ. 8.50 ಬಡ್ಡಿ
  • ಸಾಮಾನ್ಯ ಗ್ರಾಹಕರ 999 ದಿನಗಳ ಠೇವಣಿ: ಶೇ. 9ರಷ್ಟು ಬಡ್ಡಿ
  • 5 ವರ್ಷದ ಠೇವಣಿ: ಶೇ. 9.10 ಬಡ್ಡಿ

5 ವರ್ಷ ಮೇಲ್ಪಟ್ಟ ಅವಧಿಯ ಠೇವಣಿಗಳಿಗೆ ಸಿಗುವ ವಾರ್ಷಿಕ ಬಡ್ಡಿ ಶೇ. 8ಕ್ಕಿಂತಲೂ ಕಡಿಮೆ ಇರುತ್ತದೆ. ಇನ್ನು 1 ವರ್ಷಕ್ಕಿಂತ ಕಡಿಮೆ ಅವಧಿಯ ಬಡ್ಡಿಯೂ ಶೇ. 6ಕ್ಕಿಂತ ಕಡಿಮೆ ಇರುತ್ತದೆ.

ಇದನ್ನೂ ಓದಿ: EPFO: ನಿವೃತ್ತಿಯ ನಂತರ ಮಾಸಿಕ ಪಿಂಚಣಿಯಾಗಿ 15,670 ರೂ. ಪಡೆಯುವುದು ಹೇಗೆ?

ಇನ್ನು ಹಿರಿಯ ನಾಗರಿಕರಾದರೆ, ಸಾಮಾನ್ಯ ಗ್ರಾಹಕರಿಗಿಂತ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿ ಪಡೆಯಬಹುದು. ಉದಾಹರಣೆಗೆ 5 ವರ್ಷದ ಅವಧಿಯ ಎಫ್​ಡಿಗೆ ಸಾಮಾನ್ಯ ಗ್ರಾಹಕರು ಶೇ. 9.10 ಬಡ್ಡಿ ಪಡೆದರೆ ಹಿರಿಯ ನಾಗರಿಕರು ಶೇ. 9.60 ರಷ್ಟು ಇದ್ದಾರೆ.

ಕರ್ನಾಟಕದ ನಾನಾ ಕಡೆ ಇವೆ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಶಾಖೆಗಳು

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮಹಾರಾಷ್ಟ್ರದಲ್ಲಿ ಸ್ಥಾಪನೆಯಾಗಿದ್ದು, ದೇಶದ ಏಳೆಂಟು ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಶಾಖಾ ಕಚೇರಿಗಳಿವೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ಒಡಿಸಾ ಮೊದಲಾದ ಕೆಲ ರಾಜ್ಯಗಳಲ್ಲಿ ಈ ಕಿರು ಹಣಕಾಸು ಬ್ಯಾಂಕ್​ನ ಶಾಖಾ ಕಚೇರಿಗಳಿವೆ. ಬೆಂಗಳೂರಿನಲ್ಲೂ ಇದರ ಕಚೇರಿಗಳಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್