ಎಲ್ಐಸಿ
60 ವರ್ಷದವರೆಗೂ ಕೆಲಸ ಮಾಡುವ ಮನಸು ಇಲ್ಲವಾ? ಕೆಲಸದ ಒತ್ತಡದಿಂದ ಮುಕ್ತಗೊಂಡು ಬೇಗನೇ ವಿಶ್ರಾಂತ ಜೀವನದ ಹಂತಕ್ಕೆ ಹೋಗಿ ನೆಮ್ಮದಿಯಾಗಿರುವ ಪ್ಲಾನ್ ಇದೆಯಾ? ಹಾಗಿದ್ದರೆ ಅದಕ್ಕೆ ಈಗಲೇ ಸಂಪೂರ್ಣ ಯೋಜನೆ ಹಾಕಿಕೊಳ್ಳಬೇಕು. ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸಬೇಕು. ಅದರಲ್ಲಿ ಎಲ್ಐಸಿಯ ಹೊಸ ಜೀವನ್ ಧಾರಾ ಪಾಲಿಸಿಯೂ (LIC Jeevan Dhara-2 Policy) ಅಂಥ ಒಂದು ಆಯ್ಕೆ. ಬೇಗನೇ ನಿವೃತ್ತಿ ಬಯಸುವವರಿಗೆ ಈ ಪಾಲಿಸಿ ಅನುಕೂಲ ಎನಿಸಬಹುದು. ಜನವರಿ 22ರಂದು ಬಿಡುಗಡೆಯಾದ ಜೀವನ್ ಧಾರಾ-2 ವ್ಯಕ್ತಿಗತ ನಿವೃತ್ತಿ ಉಳಿತಾಯ ಪ್ಲಾನ್ ಆಗಿದೆ. ನಿಮ್ಮ ಇಚ್ಛೆಯ ಅವಧಿಯಲ್ಲಿ ನಿವೃತ್ತಿ ಪಾವತಿಗಳನ್ನು ಪಡೆಯಬಹುದು. 11 ರೀತಿಯ ಪಾವತಿ ಆಯ್ಕೆಗಳು ಇದರಲ್ಲಿ ಇವೆ.
ಎಲ್ಐಸಿ ಜೀವನ್ ಧಾರಾ-2 ಇನ್ಷೂರೆನ್ಸ್ ಪ್ಲಾನ್ನ ಪ್ರಮುಖ ಅಂಶಗಳು
- ವಿವಿಧ ರೀತಿಯ ಪಾವತಿ ಆಯ್ಕೆಗಳಿವೆ
- ನಿಯಮಿತವಾಗಿ ಪ್ರೀಮಿಯಮ್ ಕಟ್ಟಬಹುದು, ಅಥವಾ ಏಕಕಾಲದ ಪ್ರೀಮಿಯಮ್ ಅವಕಾಶ ಇರುತ್ತದೆ.
ಇದನ್ನೂ ಓದಿ: ಹೊಸ ಎಲ್ಐಸಿ ಅಮೃತ್ಬಾಲ್ ಪಾಲಿಸಿ; ಮಕ್ಕಳಿಗೆಂದು ರೂಪಿಸಿರುವ ಲೈಫ್ ಇನ್ಷೂರೆನ್ಸ್ ಸ್ಕೀಮ್
- ಒಬ್ಬ ವ್ಯಕ್ತಿಗೆ ಪಾವತಿ ಪಡೆಬಹುದು, ಅಥವಾ ದಂಪತಿ ಇದ್ದರೆ ಇಬ್ಬರೂ ಜಂಟಿಯಾಗಿ ಪಾವತಿ ಸೌಲಭ್ಯ ಪಡೆಯಬಹುದು.
- 15 ವರ್ಷಗಳವರೆಗೆ ಡಿಫರ್ಮೆಂಟ್ ಪೀರಿಯಡ್ನ ಅವಕಾಶ ಇರುತ್ತದೆ. ಅಂದರೆ ಪ್ರೀಮಿಯಮ್ ಪಾವತಿ ಅವಧಿ ಮುಗಿದು ನಿರ್ದಿಷ್ಟ ಅವಧಿಯ ಬಳಿಕ ಆ್ಯನುಟಿ ಪಾವತಿ ಪಡೆಯಲು ಆರಂಭಿಸಬಹುದು. ಪ್ರೀಮಿಯಮ್ ಕಟ್ಟುವ ಅವಧಿ ಇವತ್ತು ಮುಗಿದರೆ ತತ್ಕ್ಷಣದಿಂದಲೇ ಆ್ಯನುಟಿ ಅಥವಾ ರಿಟರ್ನ್ ಪಡೆಯಲು ಆರಂಭಿಸಬಹುದು. ಅಥವಾ 15 ವರ್ಷಗಳ ಬಳಿಕ ರಿಟರ್ನ್ ಪಡೆಯಲು ಆರಂಭಿಸುವ ಆಯ್ಕೆ ಪಡೆಯಬಹುದು.
- ನಿಮ್ಮ ಆ್ಯನುಟಿ ಪೇಮೆಂಟ್ ಅಥವಾ ರಿಟರ್ನ್ ತಿಂಗಳಿಗೆ ಬರುವಂತೆ ನಿಗದಿ ಮಾಡಬಹುದು. ಅಥವಾ ಮೂರು ತಿಂಗಳಿಗೊಮ್ಮೆಯಂತೆ, ಆರು ತಿಂಗಳಿಗೊಮ್ಮೆಯಂತೆ ಅಥವಾ ವರ್ಷಕ್ಕೆ ಒಮ್ಮೆಯಂತೆ ಬರುವಂತೆ ಆಯ್ಕೆ ಮಾಡಿಕೊಳ್ಳಬಹುದು.
- ಡಿಫರ್ಮೆಂಟ್ ಪೀರಿಯಸ್, ಅಥವಾ ಮುಂದೂಡಿಕೆ ಅವಧಿಯಲ್ಲಿ ಯಾವಾಗ ಬೇಕಾದರೂ ನೀವು ಹೆಚ್ಚುವರಿ ಪ್ರೀಮಿಯಮ್ ಪಾವತಿಸಬಹುದು. ಈ ರೀತಿಯಲ್ಲಿ ನಿಮ್ಮ ಆ್ಯನುಟಿ ಮೊತ್ತವನ್ನು ಏರಿಸುವ ಅವಕಾಶ ಇರುತ್ತದೆ.
ಇದನ್ನೂ ಓದಿ: ಎಸ್ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ
- ಡೆತ್ ಬೆನಿಫಿಟ್ ಅನ್ನು ಲಂಪ್ಸಮ್ ಆಗಿ ಪಡೆಯುವ ಆಯ್ಕೆ ಇರುತ್ತದೆ. ಅಥವಾ ಕಂತುಗಳ ರೂಪದಲ್ಲೂ ಬೇಕಾದರೆ ಸಿಗುವಂತೆ ಆಯ್ದುಕೊಳ್ಳಬಹುದು.
- ಮುಂದೂಡಿಕೆ ಅವಧಿ ಅಥವಾ ಡಿಫರ್ಮೆಂಟ್ ಪೀರಿಯಡ್ನಲ್ಲಿ ಪಾಲಿಸಿದಾರನಿಗೆ ಇನ್ಷೂರೆನ್ಸ್ ಕವರ್ ಇರುತ್ತದೆ.
ಬೇಗನೇ ನಿವೃತ್ತರಾಗಬೇಕೆಂದು ಬಯಸಿದರೆ ಈ ಎಲ್ಐಸಿ ಜೀವನ್ ಧಾರಾ ಪಾಲಿಸಿ ಮಾತ್ರವಲ್ಲ, ಬೇರೆ ಬೇರೆ ಹೂಡಿಕೆ ಆಯ್ಕೆಗಳನ್ನೂ ಪರಿಶೀಲಿಸಬಹುದು. ನಿಮ್ಮ ಸಂಪಾದನೆಯಲ್ಲಿ ಸಾಧ್ಯವಾದಷ್ಟೂ ಹೆಚ್ಚಿನ ಮೊತ್ತವನ್ನು ಉಳಿಸಿ, ಅದನ್ನು ಮ್ಯೂಚುವಲ್ ಫಂಡ್ ಎಸ್ಐಪಿ, ಎಸ್ಜಿಬಿ ಇತ್ಯಾದಿ ಕಡೆ ಹೂಡಿಕೆ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ