AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Amritbaal: ಹೊಸ ಎಲ್​ಐಸಿ ಅಮೃತ್​ಬಾಲ್ ಪಾಲಿಸಿ; ಮಕ್ಕಳಿಗೆಂದು ರೂಪಿಸಿರುವ ಲೈಫ್ ಇನ್ಷೂರೆನ್ಸ್ ಸ್ಕೀಮ್

New LIC Policy for children: ಎಲ್​ಐಸಿ ಅಮೃತ್​ಬಾಲ್ ಯೋಜನೆ ಜೀವ ವಿಮೆ ಮತ್ತು ಉಳಿತಾಯ ಪಾಲಿಸಿ ಹೊಂದಿದ್ದು, 13 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಪಡೆಯಬಹುದು. ಗರಿಷ್ಠ 25 ವರ್ಷ ಅವಧಿಯ ಪ್ರೀಮಿಯಮ್ ಅವಕಾಶ ಇರುವ ಈ ಯೋಜನೆಯಲ್ಲಿ ಕನಿಷ್ಠ ಮೂಲ ಗ್ಯಾರಂಟಿ ಮೊತ್ತ 2 ಲಕ್ಷ ರೂ ಆಗಿದೆ. ಬೇಸಿಕ್ ಸಮ್ ಅಶೂರ್ಡ್ ಜೊತೆಗೆ, ಪ್ರತೀ ಸಾವಿರ ರೂಗೆ 80 ರೂನಂತೆ ಗ್ಯಾರಂಟಿ ಸೇರ್ಪಡೆ ಹಣ ಪ್ರತೀ ವರ್ಷವೂ ಜಮೆ ಆಗುತ್ತಾ ಹೋಗುತ್ತದೆ.

LIC Amritbaal: ಹೊಸ ಎಲ್​ಐಸಿ ಅಮೃತ್​ಬಾಲ್ ಪಾಲಿಸಿ; ಮಕ್ಕಳಿಗೆಂದು ರೂಪಿಸಿರುವ ಲೈಫ್ ಇನ್ಷೂರೆನ್ಸ್ ಸ್ಕೀಮ್
ಎಲ್​ಐಸಿ ಅಮೃತ್​ಬಾಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2024 | 2:04 PM

Share

ಮಕ್ಕಳಿಗೆಂದು ಎಲ್​ಐಸಿ ಹೊಸ ಇನ್ಷೂರೆನ್ಸ್ ಪಾಲಿಸಿ ರೂಪಿಸಿದೆ. ಎಲ್​ಐಸಿ ಅಮೃತಬಾಲ್ (LIC Amritbaal) ಪ್ಲಾನ್ ಅನ್ನು ಫೆಬ್ರುವರಿ 16, ಶುಕ್ರವಾರದಂದು ಅನಾವರಣಗೊಳಿಸಲಾಗಿದೆ. ಮಗುವಿನ ಓದು ಮತ್ತಿತರ ಅಗತ್ಯತೆಗಳನ್ನು ಪೂರೈಸಿಸಲು ಗಮನದಲ್ಲಿರಿಸಿಕೊಂಡು ಎಲ್​ಐಸಿ ರೂಪಿಸಿರುವ ಉಳಿತಾಯ ಮತ್ತು ಜೀವ ವಿಮಾ ಪಾಲಿಸಿ ಇದಾಗಿದೆ. ಸಿಂಗಲ್ ಪ್ರೀಮಿಯಮ್ ಸೌಲಭ್ಯವೂ ಇದೆ. ಹಾಗೆಯೇ, ವಿವಿಧ ಅವಧಿಯವರೆಗೆ ಪ್ರೀಮಿಯಮ್ ಕಟ್ಟುವ ಅವಕಾಶವೂ ಇದೆ. ಕನಿಷ್ಠ ಭರವಸೆ ಮೊತ್ತ ಅಥವಾ ಸಮ್ ಅಶೂರ್ಡ್ 2 ಲಕ್ಷ ರೂ ಆಗಿದೆ. ಜೊತೆಗೆ ಗ್ಯಾರಂಟಿ ಸೇರ್ಪಡೆಗಳೂ (Guaranteed Addition) ಸಿಗುತ್ತವೆ.

ಎಲ್​​ಐಸಿ ಅಮೃತ್​ಬಾಲ್ ಪ್ಲಾನ್ ಪಡೆಯಲು ಅರ್ಹತೆ ಏನು?

ಎಲ್​ಐಸಿ ಅಮೃತ್​ಬಾಲ್ ಇನ್ಷೂರೆನ್ಸ್ ಸ್ಕೀಮ್ ಅನ್ನು ಮಗುವಿನ ಹೆಸರಿನಲ್ಲಿ ಪಡೆಯಬಹುದು. ಮಗುವಿನ ವಯಸ್ಸು ಒಂದು ತಿಂಗಳಾದರೂ ಆಗಿರಬೇಕು. ಗರಿಷ್ಠ ವಯಸ್ಸು 13 ವರ್ಷ ಎಂದು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಬೇರೆ ಬೇರೆ ಸ್ಕೀಮ್​ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್

ಸಿಂಗಲ್ ಪ್ರೀಮಿಯಮ್ ಮತ್ತು ಲಿಮಿಟೆಡ್ ಪ್ರೀಮಿಯಮ್ ಪಾವತಿ ಆಯ್ಕೆಗಳಿವೆ. ಹಾಗೆಯೇ, ಕಿರು ಅವಧಿ ಮತ್ತು ದೀರ್ಘ ಅವಧಿ ಪ್ರೀಮಿಯಮ್ ಕಟ್ಟುವ ಆಯ್ಕೆಗಳೂ ಇವೆ. ಐದು ವರ್ಷದಿಂದ 25 ವರ್ಷದವರೆಗೆ ಪಾಲಿಸಿ ಪ್ರೀಮಿಯಮ್ ಅವಧಿ ಇದೆ.

ಶಾರ್ಟ್ ಪ್ರೀಮಿಯಮ್ ಪೇಮೆಂಟ್​ನಲ್ಲಿ 5, 6, ಮತ್ತು 7 ವರ್ಷದ ಆಯ್ಕೆಗಳಿವೆ. ಲಾಂಗ್ ಪ್ರೀಮಿಯಮ್ ಪೇಮೆಂಟ್​ನಲ್ಲಿ 25 ವರ್ಷದವರೆಗೆ ಆಯ್ಕೆ ಇದೆ.

ಇಲ್ಲಿ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕನಿಷ್ಠ 2 ಲಕ್ಷ ರೂ ಆಗಿರುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪಾಲಿಸಿ ಮಾಡಿಸಬಹುದು. ಅದಕ್ಕೆ ಮಿತಿ ಇಲ್ಲ. ಇನ್ನು, ಪಾಲಿಸಿ ಆರಂಭವಾದ ಬಳಿಕ ಪ್ರತೀ ವರ್ಷಾಂತ್ಯದಲ್ಲೂ ನಿಮ್ಮ ಬೇಸಿಕ್ ಸಮ್ ಅಶ್ಯೂರ್ಡ್ ಮೊತ್ತಕ್ಕೆ ಸಾವಿರಕ್ಕೆ 80 ರೂನಂತೆ ಗ್ಯಾರಂಟಿ ಸೇರ್ಪಡೆ ಹಣವನ್ನು ಸೇರಿಸಲಾಗುತ್ತದೆ. ಪಾಲಿಸಿ ಅವಧಿಯವರೆಗೂ ಇದು ವರ್ಷ ವರ್ಷ ಸೇರ್ಪಡೆಯಾಗುತ್ತಿರುತ್ತದೆ.

ಇದನ್ನೂ ಓದಿ: ಎಲ್​ಐಸಿಯಿಂದ ಇಂಡೆಕ್ಸ್ ಪ್ಲಸ್ ಹೊಸ ಪಾಲಿಸಿ; ಷೇರುಪೇಟೆ ಬೆಳವಣಿಗೆಯ ಲಾಭ ಪಡೆಯಿರಿ

ಉದಾಹರಣೆಗೆ, ನಿಮ್ಮ ಪಾಲಿಸಿಯಲ್ಲಿ ಬೇಸಿಕ್ ಸಮ್ ಅಶ್ಯೂರ್ಡ್ ಮೊತ್ತ 2 ಲಕ್ಷ ರೂ ಆಗಿದ್ದರೆ ನಿಮಗೆ ಪ್ರತೀ ವರ್ಷ 16,000 ರೂ ಹಣವು ಗ್ಯಾರಂಟೀಡ್ ಅಡಿಶನ್ ಆಗಿ ಸೇರ್ಪಡೆಯಾಗುತ್ತದೆ. ಪಾಲಿಸಿ ಮೆಚ್ಯೂರಿಟಿ ಆದಾಗ ಮೂಲ ಭರವಸೆ ಮೊತ್ತದ ಜೊತೆಗೆ ಗ್ಯಾರಂಟಿ ಸೇರ್ಪಡೆ ಮೊತ್ತವೂ ಸೇರಿಸಿ ಬರುತ್ತದೆ. ನಿಗೆ ಬೇಕೆಂದರೆ ಮೆಚ್ಯೂರಿಟಿ ಆದ ಬಳಿಕ ಕಂತುಗಳಲ್ಲಿಯೂ ಹಣವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಡೆತ್ ಬೆನಿಫಿಟ್ ಕೂಡ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು