ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಎಲ್ಐಸಿ (LIC) ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿದೆ. ಎಲ್ಲಾ ವಯೋಮಾನದವರಿಗೆ ಸೂಕ್ತವಾಗುವ ವಿವಿಧ ಇನ್ಷೂರೆನ್ಸ್ ಆಯ್ಕೆಗಳನ್ನು ಎಲ್ಐಸಿ ಹೊಂದಿದೆ. ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ, ವರ್ಷಕ್ಕೆ ಹೀಗೆ ವಿವಿಧ ಪಾವತಿ ಅವಧಿಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ತಿಂಗಳಿಗೆ ಕೆಲವೇ ನೂರು ರೂಗಳಿಂದ ಪಾಲಿಸಿ ಮೊತ್ತ ಆರಂಭವಾಗುತ್ತದೆ. ಹೀಗಾಗಿ, ಯಾರು ಬೇಕಾದರೂ ಕೂಡ ಎಲ್ಐಸಿಯ ಇನ್ಷೂರೆನ್ಸ್ ಸ್ಕೀಮ್ಗಳಲ್ಲಿ ಹೂಡಿಕೆ ಮಾಡಬಹುದು.
ಎಲ್ಐಸಿಯಲ್ಲಿ ಜನಪ್ರಿಯವಾಗಿರುವ ಸ್ಕೀಮ್ಗಳಲ್ಲಿ ಜೀವನ್ ಶಾಂತಿಯೂ (LIC Jeevan Shanti) ಒಂದು. ಇದು ನಿವೃತ್ತಿ ಬಳಿಕ ಪಿಂಚಣಿ (Deferred Annuity insurance scheme) ಒದಗಿಸುವ ಯೋಜನೆ. ಈ ಸ್ಕೀಮ್ನಲ್ಲಿ ಎಷ್ಟು ಬೇಕಾದರೂ ಹಣ ತೊಡಗಿಸಬಹುದು.
ಎಲ್ಐಸಿ ಜೀವನ್ ಶಾಂತಿ ಇನ್ಷೂರೆನ್ಸ್ ಪಾಲಿಸಿಯಲ್ಲಿ ಪಾಲಿಸಿದಾರನಿಗೆ ಕನಿಷ್ಠ ವಯಸ್ಸು 30 ವರ್ಷವಾದರೆ ಗರಿಷ್ಠ ವಯಸ್ಸು 79 ವರ್ಷ ಇದೆ. ಕಂತುಗಳಲ್ಲಿ ಪ್ರೀಮಿಯಮ್ ಕಟ್ಟುವಂತಿಲ್ಲ. ಒಮ್ಮೆಲೇ ಲಂಪ್ಸಮ್ ಆಗಿ ಹಣ ಪಾವತಿಸಬೇಕು. ಪಾಲಿಸಿದಾರ ಮೃತಪಡುವವರೆಗೂ ನಿರ್ದಿಷ್ಟ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿಗೆ ನಾಮಿನಿ ಎಷ್ಟು ಮುಖ್ಯ? ನಾಮಿನಿ ಹೆಸರು ಬದಲಿಸಲು ಸಾಧ್ಯವೇ? ಇಲ್ಲಿದೆ ಡೀಟೇಲ್ಸ್
ಇಲ್ಲಿ ಒಬ್ಬನೇ ವ್ಯಕ್ತಿ ಬೇಕಾದರೆ ಪಾಲಿಸಿ ಮಾಡಿಸಬಹುದು. ಜಂಟಿಯಾಗಿಯೂ ಮಾಡಿಸಬಹುದು. ಜಂಟಿಯಾಗಿ ಮಾಡಿಸಿದಾಗ, ಒಬ್ಬ ಸದಸ್ಯ ಮೃತಪಟ್ಟರೂ ಇನ್ನೊಬ್ಬರಿಗೆ ಈ ಪಿಂಚಣಿ ಸಿಗುತ್ತಾ ಹೋಗುತ್ತದೆ.
ಎಲ್ಐಸಿಯ ನ್ಯೂ ಜೀವನ್ ಶಾಂತಿ ಸ್ಕೀಮ್ನಲ್ಲಿ ಲಂಪ್ಸಮ್ ಆಗಿ 11 ಲಕ್ಷ ರೂ ಅನ್ನು ಹೂಡಿಕೆ ಮಾಡಿ 5 ವರ್ಷದ ಬಳಿಕ ಪಿಂಚಣಿ ಪಡೆಯಲು ಆರಂಭಿಸಿದರೆ, ವರ್ಷಕ್ಕೆ 1,01,880 ರೂ ಸಿಗುತ್ತದೆ. ಮಾಸಿಕ ಪಿಂಚಣಿ ಬೇಕೆಂದರೆ 8,149 ರೂ ಬರುತ್ತದೆ.
ಉದಾಹರಣೆಗೆ ನೀವು 55ನೇ ವಯಸ್ಸಿನಲ್ಲಿ 11 ಲಕ್ಷ ರೂ ಮೊತ್ತದ ಜೀವನ್ ಶಾಂತಿ ಪಾಲಿಸಿ ಖರೀದಿಸಿದರೆ, 60ನೇ ವಯಸ್ಸಿನಲ್ಲಿ ನಿವೃತ್ತಿ ಬಳಿಕ ಪಿಂಚಣಿ ಬರುತ್ತಾ ಹೋಗುತ್ತದೆ.
ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ನಿರ್ದಿಷ್ಟ ಮೊತ್ತವನ್ನು ನಾಮಿನಿಗೆ ಕೊಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ