ಯುವಜನರಿಗೆಂದು ಎಲ್​ಐಸಿಯಿಂದ ಎರಡು ಹೊಸ ಟರ್ಮ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ

|

Updated on: Aug 08, 2024 | 4:55 PM

LIC plans: 18ರಿಂದ 45 ವರ್ಷ ವಯಸ್ಸಿನ ಜನರಿಗೆ ಎಲ್​ಐಸಿ ಎರಡು ಟರ್ಮ್ ಇನ್ಷೂರೆನ್ಸ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ಎಲ್​ಐಸಿ ಯುವ ಟರ್ಮ್, ಡಿಜಿ ಟರ್ಮ್, ಡಿಜಿ ಕ್ರೆಡಿಟ್ ಲೈಫ್ ಮತ್ತು ಎಲ್​ಐಸಿ ಯುವ ಕ್ರೆಡಿಟ್ ಲೈಫ್ ಪ್ಲಾನ್​ಗಳು ಬಿಡುಗಡೆ ಆಗಿವೆ. ಡಿಜಿ ಟರ್ಮ್ ಪ್ಲಾನ್ ಲೈಫ್ ಇನ್ಷೂರೆನ್ಸ್ ಕವರೇಜ್ ಜತೆಗೆ ಸಾಲಕ್ಕೆ ಸುರಕ್ಷತೆಗೆಂದು ರೂಪಿಸಲಾಗಿದೆ.

ಯುವಜನರಿಗೆಂದು ಎಲ್​ಐಸಿಯಿಂದ ಎರಡು ಹೊಸ ಟರ್ಮ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ
ಎಲ್​ಐಸಿ
Follow us on

ನವದೆಹಲಿ, ಆಗಸ್ಟ್ 8: ಬಜೆಟ್​ನಲ್ಲಿ ಯುವಜನರಿಗೆ ಒತ್ತು ಕೊಟ್ಟ ಬೆನ್ನಲ್ಲೇ ಎಲ್​ಐಸಿ ಈಗ ಯುವಜನರಿಗೆಂದು ವಿಶೇಷ ಟರ್ಮ್ ಇನ್ಷೂರೆನ್ಸ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ಎಲ್​ಐಸಿ ಯುವ ಟರ್ಮ್ ಪ್ಲಾನ್, ಡಿಜಿ ಟರ್ಮ್ ಪ್ಲಾನ್, ಡಿಜಿ ಕ್ರೆಡಿಟ್ ಲೈಫ್ ಪ್ಲಾನ್ ಮತ್ತು ಎಲ್​ಐಸಿ ಯುವ ಕ್ರೆಡಿಟ್ ಲೈಫ್ ಪ್ಲಾನ್​ಗಳನ್ನು ಇತ್ತೀಚೆಗೆ ಹೊರತರಲಾಗಿದೆ. ಇದರಲ್ಲಿ ಎಲ್​ಐಸಿ ಯುವ ಕ್ರೆಡಿಟ್ ಲೈಫ್ ಮತ್ತು ಡಿಜಿ ಕ್ರೆಡಿಟ್ ಲೈಫ್ ಪ್ಲಾನ್​ಗಳು ಸಾಲಕ್ಕೆ ರಕ್ಷಾ ಕವಚವಾಗುತ್ತವೆ.

ಎಲ್​ಐಸಿ ಯುವ ಟರ್ಮ್ ಮತ್ತು ಡಿಜಿ ಟರ್ಮ್ ಪ್ಲಾನ್

ಇದು ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರ ಸಿಗುತ್ತದೆ. ಎಲ್​ಐಸಿ ವೆಬ್​​ಸೈಟ್ ಮತ್ತು ಕಚೇರಿಯಲ್ಲಿ ನೀವು ಈ ಪಾಲಿಸಿ ಪಡೆಯಬಹುದು.

ಇದನ್ನೂ ಓದಿ: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ

18ರಿಂದ 45 ವರ್ಷದೊಳಗಿನ ವಯಸ್ಸಿನವರು ಈ ಪಾಲಿಸಿ ಪಡೆಯಬಹುದು. ಪಾಲಿಸಿ ಮೆಚ್ಯೂರಿಟಿ ಆಗಲು ಕನಿಷ್ಠ 33 ವರ್ಷ ಮತ್ತು ಗರಿಷ್ಠ 75 ವರ್ಷ ಇದೆ. ಪರಿಹಾರ ಹಣ ಅಥವಾ ಸಮ್ ಅಶ್ಯೂರ್ಡ್ 50 ಲಕ್ಷ ರೂನಿಂದ 5 ಕೋಟಿ ರೂವರೆಗೆ ಇದೆ.

ಎಷ್ಟು ಪರಿಹಾರ ಸಿಗುತ್ತದೆ?

ಪಾಲಿಸಿದಾರ ಮೃತಪಟ್ಟರೆ ಅವರು ವರ್ಷಕ್ಕೆ ಕಟ್ಟುವ ಪ್ರೀಮಿಯಮ್​ನ ಏಳು ಪಟ್ಟು ಹಣವನ್ನು ಡೆತ್ ಬೆನಿಫಿಟ್ ಆಗಿ ಕೊಡಲಾಗುತ್ತದೆ. ಅಥವಾ ಆವರೆಗೆ ಕಟ್ಟಿರುವ ಒಟ್ಟು ಪ್ರೀಮಿಯಮ್ ಮೊತ್ತದ ಶೇ. 105ರಷ್ಟು ಹಣವನ್ನು ವಾರಸುದಾರರಿಗೆ ಕೊಡಲಾಗುತ್ತದೆ.

ಸಿಂಗಲ್ ಪ್ರೀಮಿಯಮ್ ಪೇಮೆಂಟ್ ಆದಲ್ಲಿ ಶೇ 125ರಷ್ಟು ಪ್ರೀಮಿಯಮ್ ಹಣವನ್ನು ಡೆತ್ ಬೆನಿಫಿಟ್ ಆಗಿ ನೀಡಲಾಗುತ್ತದೆ.

ಇದನ್ನೂ ಓದಿ: ಸಾಲ ಕಟ್ಟಲಿಲ್ಲವೆಂದರೆ ಏನೇನಾಗಬಹುದು? ನಿಮ್ಮ ಪರವಾಗಿ ಕಾನೂನು ಏನಿರುತ್ತದೆ? ಇವು ತಿಳಿದಿರಿ

ಯುವ ಕ್ರೆಡಿಟ್ ಲೈಫ್ ಪಾಲಿಸಿ

ಮನೆ, ಶಿಕ್ಷಣ ಅಥವಾ ವಾಹನಗಳ ಇತ್ಯಾದಿ ಅಗತ್ಯಗಳಿಗೆ ಪಡೆದ ಸಾಲಕ್ಕೆ ವಿಮಾ ರಕ್ಷಣೆ ಪಡೆಯಬಹುದು. ಎಲ್​ಐಸಿಯಿಂದ ಯುವ ಕ್ರೆಡಿಟ್ ಲೈಫ್ ಮತ್ತು ಡಿಜಿ ಕ್ರೆಡಿಟ್ ಲೈಫ್ ಪಾಲಿಸಿಗಳು ಈ ಸಾಲ ಸುರಕ್ಷೆ ಒದಗಿಸುತ್ತವೆ.

ಇದೂ ಕೂಡ 18ರಿಂದ 45 ವರ್ಷದೊಳಗಿನ ವಯಸ್ಸಿನವರು ಆರಂಭಿಸಬಹುದಾದ ಪಾಲಿಸಿಯಾಗಿದ್ದು, ಮೆಚ್ಯೂರಿಟಿಯ ವಯಸ್ಸು ಕನಿಷ್ಠ 23 ವರ್ಷವಾದರೆ ಗರಿಷ್ಠ 75 ವರ್ಷ ಇದೆ. ಇದು ಲೋನ್ ರೀಪೇಮೆಂಟ್​ಗೆ ಸುರಕ್ಷಾ ಕವಚವಾಗಿ ಮಾತ್ರವಲ್ಲ, ಡೆತ್ ಬೆನಿಫಿಟ್ ಕೂಡ ನೀಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ