ಸಾಲ ಕಟ್ಟಲಿಲ್ಲವೆಂದರೆ ಏನೇನಾಗಬಹುದು? ನಿಮ್ಮ ಪರವಾಗಿ ಕಾನೂನು ಏನಿರುತ್ತದೆ? ಇವು ತಿಳಿದಿರಿ

Legal protection when in loan default: ಸಾಲ ತೀರಿಸದೇ ಇರುವುದು ಕ್ರಿಮಿನಲ್ ಅಪರಾಧ ಅಲ್ಲ ಎಂಬ ವಿಚಾರವನ್ನು ತಿಳಿದಿರಬೇಕು. ಸಾಲ ತೀರಿಸದೇ ಇದ್ದರೆ ಸಾಲಗಾರರು ಬಂದು ವಸೂಲಿಗೆ ನಿಲ್ಲಬಹುದು. ಬೆದರಿಸುವಂತಿಲ್ಲ, ಅವಮಾನ ಮಾಡುವಂತಿಲ್ಲ. ಕಾನೂನು ಕ್ರಮ ಜರುಗಿಸುವಾಗ ಎರಡು ತಿಂಗಳು ಮುಂಚಿತವಾಗಿ ನೋಟೀಸ್ ಕೊಟ್ಟಿರಬೇಕು.

ಸಾಲ ಕಟ್ಟಲಿಲ್ಲವೆಂದರೆ ಏನೇನಾಗಬಹುದು? ನಿಮ್ಮ ಪರವಾಗಿ ಕಾನೂನು ಏನಿರುತ್ತದೆ? ಇವು ತಿಳಿದಿರಿ
ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 16, 2024 | 6:55 PM

ಬಹಳಷ್ಟು ಜನರು ಸಾಲ ಮಾಡುತ್ತಾರೆ. ಕೆಲವರು ಪ್ರಾಮಾಣಿಕವಾಗಿ ಸಾಲ ತೀರಿಸುತ್ತಾರೆ. ಇನ್ನೂ ಕೆಲವರಿಗೆ ಕಾರಣಾಂತರಗಳಿಂದ ಸಾಲ ತೀರಿಸಲು ಸಾಧ್ಯವಾಗದೇ ಹೋಗಬಹುದು. ಸಾಲ ಕೊಟ್ಟವರು ಮನೆ ಮುಂದೆ ಬಂದು ಜಗಳ ತೆಗೆಯಬಹುದು, ಅಡವಿಟ್ಟ ಆಸ್ತಿಯನ್ನು ಹೇಳದೆ ಕೇಳದೆ ಹರಾಜಿಗೆ ಹಾಕಬಹುದು ಇತ್ಯಾದಿ ಭೀತಿ ಇದ್ದೇ ಇರುತ್ತದೆ. ಸಾಲ ಪಡೆದು ಮರುಪಾವತಿಸದೇ ಇರುವುದು ತಪ್ಪೇ ಆದರೂ ಕಾನೂನು ಒಂದಷ್ಟು ರೀತಿ ರಿವಾಜು, ರಿಯಾಯಿತಿಗಳನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ನೀವು ಸಾಲ ಮರುಪಾವತಿಸಲು ವಿಫಲರಾಗಿದ್ದೇ ಆದಲ್ಲಿ ಭರವಸೆ ಕೈಚೆಲ್ಲುವ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ಏನೇನಾಗಬಹುದು ಎಂಬುದನ್ನು ತಿಳಿದಿರುವುದು ಉತ್ತಮ.

ಮೊದಲಿಗೆ ಅರಿಯಬೇಕಾದ ಸಂಗತಿ ಎಂದರೆ ಸಾಲ ಮರುಪಾವತಿ ಮಾಡದೇ ಇರುವುದು ನಾಗರಿಕ ಅಪರಾಧವೇ ಹೊರತು ಕ್ರಿಮಿನಲ್ ಅಪರಾಧವಲ್ಲ. ನಿಮಗೆ ಜೈಲುಶಿಕ್ಷೆ ಇರುವುದಿಲ್ಲ. ಚೆಕ್ ಬೌನ್ಸ್ ಕೇಸ್ ಅನ್ನು ಮಾತ್ರವೇ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಎಂಐ ಕಟ್ಟದೇ ಇರುವುದು, ಸಾಲ ಪೂರ್ಣವಾಗಿ ತೀರಿಸದೇ ಇರುವುದು ಇವೆಲ್ಲಾ ಕ್ರಿಮಿನಲ್ ಅಫೆನ್ಸ್ ಅಲ್ಲ ಎಂಬುದನ್ನು ಮೊದಲು ತಿಳಿದಿರಿ.

ಇದನ್ನೂ ಓದಿ: ಅಧಿಕ ಲಾಭಕ್ಕೆ ಬೇಳೆಕಾಳುಗಳ ಮಾರಾಟ; ರೀಟೇಲ್ ಮಾರಾಟಗಾರರಿಗೆ ಸರ್ಕಾರ ಎಚ್ಚರಿಕೆ

ಬೆದರಿಕೆ ಹಾಕುವಂತಿಲ್ಲ, ಅವಮಾನ ಮಾಡುವಂತಿಲ್ಲ…

  • ಆರ್​ಬಿಐನ ಇತ್ತೀಚಿನ ಮಾರ್ಗಸೂಚಿ ಪ್ರಕಾರ ಸಾಲ ಮರುಪಾವತಿ ಮಾಡಲು ವಿಫಲರಾಗುವ ಗ್ರಾಹಕರಿಗೆ ಬೆದರಿಕೆ ಹಾಕುವಂತಿಲ್ಲ. ಸಾರ್ವಜನಿಕವಾಗಿ ಅವಮಾನ ಮಾಡುವಂತಿಲ್ಲ.
  • ಕಾನೂನು ಕ್ರಮ ಆರಂಭಿಸುವ ಮುನ್ನ 60 ದಿನ ಮುಂಚಿತವಾಗಿ ನೋಟೀಸ್ ನೀಡಬೇಕು. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸ್ಪಷ್ಟವಾಗಿ ಎಲ್ಲಾ ವಿವರವನ್ನೂ ಬರೆದಿರಬೇಕು.
  • ಸಾಲ ವಸೂಲು ಮಾಡುವಾಗ ಗೌರವಯುತವಾಗಿ ನಡೆಸಿಕೊಳ್ಳಬೇಕು. ಅಪವೇಳೆಗಳಲ್ಲಿ ಕರೆ ಮಾಡಿ ಕಿರಿಕಿರಿ ಮಾಡುವಂತಿಲ್ಲ.
  • ಅಡ ಇಟ್ಟಿರುವ ಚಿನ್ನವೋ, ಮನೆಪತ್ರವೋ, ವಾಹನವನ್ನೋ ಹರಾಜು ಹಾಕುವಾಗ, ಆಸ್ತಿಯ ಸರಿಯಾದ ಮೌಲ್ಯ ನಿಗದಿ ಮಾಡಬೇಕು. ಅದಕ್ಕಾಗಿ ಸ್ವತಂತ್ರ ಮೌಲ್ಯಮಾಪಕರನ್ನು ನೇಮಿಸಬೇಕು. ಈ ಆಸ್ತಿಯ ಮೌಲ್ಯಮಾಪನವನ್ನು ಪ್ರಶ್ನಿಸುವ ಹಕ್ಕು ನಿಮಗೆ ಇರುತ್ತದೆ.
  • ಆಸ್ತಿ ಮಾರಿದ ಬಳಿಕ ನಿಮ್ಮ ಬಾಕಿ ಸಾಲದ ಮೊತ್ತವನ್ನು ಮಾತ್ರವೇ ಮುರಿದುಕೊಂಡು ಉಳಿದ ಹಣವನ್ನು ನಿಮಗೆ ಕೊಡಬೇಕು.

ಇದನ್ನೂ ಓದಿ: ತಾತ್ಕಾಲಿಕವಾಗಿ ಹಣದ ಅಗತ್ಯ ಇದೆಯಾ? ಷೇರು ಅಡ ಇಟ್ಟು ಸಾಲ ಪಡೆಯುವ ಅವಕಾಶ

ಕಾನೂನು ರಕ್ಷಣೆ ನಿಮಗೆ ಎಷ್ಟಿದೆ…?

ಸಾಲ ತೀರಿಸದೇ ಇರುವುದು ಕ್ರಿಮಿನಲ್ ಅಪರಾಧವಲ್ಲ. ಸಾಲ ಮರುಪಾವತಿಸಿಲ್ಲವೆಂದು ಕಾನೂನು ನೋಟೀಸ್ ಕೊಟ್ಟಿದ್ದರೆ ಅದನ್ನು ನೀವು ಪ್ರಶ್ನಿಸಬಹುದು. ನೀವು ಸೂಕ್ತ ಉತ್ತರ ಕೊಡಬಹುದು.

ಸಾಲ ಮರುಪಾವತಿ ಮಾಡದೇ ಇದ್ದ ಸಂದರ್ಭದಲ್ಲಿ ದಂಡನೆಗಿಂತ ಹೆಚ್ಚಾಗಿ ಸಾಲ ವಸೂಲು ಮಾಡುವುದು ಹಣಕಾಸು ಸಂಸ್ಥೆಯ ಮೊದಲ ಆದ್ಯತೆ ಆಗಿರುತ್ತದೆ. ನೀವು ಸಂಸ್ಥೆಯ ಮ್ಯಾನೇಜರ್ ಬಳಿ ಮಾತನಾಡಿ ಸಾಲ ತೀರಿಸಲು ಕಾಲಾವಕಾಶ ಪಡೆದುಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ