ತಾತ್ಕಾಲಿಕವಾಗಿ ಹಣದ ಅಗತ್ಯ ಇದೆಯಾ? ಷೇರು ಅಡ ಇಟ್ಟು ಸಾಲ ಪಡೆಯುವ ಅವಕಾಶ

Loan against Shares: ಸೆಕ್ಯೂರ್ಡ್ ಲೋನ್​​ಗಳಿಗೆ ಬಡ್ಡಿದರ ಕಡಿಮೆ ಇರುತ್ತದೆ. ಷೇರುಗಳ ಮೇಲೆ ನೀಡಲಾಗುವ ಸಾಲವೂ ಸೆಕ್ಯೂರ್ಡ್ ಲೋನ್. ಕೈಸಾಲಕ್ಕಿಂತ ಇದಕ್ಕೆ ಬಡ್ಡಿ ಕಡಿಮೆ. ಸುಲಭವಾಗಿಯೂ ಸಾಲ ಸಿಗುತ್ತದೆ. ತಾತ್ಕಾಲಿಕವಾಗಿ ಮತ್ತು ತುರ್ತಾಗಿ ಸಾಲ ಬೇಕಿದ್ದರೆ ಈ ಷೇರು ಸಾಲ ಪಡೆಯಲಡ್ಡಿ ಇಲ್ಲ.

ತಾತ್ಕಾಲಿಕವಾಗಿ ಹಣದ ಅಗತ್ಯ ಇದೆಯಾ? ಷೇರು ಅಡ ಇಟ್ಟು ಸಾಲ ಪಡೆಯುವ ಅವಕಾಶ
ಷೇರಿನ ಮೇಲೆ ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2024 | 2:31 PM

ಕೆಲವೊಮ್ಮೆ ತುರ್ತಾಗಿ ಹಣದ ಅಗತ್ಯ ಬಂದು ಬಿಡುತ್ತದೆ. ಕೈಸಾಲ ದುಬಾರಿಯಾಗಿರುತ್ತದೆ. ಚಿನ್ನ ಒತ್ತೆ ಇಟ್ಟು ಸಾಲ ಪಡೆಯಬಹುದು. ಇನ್ಷೂರೆನ್ಸ್ ಒತ್ತೆ ಇಟ್ಟು ಸಾಲ ಪಡೆಯಬಹುದು. ನೀವು ಷೇರುದಾರರಾಗಿದ್ದರೆ ಷೇರುಗಳನ್ನೇ ಅಡ ಇಟ್ಟು ಸಾಲ ಪಡೆಯುವ ಅವಕಾಶ ಇದೆ. ಕೈಸಾಲ ಅಥವಾ ಪರ್ಸನಲ್ ಲೋನ್​ಗೆ ಹೋಲಿಸಿದರೆ ಎಲ್​ಎಎಸ್ ಅಥವಾ ಷೇರಿನ ಮೇಲಿನ ಸಾಲಕ್ಕೆ ಬಡ್ಡಿದರ ಬಹಳ ಕಡಿಮೆ. ಹೀಗಾಗಿ, ಎಮರ್ಜೆನ್ಸಿ ಹಣಕ್ಕೆ ವೈಯಕ್ತಿಕ ಸಾಲ ಪಡೆಯುವುದಕ್ಕಿಂತ, ಅಥವಾ ಷೇರುಗಳನ್ನು ಮಾರುವುದಕ್ಕಿಂತ ಈ ರೀತಿಯ ಸಾಲ ಪಡೆಯುವುದು ಉತ್ತಮ ಆಯ್ಕೆ ಎನಿಸಬಹುದು.

ಷೇರುಗಳ ಮೇಲೆ ಸಾಲ ಎಷ್ಟು ಸಿಗುತ್ತದೆ?

ಒಂದು ಆಸ್ತಿಯನ್ನು ಅಡವಾಗಿ ಇಟ್ಟುಕೊಂಡು ಸಾಲ ನೀಡುವಾಗ ಬ್ಯಾಂಕುಗಳು ಆ ಆಸ್ತಿಯ ಭವಿಷ್ಯದ ಮೌಲ್ಯ ಮತ್ತು ಒಂದು ವರ್ಷದ ಬಡ್ಡಿಯ ಹಣವನ್ನು ಪರಿಗಣಿಸುತ್ತವೆ. ಚಿನ್ನದ ಸಾಲ ಕೊಡುವಾಗ ಚಿನ್ನದ ಮೌಲ್ಯದಷ್ಟು ಮೊತ್ತವನ್ನು ಕೊಡಲಾಗುವುದಿಲ್ಲ. ಶೇ. 70ರಿಂದ 80ರಷ್ಟು ಮೊತ್ತವನ್ನು ಮಾತ್ರವೇ ಸಾಲವಾಗಿ ಕೊಡಲಾಗುತ್ತದೆ. ಅಂತೆಯೇ ಷೇರಿನ ಮೇಲೆ ಸಾಲ ಕೊಡುವಾಗ ಷೇರುಗಳ ಇವತ್ತಿನ ಮಾರುಕಟ್ಟೆ ಮೌಲ್ಯದ ಶೇ. 50ರಷ್ಟು ಹಣವನ್ನು ಮಾತ್ರವೇ ಸಾಲವಾಗಿ ಕೊಡಬಹುದು.

ಇದನ್ನೂ ಓದಿ: ಹಣದ ಮೌಲ್ಯ ಇವತ್ತೇ ಬೇರೆ ನಾಳೆಯೇ ಬೇರೆ; ಭವಿಷ್ಯಕ್ಕೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಸಿಂಪಲ್ ಸೂತ್ರ

ಉದಾಹರಣೆಗೆ ನಿಮ್ಮ ಬಳಿ ಇರುವ ಷೇರುಗಳ ಒಟ್ಟು ಮೌಲ್ಯ 5 ಲಕ್ಷ ರೂ ಆಗಿದ್ದರೆ ಎರಡೂವರೆ ಲಕ್ಷ ರೂ ಹಣವನ್ನು ಸಾಲವಾಗಿ ಕೊಡಬಹುದು. ಇಲ್ಲಿ ಎಲ್ಲಾ ಷೇರುಗಳಿಗೂ ಸಾಲ ಸಿಗುತ್ತೆ ಎನ್ನಲಾಗುವುದಿಲ್ಲ. ಮಾರಾಟಕ್ಕೆ ಅರ್ಹವಾದ ಷೇರುಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಎಕ್ಸಿಕ್ಯೂಟಿವ್​ಗಳಿಗೆ ನೀಡಲಾಗುವ ಇಸಾಪ್ ಇತ್ಯಾದಿ ಷೇರು ಆಸ್ತಿಗಳನ್ನು ಒತ್ತೆ ಇಟ್ಟುಕೊಳ್ಳಲಾಗುವುದಿಲ್ಲ.

ಹಾಗೆಯೇ, ಷೇರುಬೆಲೆ ಏರಿಳಿತದ ತೀವ್ರತೆ ಹೆಚ್ಚಿರುತ್ತದೆಯಾದ್ದರಿಂದ ಬ್ಯಾಂಕುಗಳು ಶೇ. 50ರಷ್ಟು ಮಾತ್ರವೇ ಹಣವನ್ನು ಸಾಲವಾಗಿ ಕೊಡುತ್ತವೆ.

ಷೇರು ಮಾರುವುದಕ್ಕಿಂತ ಸಾಲ ಯಾಕೆ ಮುಖ್ಯ?

ನೀವು ಷೇರು ಮಾರುವ ಸಂದರ್ಭದಲ್ಲಿ ಅದರ ಬೆಲೆ ಕಡಿಮೆಗೊಂಡಿದ್ದಿರಬಹುದು. ಭವಿಷ್ಯದಲ್ಲಿ ಅದು ರಿಕವರ್ ಆಗುವ ಸಾಧ್ಯತೆ ಹೆಚ್ಚಿರಬಹುದು. ಈ ಹಂತದಲ್ಲಿ ಷೇರು ಮಾರುವುದರಿಂದ ನಿಮಗೆ ನಷ್ಟವೇ ಹೆಚ್ಚು. ಜೊತೆಗೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಷೇರು ಬೆಲೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮಾರಿದರೆ ನಷ್ಟವೇನಿಲ್ಲ. ಆದರೆ, ಮಾರುಕಟ್ಟೆ ಕುಸಿತದಲ್ಲಿರುವಾಗ ಮಾರುವ ಬದಲು ಒತ್ತೆ ಇಟ್ಟು ಸಾಲ ಪಡೆಯುಬಹುದು.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಅದರ ಪ್ರಯೋಜನಗಳೇನು ತಿಳಿದಿರಿ

ಷೇರಿನ ಮೇಲೆ ಸಾಲ ಪಡೆಯುವುದರಿಂದ ಏನು ಅನುಕೂಲ?

  • ಕಡಿಮೆ ಬಡ್ಡಿಗೆ ತ್ವರಿತವಾಗಿ ಸಾಲ ಸಿಗುತ್ತದೆ.
  • ಷೇರು ಮಾಲಿಕತ್ವ ನಿಮ್ಮ ಬಳಿಯೇ ಇರುತ್ತದೆ. ಡಿವಿಡೆಂಡ್, ಬೋನಸ್ ಷೇರು ಇತ್ಯಾದಿಗಳ ಲಾಭ ನಿಮಗೆ ಸಿಗುತ್ತಿರುತ್ತದೆ.
  • ಮಾಸಿಕವಾಗಿ ನಿರ್ದಿಷ್ಟ ಇಎಂಐ ಕಟ್ಟಬೇಕೆಂದಿಲ್ಲ. ಒಂದು ವರ್ಷದಲ್ಲಿ ಎಷ್ಟು ಬೇಕಾದರೂ ಸಾಲ ತೀರಿಸಬಹುದು.
  • ಒಂದು ವರ್ಷದ ಬಳಿಕ ಸಾಲ ಮುಂದುವರಿಸುವ ಅವಕಾಶವೂ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ