MSSC 2023: ಮಹಿಳೆಯರು, ಹುಡುಗಿಯರಿಗಾಗಿ ಕೇಂದ್ರದಿಂದ ಹೊಸ ಉಳಿತಾಯ ಖಾತೆ: ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಷ್ಟೂ ಮಾಹಿತಿ ಇಲ್ಲಿದೆ
Mahila Samman Savings Certificate 2023: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ MSSC 2023 ಅಧಿಸೂಚನೆ ಪ್ರಕಟಗೊಂಡಿದೆ. ಇದರಿಂದ 2 ವರ್ಷಗಳ ಅವಧಿಯಲ್ಲಿ 7.5 % ಸ್ಥಿರ ಬಡ್ಡಿಯೊಂದಿಗೆ ಉತ್ತಮ ಮೊತ್ತ ಗಳಿಸಬಹುದಾಗಿದೆ. ಯೋಜನೆ ಅರ್ಹತೆ, ಕೊನೆಯ ದಿನಾಂಕ, ಬಡ್ಡಿ ವಿವರ ಹೀಗಿದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಅಧಿಸೂಚನೆ: ಯೋಜನೆಯ (Mahila Samman Savings Certificate 2023 -MSSC) ಎಲ್ಲಾ ವಿವರಗಳನ್ನು ಇಲ್ಲಿ ನೀಡಲಾಗಿದ್ದು, ಪರಿಶೀಲಿಸಿ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 ಅಧಿಸೂಚನೆಯನ್ನು ಸರ್ಕಾರವು ಶುಕ್ರವಾರ (ಮಾರ್ಚ್ 31, 2023) ರಂದು ಹೊರಡಿಸಿದೆ. ಇದು ಮಹಿಳೆಯರು ಮತ್ತು ಹುಡುಗಿಯರು (women and girls) ಒಂದು ಅವಧಿಗೆ ರೂ 2 ಲಕ್ಷದವರೆಗೆ ಹೂಡಿಕೆ ಮಾಡಲು (investment) ಅನುವು ಮಾಡಿಕೊಡುತ್ತದೆ. ಇದರಿಂದ 2 ವರ್ಷಗಳ ಅವಧಿಯಲ್ಲಿ 7.5 % ಸ್ಥಿರ ಬಡ್ಡಿಯೊಂದಿಗೆ ಉತ್ತಮ ಮೊತ್ತ ಗಳಿಸಬಹುದಾಗಿದೆ. ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ (Savings Certificate Scheme):
MSSC ಅರ್ಹತೆ:
ಅಧಿಸೂಚನೆಯ ಪ್ರಕಾರ MSSC ಯೋಜನೆಯಡಿ ತನಗಾಗಿ ಖಾತೆ ತೆರೆಯಲು ಯಾವುದೇ ಮಹಿಳೆ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಅಪ್ರಾಪ್ತ ಬಾಲಕಿಯ ಪರವಾಗಿ ಪಾಲಕರು ಅರ್ಜಿ ಸಲ್ಲಿಸಬಹುದು.
MSSC ಠೇವಣಿ ಮಿತಿ:
2 ಲಕ್ಷ ರೂ.ಗಳ ಗರಿಷ್ಠ ಮಿತಿಗೆ ಒಳಪಟ್ಟು ಎಷ್ಟು ಬೇಕಾದರೂ MSSC ಖಾತೆಗಳನ್ನು ಮಹಿಳೆ ಅಥವಾ ಅಪ್ರಾಪ್ತ ಬಾಲಕಿಯ ಹೆಸರಿನಲ್ಲಿ ಪೋಷಕರು ತೆರೆಯಬಹುದು. MSSC ಖಾತೆಯನ್ನು ತೆರೆಯಲು ಅಗತ್ಯವಿರುವ ಕನಿಷ್ಠ ಮೊತ್ತವು ರೂ. 1000 ಮತ್ತು ನಂತರ ರೂ 100 ರ ಗಣಕಗಳಲ್ಲಿ. ಗರಿಷ್ಠ ಠೇವಣಿ ಮಿತಿ ರೂ 2 ಲಕ್ಷ.
MSSC ಬಡ್ಡಿ ದರ:
MSSC ಖಾತೆಯಲ್ಲಿನ ಠೇವಣಿಗಳ ಮೇಲೆ 7.5 % ಬಡ್ಡಿಯನ್ನು ಸರ್ಕಾರವು ನಿಗದಿಪಡಿಸಿದೆ. ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಮೂರು ತಿಂಗಳಿಗೊಮ್ಮೆ ಒಟ್ಟುಗೂಡಿಸಿ ಖಾತೆಗೆ ಜಮಾ ಮಾಡಲಾಗುತ್ತದೆ.
MSSC ಮುಕ್ತಾಯ ಮತ್ತು ಪಾವತಿ:
ಠೇವಣಿಯ ದಿನಾಂಕದಿಂದ ಎರಡು ವರ್ಷಗಳು ಪೂರ್ಣಗೊಂಡ ನಂತರ ಠೇವಣಿಯು ಮುಕ್ತಾಯಗೊಳ್ಳುತ್ತದೆ ಮತ್ತು ಮೆಚ್ಯೂರಿಟಿಯ ಮೇಲೆ ಖಾತೆಗಳ ಕಚೇರಿಗೆ ಸಲ್ಲಿಸಿದ ನಮೂನೆ-2 ರಲ್ಲಿನ ಅರ್ಜಿಯಲ್ಲಿ ಅರ್ಹ ಬಾಕಿಯನ್ನು ಖಾತೆದಾರರಿಗೆ ಪಾವತಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: PPF Investment Plan: ಪಿಪಿಎಫ್ನಲ್ಲಿ ವಾರ್ಷಿಕ 1.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹೂಡಿಕೆಗೆ ಅವಕಾಶ ಇದೆಯೇ?
MSSC ಭಾಗಶಃ ಹಿಂತೆಗೆದುಕೊಳ್ಳುವಿಕೆ:
MSSC ಖಾತೆದಾರನು ಖಾತೆಯನ್ನು ತೆರೆಯುವ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿದ ನಂತರ, ಆದರೆ ಖಾತೆಯ ಮುಕ್ತಾಯದ ಮೊದಲು ಅರ್ಹ ಬ್ಯಾಲೆನ್ಸ್‌ನ ಗರಿಷ್ಠ 40 % ವರೆಗೆ ಒಮ್ಮೆ ಮೊತ್ತವನ್ನು ಹಿಂಪಡೆಯಲು ಅನುಮತಿಸಲಾಗುತ್ತದೆ. ಅಪ್ರಾಪ್ತ ಬಾಲಕಿಯ ಪರವಾಗಿ ಖಾತೆ ತೆರೆದರೆ, ಪಾಲಕರು ಆಕೆಯ ಪ್ರಯೋಜನಕ್ಕಾಗಿ ಹಿಂಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
MSSC ಖಾತೆಯನ್ನು ಎಲ್ಲಿ ತೆರೆಯಬೇಕು:
ಅಂಚೆ ಕಚೇರಿ ಮತ್ತು ಅಧಿಕೃತ ಬ್ಯಾಂಕ್‌ಗಳಲ್ಲಿ ನೀವು MSSC ಖಾತೆಯನ್ನು ತೆರೆಯಬಹುದು.
MSSC ಖಾತೆ ತೆರೆಯಲು ಕೊನೆಯ ದಿನಾಂಕ:
MSSC ಖಾತೆ ತೆರೆಯಲು ಕೊನೆಯ ದಿನಾಂಕ 31ನೇ ಮಾರ್ಚ್ 2025.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ