Loan EMI Hike: ಪಿಎನ್​ಬಿ, ಐಸಿಐಸಿಐ, ಬ್ಯಾಂಕ್​ ಆಫ್ ಇಂಡಿಯಾ ಬಡ್ಡಿ ದರ ಹೆಚ್ಚಳ; ದುಬಾರಿಯಾಗಲಿದೆ ಇಎಂಐ

| Updated By: Ganapathi Sharma

Updated on: Dec 01, 2022 | 3:09 PM

ಪಿಎನ್​ಬಿ, ಐಸಿಐಸಿಐ, ಬ್ಯಾಂಕ್​ ಆಫ್ ಇಂಡಿಯಾ ಪರಿಷ್ಕೃತ ಕನಿಷ್ಠ ಬಡ್ಡಿ ದರ ವಿವರ ಇಲ್ಲಿ ನೀಡಲಾಗಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (December 1) ಜಾರಿಗೆ ಬರಲಿದೆ.

Loan EMI Hike: ಪಿಎನ್​ಬಿ, ಐಸಿಐಸಿಐ, ಬ್ಯಾಂಕ್​ ಆಫ್ ಇಂಡಿಯಾ ಬಡ್ಡಿ ದರ ಹೆಚ್ಚಳ; ದುಬಾರಿಯಾಗಲಿದೆ ಇಎಂಐ
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) ಪಿಎನ್​ಬಿ (PNB), ಐಸಿಐಸಿಐ ಬ್ಯಾಂಕ್ (ICICI Bank), ಬ್ಯಾಂಕ್​ ಆಫ್ ಇಂಡಿಯಾ (Bank of India) ಹೆಚ್ಚಿಸಿವೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (December 1) ಜಾರಿಗೆ ಬರಲಿದೆ ಎಂದು ಬ್ಯಾಂಕ್​ಗಳು ತಿಳಿಸಿವೆ. ಪರಿಣಾಮವಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಕಂತಿನ ಮೊತ್ತ ಹೆಚ್ಚಾಗಲಿದೆ. ಹೆಚ್ಚುತ್ತಿರುವ ಹಣದುಬ್ಬರ (Inlfation) ತಡೆಯುವ ಸಲುವಾಗಿ ವಿಶ್ವದಾದ್ಯಂತ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಿಸುವ ಮೊರೆ ಹೋಗಿದ್ದು, ಭಾರತದಲ್ಲಿಯೂ ಇತ್ತೀಚೆಗಷ್ಟೇ ಎಸ್​ಬಿಐ (SBI) ಸೇರಿದಂತೆ ಹಲವು ಬ್ಯಾಂಕ್​ಗಳು ಸಾಲದ ಹಾಗೂ ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.

ಪಿಎನ್​ಬಿ, ಐಸಿಐಸಿಐ, ಬ್ಯಾಂಕ್​ ಆಫ್ ಇಂಡಿಯಾ ಪರಿಷ್ಕೃತ ಕನಿಷ್ಠ ಬಡ್ಡಿ ದರ ವಿವರ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: FD Rates: ಎಫ್​ಡಿ ಬಡ್ಡಿ ದರ ಹೆಚ್ಚಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್; ಇಲ್ಲಿದೆ ವಿವರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿ ದರ (PNB)

ಸರ್ಕಾರಿ ಸ್ವಾಮ್ಯದ ಪಂಜಾನ್ ನ್ಯಾಷನಲ್ ಬ್ಯಾಂಕ್ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಎಂಸಿಎಲ್​ಆರ್​ ಅನ್ನು 5 ಮೂಲಾಂಶ ಹೆಚ್ಚಿಸಿದೆ. ಇದರೊಂದಿಗೆ ಬ್ಯಾಂಕ್​ನ ಒಂದು ವರ್ಷದ ಎಂಸಿಎಲ್​ಆರ್ ಈಗ ಶೇಕಡಾ 8.10 ಆಗಿದೆ. ಈ ಹಿಂದೆ ಇದು ಶೇಕಡಾ 8.05 ಇತ್ತು. ಆರು ತಿಂಗಳ ಎಂಸಿಎಲ್​ಆರ್ ಶೇಕಡಾ 7.75ರಿಂದ ಶೇಕಡಾ 7.80ಗೆ ತಲುಪಿದೆ.

ಐಸಿಐಸಿಐ ಬ್ಯಾಂಕ್ (ICICI Bank)

ಐಸಿಐಸಿಐ ಬ್ಯಾಂಕ್ ಎಂಸಿಎಲ್​ಆರ್ 10 ಮೂಲಾಂಶದಷ್ಟು ಹೆಚ್ಚಳವಾಗಿದೆ. ಒಂದು ತಿಂಗಳವರೆಗಿನ ಎಂಸಿಎಲ್​ಆರ್ ಶೇಕಡಾ 8.05ರಿಂದ 8.15ಕ್ಕೆ ಹೆಚ್ಚಳವಾಗಿದೆ. ಆರು ತಿಂಗಳು ಮತ್ತು 1 ವರ್ಷ ಅವಧಿಯ ಎಂಸಿಎಲ್​ಆರ್ ಕ್ರಮವಾಗಿ ಶೇಕಡಾ 8.35 ಶೇಕಡಾ 8.40ಕ್ಕೆ ಹೆಚ್ಚಿಸಲಾಗಿದೆ. ಮೂರು ತಿಂಗಳ ಎಂಸಿಎಲ್​ಆರ್ ಅನ್ನು ಶೇಕಡಾ 8.25ರಿಂದ 8.35ಕ್ಕೆ ಹೆಚ್ಚಿಸಲಾಗಿದೆ.

ಬ್ಯಾಂಕ್ ಆಫ್ ಇಂಡಿಯಾ (Bank of India)

ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್​ಆರ್ ಅನ್ನು 25 ಮೂಲಾಂಶ ಹೆಚ್ಚಿಸಿದೆ. ಒಂದು ವರ್ಷ ಅವಧಿಯ ಎಂಸಿಎಲ್​ಆರ್ ಇದೀಗ ಶೇಕಡಾ 7.95ರಿಂದ 8.15ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ, ಮೂರು ತಿಂಗಳ ಮತ್ತು ಮೂರು ವರ್ಷಗಳ ಅವಧಿಯ ಎಂಸಿಎಲ್​ಆರ್ ಅನ್ನು ಕ್ರಮವಾಗಿ ಶೇಕಡಾ 7.30, ಶೇಕಡಾ 7.65 ಹಾಗೂ ಶೇಕಡಾ 7.70ಕ್ಕೆ ಹೆಚ್ಚಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಮೇ ನಂತರ ಈವರೆಗೆ 190 ಮೂಲಾಂಶದಷ್ಟು ರೆಪೊ ದರ ಹೆಚ್ಚಳ ಮಾಡಿದೆ. ಇದಕ್ಕನುಗುಣವಾಗಿ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Thu, 1 December 22