AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Rates: ಎಫ್​ಡಿ ಬಡ್ಡಿ ದರ ಹೆಚ್ಚಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್; ಇಲ್ಲಿದೆ ವಿವರ

ಕೋಟಕ್ ಮಹೀಂದ್ರಾ ಬ್ಯಾಂಕ್ ಸ್ಥಿರ ಠೇವಣಿ ಬಡ್ಡಿ ದರ ಹೆಚ್ಚಿಸಿದ್ದು, ಇಂದಿನಿಂದಲೇ (ನವೆಂಬರ್ 30) ಅನ್ವಯವಾಗಲಿದೆ. ಈ ಕುರಿತು ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದ್ದು, 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿ ಬಡ್ಡಿ ದರ ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.

FD Rates: ಎಫ್​ಡಿ ಬಡ್ಡಿ ದರ ಹೆಚ್ಚಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್; ಇಲ್ಲಿದೆ ವಿವರ
ಕೋಟಕ್ ಮಹೀಂದ್ರಾ ಬ್ಯಾಂಕ್
TV9 Web
| Updated By: Ganapathi Sharma|

Updated on: Nov 30, 2022 | 5:56 PM

Share

ನವದೆಹಲಿ: ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಸ್ಥಿರ ಠೇವಣಿ ಬಡ್ಡಿ ದರ (FD Rates) ಹೆಚ್ಚಿಸಿದ್ದು, ಇಂದಿನಿಂದಲೇ (ನವೆಂಬರ್ 30) ಅನ್ವಯವಾಗಲಿದೆ. ಈ ಕುರಿತು ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದ್ದು, 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿ ಬಡ್ಡಿ ದರ ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ವಿವಿಧ ಎಫ್​ಡಿ ಯೋಜನೆಗಳ ಬಡ್ಡಿ ದರವನ್ನು ಶೇಕಡಾ 2.75ರಿಂದ 6.20ರ ವರೆಗೆ ಹೆಚ್ಚಿಸಲಾಗಿದೆ. ಇದೇ ಅವಧಿಗೆ ಹಿರಿಯ ನಾಗರಿಕರ ವಿವಿಧ ಎಫ್​ಡಿ ಯೋಜನೆಗಳ ಬಡ್ಡಿ ದರವನ್ನು ಶೇಕಡಾ 3.25 ರಿಂದ 6.70 ವರೆಗೆ ಹೆಚ್ಚಿಸಲಾಗಿದೆ.

23 ತಿಂಗಳುಗಳಿಂದ ತೊಡಗಿ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಯ ಗರಿಷ್ಠ ಬಡ್ಡಿ ದರವನ್ನು ಶೇಕಡಾ 6.50ಕ್ಕೆ ಹೆಚ್ಚಿಸಲಾಗಿದ್ದು, ಹಿರಿಯ ನಾಗರಿಕರ ಠೇವಣಿಗಳ ಮೇಲಿನ ಗರಿಷ್ಠ ಬಡ್ಡಿ ದರವನ್ನು ಶೇಕಡಾ 7ಕ್ಕೆ ಹೆಚ್ಚಿಸಿದೆ.

ಇದನ್ನೂ ಓದಿ: Home Loan Interest Rates: ಗೃಹ ಸಾಲ ಪಡೆಯಲಿದ್ದೀರಾ? ಈ 5 ಬ್ಯಾಂಕ್​ಗಳಲ್ಲಿ ಬಡ್ಡಿ ದರ ಕಡಿಮೆ

ಎಫ್​ಡಿ ದರ ವಿವರ ಹೀಗಿದೆ;

7ರಿಂದ 14 ದಿನಗಳ ಅವಧಿಯ ಸ್ಥಿರ ಠೇವಣಿಗೆ ಶೇಕಡಾ 2.75ರ ಬಡ್ಡಿ ನಿಗದಿಪಡಿಸಲಾಗಿದೆ. 15 ದಿನಗಳಿಂದ 30 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 3ರ ಬಡ್ಡಿ ನಿಗದಿಪಡಿಸಲಾಗಿದೆ. 31 ದಿನಗಳಿಂದ 45 ದಿನಗಳ ನಡುವಣ ಅವಧಿಯ ಹಾಗೂ 46ರಿಂದ 90 ದಿನಗಳ ಅವಧಿಯ ಎಫ್​ಡಿಗೆ ಕ್ರಮವಾಗಿ ಶೇಕಡಾ 3.25 ಹಾಗೂ ಶೇಕಡಾ 3.50ರ ಬಡ್ಡಿ ನಿಗದಿಪಡಿಸಲಾಗಿದೆ. 91ರಿಂದ 120 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 4ರ ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ. 121ರಿಂದ 179 ದಿನಗಳ ನಡುವಣ ಅವಧಿಯ ಎಫ್​ಡಿಗೆ ಶೇಕಡಾ 4.25ರ ಬಡ್ಡಿ ನಿಗದಿಪಡಿಸಲಾಗಿದೆ. 

180ರಿಂದ 270 ದಿನಗಳ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್​ಡಿಗೆ ಶೇಕಡಾ 5.50ರ ಬಡ್ಡಿ ಹಾಗೂ 271ರಿಂದ 363 ದಿನಗಳ ನಡುವೆ ಅವಧಿ ಪೂರೈಸುವ ಎಫ್​ಡಿಗೆ ಶೇಕಡಾ 5.75ರ ಬಡ್ಡಿ ನಿಗದಿಪಡಿಸಲಾಗಿದೆ. 364 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 6ರ ಬಡ್ಡಿ ಘೋಷಿಸಲಾಗಿದೆ. 365ರಿಂದ 389 ದಿನಗಳ ಎಫ್​ಡಿಗೆ ಶೇಕಡಾ 6.25ರ ಬಡ್ಡಿ ನಿರ್ಧರಿಸಲಾಗಿದೆ.

ಇದನ್ನೂ ಓದಿ: Gold Loan Interest: ಕಡಿಮೆ ಬಡ್ಡಿಗೆ ಚಿನ್ನದ ಅಡಮಾನ ಸಾಲ ನೀಡುತ್ತಿವೆ ಈ ಬ್ಯಾಂಕ್​ಗಳು

ಎರಡು ವರ್ಷಗಳಲ್ಲಿ ಅವಧಿ ಪೂರೈಸುವ ಹಾಗೂ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 6.40ರ ಬಡ್ಡಿ ನಿಗದಿಪಡಿಸಿದೆ. 3 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 4 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಗೆ ಶೇಕಡಾ 6.30ರ ಬಡ್ಡಿ ನೀಡುವುದಾಗಿ ತಿಳಿಸಿದೆ. 4 ವರ್ಷಕ್ಕಿಂತ ಹೆಚ್ಚಿನ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಗೆ ಶೇಕಡಾ 6.25ರ ಬಡ್ಡಿ ಮತ್ತು 5 ವರ್ಷ ಮೇಲ್ಪಟ್ಟ ಹಾಗೂ 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಗೆ ಶೇಕಡಾ 6.20ರ ಬಡ್ಡಿ ನಿಗದಿಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್