AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Loan Interest Rates: ಗೃಹ ಸಾಲ ಪಡೆಯಲಿದ್ದೀರಾ? ಈ 5 ಬ್ಯಾಂಕ್​ಗಳಲ್ಲಿ ಬಡ್ಡಿ ದರ ಕಡಿಮೆ

Home Loan Interest Rates; ಆರ್​ಆರ್​ಎಲ್​ಎಲ್​ಆರ್​​ನಲ್ಲಿ ರೆಪೊ ದರ, ಬ್ಯಾಂಕ್ ವಿಧಿಸುವ ಮಾರ್ಜಿನ್ ಶುಲ್ಕ ಸೇರಿಸಿ ಬಡ್ಡಿ ದರ ಲೆಕ್ಕ ಹಾಕಲಾಗುತ್ತದೆ. ಇಂಥ ಬಡ್ಡಿದರಗಳಲ್ಲಿ ಸಾಲಗಾರರಿಗೆ ಹೆಚ್ಚು ಏಕರೂಪತೆ ಮತ್ತು ಪಾರದರ್ಶಕತೆ ದೊರೆಯುತ್ತದೆ.

Home Loan Interest Rates: ಗೃಹ ಸಾಲ ಪಡೆಯಲಿದ್ದೀರಾ? ಈ 5 ಬ್ಯಾಂಕ್​ಗಳಲ್ಲಿ ಬಡ್ಡಿ ದರ ಕಡಿಮೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 29, 2022 | 12:12 PM

Share

ಹಣದುಬ್ಬರ ಏರಿಕೆ ತಡೆಯುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ (RBI) ಮೇ ತಿಂಗಳ ನಂತರ ಸೆಪ್ಟೆಂಬರ್ 30ರ ಅವಧಿಯಲ್ಲಿ ರೆಪೊ ದರವನ್ನು (Repo Rate) 190 ಮೂಲಾಂಶದಷ್ಟು ಹೆಚ್ಚಿಸಿದೆ. ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳು ಸಾಲದ ಮೇಲಿನ ಬಡ್ಡಿ ದರವನ್ನೂ (Interest Rate) ಹೆಚ್ಚಿಸಿವೆ. ಇದರಿಂದಾಗಿ ಗೃಹ ಸಾಲದ ಮೇಲಿನ ಎಂಸಿಎಲ್‌ಆರ್ ಅಥವಾ ಕನಿಷ್ಠ ಬಡ್ಡಿ ದರಗಳೂ ಹೆಚ್ಚಾಗಿವೆ. ರೆಪೊ ದರದೊಂದಿಗೆ ಸಂಯೋಜನೆಗೊಂಡಿರುವ ಸಾಲದ ದರವೂ (Repo Rate Linked Lending Rate) ಹೆಚ್ಚಾಗಿದೆ. ಈ ಮಾದರಿಯ ಸಾಲದ ದರವು ಆರ್​ಬಿಐ ರೆಪೊ ದರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಆರ್​ಆರ್​ಎಲ್​ಎಲ್​ಆರ್​​ನಲ್ಲಿ ರೆಪೊ ದರ, ಬ್ಯಾಂಕ್ ವಿಧಿಸುವ ಮಾರ್ಜಿನ್ ಶುಲ್ಕ ಸೇರಿಸಿ ಬಡ್ಡಿ ದರ ಲೆಕ್ಕ ಹಾಕಲಾಗುತ್ತದೆ. ಇಂಥ ಬಡ್ಡಿದರಗಳಲ್ಲಿ ಸಾಲಗಾರರಿಗೆ ಹೆಚ್ಚು ಏಕರೂಪತೆ ಮತ್ತು ಪಾರದರ್ಶಕತೆ ದೊರೆಯುತ್ತದೆ.

ಗೃಹ ಸಾಲದ ಅಸಲು ಮೊತ್ತವನ್ನು ಬಳಸಿಕೊಂಡದ್ದಕ್ಕೆ ಸಾಲಗಾರನಿಗೆ ಬ್ಯಾಂಕ್​ಗಳು ವಿಧಿಸುವ ಶುಲ್ಕವೇ ಬಡ್ಡಿ ದರ. ಗೃಹ ಸಾಲದ ಬಡ್ಡಿ ದರಕ್ಕೆ ಅನುಗುಣವಾಗಿ ತಿಂಗಳ ಇಎಂಐ ಮೊತ್ತವೂ ನಿರ್ಧರಿಸಲ್ಪಡುತ್ತದೆ.

ಈ ಐದು ಬ್ಯಾಂಕ್​ಗಳಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿ

  • ಕರೂರ್ ವೈಶ್ಯ ಬ್ಯಾಂಕ್​ನಲ್ಲಿ ಗೃಹ ಸಾಲಕ್ಕೆ ಆರ್​ಎಲ್​ಎಲ್​ಆರ್ ಅಥವಾ ರೆಪೊ ದರದೊಂದಿಗೆ ಸಂಯೋಜನೆಗೊಂಡಿರುವ ಬಡ್ಡಿ ದರ ಶೇಕಡಾ 9ರಷ್ಟಿದೆ. ಕನಿಷ್ಠ ಬಡ್ಡಿ ದರ ಶೇಕಡಾ 8.05 ಇದ್ದರೆ ಗರಿಷ್ಠ ಬಡ್ಡಿ ದರ ಶೇಕಡಾ 10.25 ಇದೆ.
  • ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಗೃಹ ಸಾಲಕ್ಕೆ ಆರ್​ಎಲ್​ಎಲ್​ಆರ್ ಬಡ್ಡಿ ದರ ಶೇಕಡಾ 8.1ರಷ್ಟಿದೆ. ಕನಿಷ್ಠ ಬಡ್ಡಿ ದರ ಶೇಕಡಾ 8.1 ಇದ್ದರೆ ಗರಿಷ್ಠ ಬಡ್ಡಿ ದರ ಶೇಕಡಾ 8.9 ಇದೆ.
  • ಕರ್ಣಾಟಕ ಬ್ಯಾಂಕ್​ನಲ್ಲಿ ಗೃಹ ಸಾಲಕ್ಕೆ ಆರ್​ಎಲ್​ಎಲ್​ಆರ್ ಬಡ್ಡಿ ದರ ಶೇಕಡಾ 7.95ರಷ್ಟಿದೆ. ಕನಿಷ್ಠ ಬಡ್ಡಿ ದರ ಶೇಕಡಾ 8.24 ಇದ್ದರೆ ಗರಿಷ್ಠ ಬಡ್ಡಿ ದರ ಶೇಕಡಾ 9.59 ಇದೆ.
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲಕ್ಕೆ ಆರ್​ಎಲ್​ಎಲ್​ಆರ್ ಬಡ್ಡಿ ದರ ಶೇಕಡಾ 8.7ರಷ್ಟಿದೆ. ಕನಿಷ್ಠ ಬಡ್ಡಿ ದರ ಶೇಕಡಾ 8.25 ಇದ್ದರೆ ಗರಿಷ್ಠ ಬಡ್ಡಿ ದರ ಶೇಕಡಾ 10.1 ಇದೆ.
  • ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಗೃಹ ಸಾಲಕ್ಕೆ ಆರ್​ಎಲ್​ಎಲ್​ಆರ್ ಬಡ್ಡಿ ದರ ಶೇಕಡಾ 8.7ರಷ್ಟಿದೆ. ಕನಿಷ್ಠ ಬಡ್ಡಿ ದರ ಶೇಕಡಾ 8.3 ಇದ್ದರೆ ಗರಿಷ್ಠ ಬಡ್ಡಿ ದರ ಶೇಕಡಾ 9.7 ಇದೆ.

ಇದನ್ನೂ ಓದಿ: ITR Refund Status: ಐಟಿಆರ್ ರಿಫಂಡ್ ಸ್ಥಿತಿಗತಿ ಆನ್​ಲೈನ್​ನಲ್ಲಿ ಪರಿಶೀಲಿಸಲು ಹೀಗೆ ಮಾಡಿ

ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು…

ಗೃಹ ಸಾಲದ ಬಡ್ಡಿ ದರ ನಿರ್ಧರಿಸುವಲ್ಲಿ ಹಲವು ಅಂಶಗಳು ಪರಿಣಾಮ ಬೀರುತ್ತವೆ. ಎಚ್​ಡಿಎಫ್​ಸಿ ಬ್ಯಾಂಕ್​ ವೆಬ್​ಸೈಟ್​ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಬಡ್ಡಿ ದರದ ವಿಧಾನ, ಬೆಂಚ್​ಮಾರ್ಕ್ ಲೆಂಡಿಂಗ್ ರೇಟ್, ಸಾಲದ ಮೌಲ್ಯದ ಅನುಪಾತ, ಸಾಲಗಾರನ ಹಣಕಾಸಿನ ವಿವರ, ಮರುಪಾವತಿ ಅವಧಿ, ಆಸ್ತಿ ಇರುವ ಸ್ಥಳ ಹಾಗೂ ಸಾಲ ನೀಡುವ ಬ್ಯಾಂಕ್​​ ಈ ಎಲ್ಲ ಅಂಶಗಳು ಬಡ್ಡಿ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ