How to: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಕ್ರಮಗಳೇನು? ಹೂಡಿಕೆ ಮಾಡುವ ಮುನ್ನ ತಿಳಿದಿರಬೇಕಾದ ವಿಚಾರಗಳಿವು…

|

Updated on: Dec 18, 2023 | 4:21 PM

Mutual Funds Investments: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಮುನ್ನ ನಿಮ್ಮಲ್ಲಿ ಲಭ್ಯ ಇರುವ ಹಣ, ಮುಂದಿನ ಆದಾಯ ಎಲ್ಲವನ್ನೂ ಪರಿಗಣಿಸಬೇಕು. ರಿಸ್ಕ್ ಪ್ರಮಾಣ ಕಡಿಮೆ ಮಾಡಲು ಕೆಲ ಹೂಡಿಕೆಯನ್ನು ಎಫ್​ಡಿ, ಗವರ್ನ್ಮೆಂಟ್ ಬಾಂಡ್ ಇತ್ಯಾದಿಯಲ್ಲಿ ಹಾಕಬೇಕು. ಸಾಕಷ್ಟು ಮ್ಯುಚುವಲ್ ಫಂಡ್ ಕಂಪನಿಗಳಿದ್ದು, ಪ್ರತಿಯೊಂದು ಸಂಸ್ಥೆಯೂ ವಿವಿಧ ಮ್ಯುಚುವಲ್ ಫಂಡ್​ಗಳನ್ನು ನಿರ್ವಹಿಸುತ್ತದೆ.

How to: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಕ್ರಮಗಳೇನು? ಹೂಡಿಕೆ ಮಾಡುವ ಮುನ್ನ ತಿಳಿದಿರಬೇಕಾದ ವಿಚಾರಗಳಿವು...
ಮ್ಯುಚುವಲ್ ಫಂಡ್
Follow us on

ಮ್ಯೂಚುವಲ್ ಫಂಡ್​ನಲ್ಲಿ ನೀವು ಹೂಡಿಕೆ ಮಾಡಲು ನಿರ್ಧರಿಸಿದ್ದು, ಹಣ ಹಾಕುವ ಮುನ್ನ ಒಂದಿಷ್ಟು ವಿಚಾರಗಳನ್ನು ತಿಳಿದಿರಬೇಕು. ಎಲ್ಲಾ ಮ್ಯುಚುವಲ್ ಫಂಡ್​ಗಳೂ (Mutual Funds) ಭರ್ಜರಿ ಲಾಭ ತರಲ್ಲ. ನಷ್ಟ ತರುವ ಫಂಡ್​ಗಳೂ ಇರುತ್ತವೆ ಎಂಬ ಕಟುವಾಸ್ತವ ಸತ್ಯ ತಿಳಿದಿರಬೇಕು. ಮಾರುಕಟ್ಟೆಯಲ್ಲಿರುವ ವಿವಿಧ ಮ್ಯುಚುವಲ್ ಫಂಡ್​ಗಳನ್ನು ಅವಲೋಕಿಸಿ. ಹಿಂದಿನ ಕೆಲವಾರು ವರ್ಷಗಳಿಂದ ಅವು ಎಷ್ಟು ರಿಟರ್ನ್ ವಿಚಾರದಲ್ಲಿ ಎಷ್ಟು ಸ್ಥಿರತೆ ಹೊಂದಿವೆ ಎಂಬುದನ್ನು ಅವಲೋಕಿಸಿ.

ಇದಕ್ಕೆ ಮುನ್ನ, ನಿಮ್ಮ ಹೂಡಿಕೆಯ ಸಾಮರ್ಥ್ಯ ಎಷ್ಟು; ಎಷ್ಟು ಹಣ ಹೂಡಿಕೆಗೆ ಲಭ್ಯ ಇದೆ ಎಂಬುದು ಮುಖ್ಯ. ಇದರಲ್ಲಿ ಎಮರ್ಜೆನ್ಸಿ ವೆಚ್ಚಕ್ಕೆ ಒಂದಿಷ್ಟು ಹಣವನ್ನು ಆರ್​ಡಿ, ಎಫ್​ಡಿಯಂತಹುಗಳಲ್ಲಿ ಹಾಕಿರಿ.

ಇದನ್ನೂ ಓದಿ: Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ

ಮ್ಯುಚುವಲ್ ಫಂಡ್​ನಲ್ಲಿ ಹೇಗೆ ಹೂಡಿಕೆ?

ಆನ್​ಲೈನ್​ನಲ್ಲೇ ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಸಾಕಷ್ಟು ಮ್ಯುಚುವಲ್ ಫಂಡ್ ಕಂಪನಿಗಳಿವೆ. ಅವುಗಳ ಪ್ರತ್ಯೇಕ ಆ್ಯಪ್​ಗಳಿವೆ. ಜೊತೆಗೆ ಪೇಟಿಎಂ ಇತ್ಯಾದಿ ಥರ್ಡ್ ಪಾರ್ಟಿ ಫಂಡ್ ಅಗ್ರಿಗೇಟರ್​ಗಳೂ ಇರುತ್ತವೆ. ಅಲ್ಲಿಯೂ ನೀವು ಮ್ಯುಚುವಲ್ ಫಂಡ್ ಮೇಲೆ ಹೂಡಿಕೆ ಮಾಡಬಹುದು.

ಡಿಮ್ಯಾಟ್ ಅಕೌಂಟ್ ಇಲ್ಲದೆಯೂ ಮ್ಯುಚುವಲ್ ಫಂಡ್​ನಲ್ಲಿ ಹಣ ತೊಡಗಿಸಬಹುದು. ಅದಕ್ಕೆ ಫೋಲಿಯೋ ಅಕೌಂಟ್ ತೆರೆಯಬಹುದು. ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ಆಧಾರ್ ಮತ್ತು ಪ್ಯಾನ್ ನಂಬರ್ ಅನ್ನು ಕೆವೈಸಿ ದಾಖಲೆಯಾಗಿ ಪಡೆಯಲಾಗುತ್ತದೆ.

ಇದನ್ನೂ ಓದಿ: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಆಲೋಚನೆಯಾ? ಫೈವ್ ಸ್ಟಾರ್ ರೇಟಿಂಗ್ ಇರುವ ಜನಪ್ರಿಯ ಫಂಡ್​ಗಳಿವು…

ಅಂತಿಮವಾಗಿ, ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿದಾಗ ಅದು ಉಚಿತ ಇರುವುದಿಲ್ಲ. ವಿವಿಧ ಶುಲ್ಕಗಳಿರುತ್ತವೆ. ಎಂಟ್ರಿ ಲೋಡ್, ಎಕ್ಸಿಟ್ ಲೋಡ್, ಟ್ರಾನ್ಸಾಕ್ಷನ್ ಶುಲ್ಕ, ಎಕ್ಸ್​ಪೆನ್ಸ್ ರೇಶಿಯೋ ಇತ್ಯಾದಿ ತಿಳಿದಿರಲಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Mon, 18 December 23