Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ

Financial Distress: ಹಣಕಾಸು ಸಂಕಷ್ಟದಿಂದ ಹೊರಬರುವ ಮಾರ್ಗಗಳೇನು ಎಂಬುದು ತಿಳಿದಿರಲಿ. ಖರ್ಚುಗಳು ನಿಮ್ಮ ಹತೋಟಿಯಲ್ಲಿರಲಿ. ಅನಗತ್ಯ ವೆಚ್ಚಗಳನ್ನು ನಿಲ್ಲಿಸಿ, ಅಗತ್ಯ ಇದ್ದರಷ್ಟೇ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ. ಸಾಲ ಇದ್ದರೆ ಅದನ್ನು ತೀರಿಸುವುದಕ್ಕೆ ಮೊದಲ ಆದ್ಯತೆ ಇರಲಿ. ಯಾವತ್ತೂ ಸಾಲದ ಸುಳಿಗೆ ಸಿಲುಕದಿರುವ ಸಂಕಲ್ಪ ಮಾಡಿ.

Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ
ಹಣ ನಿರ್ವಹಣೆ
Follow us
|

Updated on: Dec 18, 2023 | 3:37 PM

ದುಡ್ಡಿಗೆ ಹೆಚ್ಚು ಕಿಮ್ಮತ್ತು ಕೊಡಲ್ಲ ಎಂದು ನಾವು ಹೇಳಿದರೂ ಹಣ ಯಾವತ್ತೂ ಮುಖ್ಯವೇ. ಹಣ ಸಂಪಾದನೆ ಚೆನ್ನಾಗಿದ್ದಾಗ ಮತ್ತು ಖರ್ಚು ವೆಚ್ಚಗಳು ಇತಿಮಿತಿಯಲ್ಲಿ ಇರುವಾಗ ನಮಗೆ ಹಣ ಎಷ್ಟು ಮೌಲ್ಯದ್ದು (Value of money) ಎಂಬುದು ಅರಿವಿಗೆ ಬರುವುದಿಲ್ಲ. ಒಮ್ಮೆ ಕಷ್ಟಗಳು ಬರತೊಡಗಿದಾಗಲೇ ಗೊತ್ತಾಗುವುದು ದುಡ್ಡಿನ ಬೆಲೆ. ಹತ್ತಾರು ವರ್ಷ ದುಡಿದರೂ ಬ್ಯಾಂಕ್ ಖಾತೆಯಲ್ಲಿ 10,000 ರೂ ಕೂಡ ಬ್ಯಾಲನ್ಸ್ ಹೊಂದಿಲ್ಲದಿರುವವರ ಸಂಖ್ಯೆ ಬಹಳ ಹೆಚ್ಚಿದೆ. ಬಹಳಷ್ಟು ಜನರು ಸಾಲಗಳ ಸುಳಿಗೆ ಸಿಕ್ಕು ಗಿರಕಿ ಹೊಡೆಯುತ್ತಿರುತ್ತಾರೆ. ಹಣ ನನ್ನ ಕೈಲಿ ನಿಲ್ಲೋದಿಲ್ಲ ಎಂದು ಪರಿತಪಿಸುತ್ತಿರುತ್ತಾರೆ. ಅವರ ಈ ಸಂಕಷ್ಟಕ್ಕೆ ಕಾರಣ (money management) ಏನು?

ಕೈತಪ್ಪಿದ ಖರ್ಚು…

ಬಹಳ ಜನರು ತಮ್ಮ ಖರ್ಚಿನ ಮೇಲೆ ಕಣ್ಣಿಟ್ಟಿರುವುದಿಲ್ಲ. ಏನೂ ಖರ್ಚು ಮಾಡಿಲ್ಲ ಅಂತ ಅನಿಸಿದರೂ ಸಾಕಷ್ಟು ವೆಚ್ಚ ಮಾಡಿರುತ್ತಾರೆ. ಅಪರೂಪಕ್ಕೆ ನೋಡುವ ವಿವಿಧ ವಾಹಿನಿಗಳು, ಒಟಿಟಿಗಳಿಗೆ ಸಬ್​ಸ್ಕ್ರೈಬ್ ಆಗಿರುತ್ತಾರೆ. ಅನಗತ್ಯವಾಗಿ ಮೊಬೈಲ್ ನಂಬರ್​ಗಳನ್ನು ಇಟ್ಟುಕೊಂಡು ಅದಕ್ಕೆ ಡಾಟಾ ತುಂಬಿಸಲು ಹಣ ವ್ಯಯಿಸುವುದುಂಟು. ಹೀಗೆ ನಮಗೆ ಗೊತ್ತಿಲ್ಲದೆ ಸಾಕಷ್ಟು ಅನಗತ್ಯ ವೆಚ್ಚ ಮಾಡುತ್ತಿರುತ್ತೇವೆ.

ಈ ಅಜ್ಞಾತ ಖರ್ಚನ್ನು ಗುರುತಿಸಬೇಕೆಂದರೆ ಪ್ರತೀ ದಿನವೂ ನಿಮ್ಮ ವೆಚ್ಚದ ವಿವರವನ್ನು ದಾಖಲಿಸಲು ಶುರು ಮಾಡಿ. ಒಂದು ತಿಂಗಳ ಬಳಿಕ ಎಲ್ಲಾ ಖರ್ಚುಗಳನ್ನು ವರ್ಗೀಕರಣ ಮಾಡಿ. ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂಬ ಸ್ಪಷ್ಟ ವಿವರ ನಿಮಗೆ ಸಿಗುತ್ತದೆ. ಅದರಲ್ಲಿ ಅನಗತ್ಯ ವೆಚ್ಚ ಯಾವುದು, ಯಾವ ವೆಚ್ಚವನ್ನು ಉಳಿಸಬಹುದು ಎಂಬುದನ್ನು ನಾವು ತಿಳಿಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ವರಮಾನ ಹೆಚ್ಚಿಸಲು ಪ್ರಯತ್ನಿಸಿ…

ನಾವು ಸಾಮಾನ್ಯವಾಗಿ ಒಂದೇ ಕೆಲಸದಲ್ಲಿ ಅಥವಾ ಉದ್ಯೋಗದಲ್ಲಿ ನಿರತರಾಗಿರುತ್ತೇವೆ. ಮಧ್ಯದಲ್ಲಿ ಬೇರೆ ಆದಾಯ ತರುವ ಬಿಸಿನೆಸ್ ಅಥವಾ ಉದ್ಯೋಗ ಸಾಧ್ಯವೇ ಎಂದು ಅವಲೋಕಿಸಿ. ನಿಮ್ಮ ಉದ್ಯೋಗದಲ್ಲಿ ಉನ್ನತ ಹಂತಕ್ಕೆ ಬಡ್ತಿ ಸಿಗಲು ಬೇಕಾದ ಕೌಶಲ್ಯ ಏನು ಎಂದು ಅರಿತು ಅದರನ್ನು ಪಡೆಯಲು ಪ್ರಯತ್ನಿಸಿ.

ಅಥವಾ, ಬಿಡುವಿನ ಸಮಯದಲ್ಲಿ ಫ್ರೀಲಾನ್ಸ್ ಕೆಲಸ ಮಾಡಲು ಸಾಧ್ಯವೇ ಎಂಬುದನ್ನು ನೋಡಿ. 50,000 ರೂ ಸಂಬಳ ಬರುತ್ತಿದ್ದರೆ, ಅದರ ಜೊತೆಗೆ ಹೆಚ್ಚುವರಿ 20,000 ರೂ ಆದಾಯ ಬಂದರೆ ಸಾಕಷ್ಟು ಉಪಯೋಗ ಆಗುತ್ತದೆ.

ಆದಾಯ ಹೆಚ್ಚಿದರೆ ಖರ್ಚೂ ಹೆಚ್ಚಿಸಬಾರದು…

ಇದು ಬಹಳ ಮುಖ್ಯ. ಬಹಳ ಜನರು ಆದಾಯ ಹೆಚ್ಚಾಗುತ್ತಿರುವಂತೆಯೇ ಅದಕ್ಕೆ ತಕ್ಕಂತ ಬೇರೆ ಬೇರೆ ಕಮಿಟ್ಮೆಂಟ್ ಮಾಡಿಕೊಳ್ಳುತ್ತಾರೆ. ಇದು ತಪ್ಪು. ಅಗತ್ಯಗಳಿಗೆ ಮಾತ್ರ ನಿಮ್ಮ ಖರ್ಚು ಇರಲಿ.

ಸಾಲ ತೀರಿಸಲು ಮೊದಲ ಆದ್ಯತೆ

ನೀವು ಹಣಕಾಸು ಸಂಕಷ್ಟದಿಂದ ಹೊರಬರಲು ಸಾಲದಿಂದ ಹೊರಬರುವುದು ಮುಖ್ಯ. ಯಾವುದೇ ಕಾರಣಕ್ಕೂ ಸಾಲದ ಶೂಲಕ್ಕೆ ಸಿಲುಕಬೇಡಿ. ಕ್ರೆಡಿಟ್ ಕಾರ್ಡ್​ಗಳ ಗೋಜಲುಗಳ ಬಗ್ಗೆ ಎಚ್ಚರ ಇರಲಿ. ಸಾಲ ಇದ್ದರೆ ಅದನ್ನು ತೀರಿಸುವುದು ನಿಮ್ಮ ಮೊದಲ ಆದ್ಯತೆ ಆಗಿರಬೇಕು. ಅಲ್ಲಿಯವರೆಗೆ ನಿಮ್ಮ ಆಸೆಗಳನ್ನು ಅದುಮಿಟ್ಟುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಎಫ್​ಡಿಯಿಂದ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯವೇ? ನಿಶ್ಚಿತ ಠೇವಣಿ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

ಹೂಡಿಕೆ ಮಾಡಿ…

ನಿಮಗೆ ಬರುವ ಆದಾಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಭಾಗವನ್ನು ಉಳಿಸಿ ಅಷ್ಟನ್ನೂ ಹೂಡಿಕೆ ಮಾಡಿ. ನಿಮ್ಮ ಹೂಡಿಕೆ ಒಂದೇ ಕಡೆ ಇರುವ ಬದಲು ವೈವಿಧ್ಯತೆ ಇರಲಿ.

ಆರ್​ಡಿ, ಎಫ್​ಡಿಗಳಿಗೆ ಕೆಲವಿಷ್ಟು ಹಣ ವಿನಿಯೋಗವಾಗಲಿ. ಪಿಪಿಎಫ್, ಸಾವರೀನ್ ಗೋಲ್ಡ್ ಬಾಂಡ್, ಮ್ಯುಚುವಲ್ ಫಂಡ್​ಗಳಲ್ಲಿ ನಿಮ್ಮ ಹೂಡಿಕೆಗಳಿರಲಿ. ಮ್ಯುಚುವಲ್ ಫಂಡ್​ನಲ್ಲೇ ಬೇರೆ ಬೇರೆ ವಿಭಾಗದ ಫಂಡ್​ಗಳಿಗೆ ನಿಮ್ಮ ಹೂಡಿಕೆ ವ್ಯಾಪಿಸಿರಲಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು