ಎಫ್​ಡಿಯಿಂದ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯವೇ? ನಿಶ್ಚಿತ ಠೇವಣಿ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

Fixed Deposit Montly Income Plan: ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಪ್ಲಾನ್​​ಗಳಲ್ಲಿ ಎರಡು ವಿಧ: ಕ್ಯುಮುಲೇಟಿವ್ ಮತ್ತು ನಾನ್ ಕ್ಯುಮುಲೇಟಿವ್ ಎಫ್​ಡಿ ಎಂಬ ಆಯ್ಕೆಗಳಿರುತ್ತವೆ. ಕ್ಯುಮುಲೇಟಿವ್ ಎಫ್​ಡಿಯಲ್ಲಿ ಮೆಚ್ಯೂರಿಟಿ ಬಳಿಕ ಅಸಲು ಮತ್ತು ಬಡ್ಡಿ ಎರಡೂ ಒಟ್ಟಿಗೆ ಬರುತ್ತದೆ. ನಾನ್ ಕ್ಯುಮುಲೇಟಿವ್ ಎಫ್​ಡಿಯಲ್ಲಿ ನಿಯಮಿತ ಪೇಔಟ್ ಪಡೆಯಬಹುದು. ಮಾಸಿಕ ಆದಾಯ ಸೃಷ್ಟಿಸಿಕೊಳ್ಳಬಹುದು.

ಎಫ್​ಡಿಯಿಂದ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯವೇ? ನಿಶ್ಚಿತ ಠೇವಣಿ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು
ಎಫ್​ಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 12, 2023 | 6:00 PM

ಭಾರತದಲ್ಲಿ ಅತಿ ಸಾಮಾನ್ಯವಾಗಿ ಬಳಕೆ ಆಗುವ ಹೂಡಿಕೆ ಮಾರ್ಗಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (fixed deposit) ಪ್ರಮುಖವಾದುದು. ಮಾರುಕಟ್ಟೆ ವೈಪರೀತ್ಯಕ್ಕೆ ಒಳಪಡದ ಅವಧಿ ಠೇವಣಿ ಸ್ಕೀಮ್ ಇದಾದ್ದರಿಂದ ಆದಾಯ ಸ್ಥಿರ ಹಾಗೂ ನಿಶ್ಚಿತವಾಗಿರುತ್ತದೆ. ಸಾಮಾನ್ಯವಾಗಿ ಎಫ್​ಡಿಯಲ್ಲಿ ನಿಶ್ಚಿತ ಮೊತ್ತದ ಠೇವಣಿಯನ್ನು ನಿಶ್ಚಿತ ಅವಧಿಯವರೆಗೆ ಠೇವಣಿ ಇಡಲಾಗುತ್ತದೆ. ಮೆಚ್ಯೂರಿಟಿ ಬಳಿಕ ಬಡ್ಡಿ ಸೇರಿ ರಿಟರ್ನ್ ಸಿಗುತ್ತದೆ. ಆದರೆ, ಎಫ್​ಡಿಯಿಂದ ಮಾಸಿಕ ಆದಾಯವನ್ನೂ (FD monthly income) ಸೃಷ್ಟಿಸಲು ಸಾಧ್ಯವಿದೆ. ಎಫ್​ಡಿ ಮಾಸಿಕ ಆದಾಯ ಪ್ಲಾನ್​ನಿಂದ ಇದು ಸಾಧ್ಯವಾಗುತ್ತದೆ.

ಏನಿದು ನಿಶ್ಚಿತ ಠೇವಣಿ ಮಾಸಿಕ ಆದಾಯ ಯೋಜನೆ?

ನೀವು ಎಫ್​ಡಿ ಮಾಡಿಸುವಾಗ ಎರಡು ಆಯ್ಕೆಗಳಿರುತ್ತವೆ. ಒಂದು, ಕ್ಯುಮುಲೇಟಿವ್ ಎಫ್​ಡಿ; ಮತ್ತೊಂದು ನಾನ್ ಕ್ಯುಮುಲೇಟಿವ್ ಎಫ್​ಡಿ. ಕ್ಯುಮುಲೇಟಿವ್ ಎಫ್​ಡಿಯಲ್ಲಿ ಠೇವಣಿ ಹಣವು ಮೆಚ್ಯೂರಿಟಿ ಬಳಿಕ ಅಸಲು ಮತ್ತು ಬಡ್ಡಿ ಸಮೇತ ಮರಳುತ್ತದೆ.

ನಾನ್ ಕ್ಯುಮುಲೇಟಿವ್ ಎಫ್​ಡಿ ಪ್ಲಾನ್​ನಲ್ಲಿ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಖಾತೆದಾರರಿಗೆ ವರ್ಗಾಯಿಸಲಾಗುತ್ತದೆ. ಈ ಪೇಔಟ್ ಅವಧಿಯನ್ನು ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಎಂದು ನಿಗದಿ ಮಾಡಬಹುದು. ಈ ಮೂಲಕ ಮಾಸಿಕ ಆದಾಯ ಸೃಷ್ಟಿಸಿಕೊಳ್ಳಬಹುದು.

ಇದನ್ನೂ ಓದಿ: Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್

ಎಫ್​ಡಿ ಬಗ್ಗೆ ಈ ಕೆಲ ವಿಚಾರ ತಿಳಿದಿರಲಿ…

  • ಟ್ಯಾಕ್ಸ್ ಸೇವರ್ ಎಫ್​ಡಿ ಖಾತೆಯನ್ನು ತೆರೆದರೆ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
  • ಒಂದು ಹಣಕಾಸು ವರ್ಷದಲ್ಲಿ ಬಡ್ಡಿ ಆದಾಯ 40,000 ರೂಗಿಂತ ಹೆಚ್ಚಿದ್ದರೆ ಬ್ಯಾಂಕ್ ನೇರವಾಗಿ ಆ ಹಣಕ್ಕೆ ಶೇ. 10ರಷ್ಟು ಟಿಡಿಎಸ್ ಮುರಿದುಕೊಳ್ಳುತ್ತದೆ.
  • ಎಫ್​ಡಿ ಆರಂಭಿಸುವುದು ಬಹಳ ಸುಲಭ. ಆನ್​ಲೈನ್​ನಲ್ಲೂ ಮಾಡಬಹುದು. ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ.
  • ಫಿಕ್ಸೆಡ್ ಡೆಪಾಸಿಟ್ ಹಣದ ಮೇಲೆ ಸಾಲ ಸೌಲಭ್ಯ ಸಿಗುತ್ತದೆ.
  • ಅಗತ್ಯಿಬಿದ್ದರೆ ಒಂದಷ್ಟು ಶುಲ್ಕ ಅಥವಾ ದಂಡ ಪಾವತಿಸಿ ಎಫ್​ಡಿ ಖಾತೆಯನ್ನು ಅವಧಿಗೆ ಮುನ್ನ ನಿಲ್ಲಿಸಿ, ಹಣ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ