ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ (investment in mutual funds) ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಷೇರು ಮಾರುಕಟ್ಟೆಗೆ ಜೋಡಿತವಾದ ಮ್ಯುಚುವಲ್ ಫಂಡ್ಗಳು ಜನರ ನಿರೀಕ್ಷೆ ಹೆಚ್ಚಿಸಿವೆ. ಅಂತೆಯೇ, ಮ್ಯುಚುವಲ್ ಫಂಡ್ಗಳಲ್ಲೋ ಅಥವಾ ನೇರವಾಗಿ ಷೇರುಗಳಲ್ಲೋ ಹೂಡಿಕೆ ಮಾಡುವ ಮುನ್ನ ಷೇರುಪೇಟೆಯ ಸ್ಥಿತಿಗತಿ ನೋಡಿರಿ, ಅವಲೋಕಿಸಿರಿ ಎಂದು ಸಲಹೆ ಕೊಡುವವರು ಇದ್ದಾರೆ. ಆದರೆ, ಮ್ಯುಚುವಲ್ ಫಂಡ್ನಲ್ಲಿ ಹಣ ಹೂಡಿಕೆ ಮಾಡಲು ಆ ಸಮಯ, ಈ ಸಮಯ ಎಂದು ಕಾಯಬೇಕಿಲ್ಲ. ಸಾಧ್ಯವಾದಷ್ಟೂ ಬೇಗ ಮತ್ತು ಹೂಡಿಕೆ ಶಕ್ತಿ ಬಂದಿದೆ ಎಂದನಿಸಿದಲ್ಲಿ ಕೂಡಲೇ ಹೂಡಿಕೆ ಮಾಡಿರಿ. ಅದೇ ಬೆಸ್ಟ್ ಎಂದು ಹೇಳುತ್ತಾರೆ ತಜ್ಞರು.
ಭವಿಷ್ಯದಲ್ಲಿ ಮಾರುಕಟ್ಟೆ ಹೇಗೆ ಸಾಗುತ್ತದೆ ಎಂದು ನಿಖರವಾಗಿ ಅಂದಾಜಿಸಲು ಯಾರಿಂದಲೂ ಸಾಧ್ಯವಿಲ್ಲ. ಇಸ್ರೇಲ್ ಹಮಾಸ್, ರಷ್ಯಾ ಉಕ್ರೇನ್ನಂಥ ಯುದ್ಧವನ್ನು ಪೂರ್ವದಲ್ಲೇ ತಿಳಿಯಲು ಆಗುತ್ತದೆಯೇ? ಆದರೆ, ನೀವು ಹೂಡಿಕೆ ಮಾಡುವ ಸ್ಥಿತಿಯಲ್ಲಿ ಇದ್ದರೆ, ಅಂದರೆ, ನಿಮ್ಮ ಹಣಕಾಸು ಪರಿಸ್ಥಿತಿಯು ಹೂಡಿಕೆಗೆ ಅವಶ್ಯವಿರುವಷ್ಟು ಇದ್ದಲ್ಲಿ ತಡಮಾಡದೇ ಎಸ್ಐಪಿ ಆರಂಭಿಸಿ. ನಿಮ್ಮ ಹೂಡಿಕೆ ದೀರ್ಘ ಕಾಲವಾದಷ್ಟೂ ಕಾಂಪೌಂಡಿಂಗ್ ಮ್ಯಾಜಿಕ್ ನಿಮಗೆ ಹೆಚ್ಚು ರಿಟರ್ನ್ ತರಬಲ್ಲುದು.
ಇದನ್ನೂ ಓದಿ: ಒಂದೇ ಸಣ್ಣ ತಂತ್ರ; 1 ಕೋಟಿ ಬದಲು 11 ಕೋಟಿ ರೂ ರಿಟರ್ನ್; ಇದು ಸ್ಟೆಪ್ ಅಪ್ ಹೂಡಿಕೆ ಸೂತ್ರ
ನೀವು ಯಾವಾಗ ಬೇಕಾದರೂ ಹೂಡಿಕೆ ಆರಂಭಿಸಿ ಎಂದರೆ ಯಾವ ಮ್ಯುಚುವಲ್ ಫಂಡ್ ಅನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದಾಗುವುದಿಲ್ಲ. ಮ್ಯುಚುವಲ್ ಫಂಡ್ ಆರಿಸುವಾಗ ಎಚ್ಚರ ವಹಿಸಿ. ಇತ್ತೀಚಿನ ವರ್ಷಗಳಲ್ಲಿ ತೀರಾ ಹೆಚ್ಚು ರಿಟರ್ನ್ ತಂದಿರುವ ಮ್ಯುಚುವಲ್ ಫಂಡ್ಗಳಿಂದ ದೂರ ಇರಿ. ಯಾಕೆಂದರೆ, ಈ ಫಂಡ್ಗಳು ತಮ್ಮ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಅವು ಮುಂದೆ ಕುಸಿತ ಕಾಣುವ ಸಾಧ್ಯತೆ ಇರುತ್ತದೆ.
ಹೀಗಾಗಿ, ಇನ್ನೂ ಹೆಚ್ಚಿನ ರಿಟರ್ನ್ ಮಟ್ಟಕ್ಕೆ ಹೋಗದ ಮ್ಯುಚುವಲ್ ಫಂಡ್ನಲ್ಲಿ ಎಸ್ಐಪಿ ಅರಂಭಿಸಿ. ಅದರಲ್ಲೂ ಹೊಸಬರಾಗಿದ್ದವರಿಗೆ ಈ ತಂತ್ರ ಬಹಳ ಅನುಕೂಲವಾಗುತ್ತದೆ. ರಿಸ್ಕ್ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆಯೇ, ನೀವು ಹೊಸಬರಾಗಿದ್ದರೆ ಮೊದಲು ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸಿ. ಇದರಿಂದ ನಷ್ಟವಾದರೂ ಹೆಚ್ಚು ಹೊರೆ ಎನಿಸುವುದಿಲ್ಲ. ಷೇರುಪೇಟೆಯ ವರ್ತನೆ ಬಗ್ಗೆ ನಿಮಗೊಂದು ಅಂದಾಜು ಸಿಕ್ಕ ಬಳಿಕ ಮತ್ತು ಹೆಚ್ಚು ಅನುಭವ ಸಿಕ್ಕ ಬಳಿಕ ಹೂಡಿಕೆ ಹೆಚ್ಚಿಸಬಹುದು.
ಇದನ್ನೂ ಓದಿ: Crorepati: 10,000 ರೂ ಎಸ್ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ
ಹಾಗೊಂದು ವೇಳೆ ನೀವು ಹೂಡಿಕೆ ಆರಂಭಿಸಲು ತಯಾರಾಗಿದ್ದರೆ ಮೊದಲು ಸೂಕ್ತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ಅವರಿಂದ ಕೆಲ ಟಿಪ್ಸ್ ಪಡೆದು ಮುಂದುವರಿಯಿರಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ