AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್ಪಿಎಸ್ ಸ್ವಾಸ್ಥ್ಯ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಈ ಹೆಲ್ತ್ ಸ್ಕೀಮ್ ಯಾವುದು?

NPS Swasthya pension scheme: ನ್ಯಾಷನಲ್ ಪೆನ್ಷನ್ ಸಿಸ್ಟಂ ಅಡಿಯಲ್ಲಿ ಸ್ವಾಸ್ಥ್ಯ ಸ್ಕೀಮ್​ನ ಎರಡನೇ ಪಿಒಸಿಯನ್ನು ಏಪ್ರಿಲ್ 7ರಂದು ಆರಂಭಿಸಲಾಗಿದೆ. 18ರಿಂದ 85 ವರ್ಷ ವಯಸ್ಸಿನವರು ಈ ಸ್ಕೀಮ್ ಪಡೆಯಬಹುದು. ಸ್ವಾಸ್ಥ್ಯ ಪೆನ್ಷನ್ ಸ್ಕೀಮ್​ನಲ್ಲಿ ಮಾಡಿರುವ ಹೂಡಿಕೆಯನ್ನು ವೈದ್ಯಕೀಯ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ಕೊಡುತ್ತದೆ.

ಎನ್ಪಿಎಸ್ ಸ್ವಾಸ್ಥ್ಯ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಈ ಹೆಲ್ತ್ ಸ್ಕೀಮ್ ಯಾವುದು?
ಹೆಲ್ತ್​ಕೇರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2026 | 6:40 PM

Share

ಪೆನ್ಷನ್ ಫಂಡ್​ಗಳ ಪ್ರಾಧಿಕಾರವಾದ ಪಿಎಫ್​ಆರ್​ಡಿಎ ಮೊನ್ನೆಯಷ್ಟೆ (ಏಪ್ರಿಲ್ 7) ಎನ್​ಪಿಎಸ್ ಸ್ವಾಸ್ಥ್ಯ ಸ್ಕೀಮ್​ನ (NPS Swasthya) ಎರಡನೇ ಪ್ರೂಫ್ ಆಫ್ ಕಾನ್ಸೆಪ್ಟ್ (PoC- Proof of Concept) ಅನ್ನು ಅನಾವರಣಗೊಳಿಸಿತು. ನ್ಯಾಷನಲ್ ಪೆನ್ಷನ್ ಸಿಸ್ಟಂನ ಗ್ರಾಹಕರಿಗೆ ರಿಟೈರ್ಮೆಂಟ್ ಸೇವಿಂಗ್ಸ್ ಹಣವನ್ನು ಹೆಲ್ತ್​ಕೇರ್ ವೆಚ್ಚಕ್ಕೆ ಬಳಸಲು ಅವಕಾಶ ಕೊಡುವ ಕೆಲ ನಿಯಮಗಳನ್ನು ಹಾಕಿದೆ.

ನ್ಯಾಷನಲ್ ಪೆನ್ಷನ್ ಸಿಸ್ಟಂ ಅಡಿಯಲ್ಲಿ ಈ ಸ್ವಾಸ್ಥ್ಯ ಯೋಜನೆ 18ರಿಂದ 85 ವರ್ಷ ವಯೋಮಾನದವರಿಗೆ ಮುಕ್ತವಾಗಿ ಲಭ್ಯ ಇರುತ್ತದೆ. ಈ ಸ್ಕೀಮ್ ಪಡೆಯುವಾಗ ಸಬ್​ಸ್ಕ್ರೈಬರ್​ಗಳು ಹೆಲ್ತ್ ಡಿಕ್ಲರೇಶನ್ ಒದಗಿಸಬೇಕು. ತಮ್ಮಲ್ಲಿ ಪ್ರೀ ಎಕ್ಸಿಸ್ಟಿಂಗ್ ಕಾಯಿಲೆಗಳು ಯಾವುದಾದರೂ ಇದ್ದರೆ ತಿಳಿಸಬೇಕು.

ಎನ್​ಪಿಎಸ್ ಸ್ವಾಸ್ಥ್ಯ ಸ್ಕೀಮ್ ಪಡೆಯಬೇಕೆಂದರೆ ಮೊದಲು ನ್ಯಾಷನಲ್ ಪೆನ್ಷನ್ ಸಿಸ್ಟಂ ಅಕೌಂಟ್ ಅನ್ನು ಆರಂಭಿಸಬೇಕು. ನಂತರ ಹೆಲ್ತ್ ಡಿಕ್ಲರೇಶನ್ ಸಲ್ಲಿಸಬೇಕು. ಲಭ್ಯ ಇರುವ ಪೆನ್ಷನ್ ಫಂಡ್ ಮ್ಯಾನೇಜರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೂಡಿಕೆ ಮಾಡುತ್ತಾ ಹೋಗಬಹುದು. ಈ ಎನ್​ಪಿಎಸ್ ಅಕೌಂಟ್​ನಲ್ಲಿ ಸ್ವಾಸ್ಥ್ಯ ಫೀಚರ್ ಅನ್ನು ಆಯ್ದುಕೊಳ್ಳಬೇಕು.

ಇದನ್ನೂ ಓದಿ: ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ಯಾವುದೇ ಪೆನ್ಷನ್ ಫಂಡ್​ಗಳು ಎನ್​ಪಿಎಸ್ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ ಆರಂಭಿಸಬಹುದು. ಪಿಒಸಿಯಾಗಿ ಮಾತ್ರ ಸದ್ಯಕ್ಕೆ ಇದನ್ನು ಚಾಲನೆಯಲ್ಲಿಡಬಹುದು. ಪೆನ್ಷನ್ ಫಂಡ್​ಗಳು ಖಾಸಗಿ ಫಿನ್​ಟೆಕ್ ಕಂಪನಿಗಳ ಜೊತೆ ಸಹಭಾಗಿತ್ವ ಪಡೆಯಬಹುದು.

ಎನ್​ಪಿಎಸ್ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ ಅಕೌಂಟ್​ನಲ್ಲಿರುವ ಹಣವನ್ನು ವೈದ್ಯಕೀಯ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ಇರುತ್ತದೆ. ಈ ಸ್ಕೀಮ್​ನಲ್ಲಿ ಒಟ್ಟಾರೆ ಕೊಡುಗೆಯ ಶೇ. 25ರಷ್ಟನ್ನು ವೈದ್ಯಕೀಯ ವೆಚ್ಚಗಳಿಗೆ ವಿತ್​ಡ್ರಾ ಮಾಡಿಕೊಳ್ಳಬಹುದು. ಮೊದಲ ಬಾರಿಗೆ ವಿತ್​ಡ್ರಾ ಮಾಡುವಾಗ ಸ್ಕೀಮ್​ನಲ್ಲಿ ಕನಿಷ್ಠ 50,000 ರೂ ಆದರೂ ಕೊಡುಗೆ ಇರಬೇಕು.

ವೈದ್ಯಕೀಯ ವೆಚ್ಚವು ತೀರಾ ಜಾಸ್ತಿ ಇದ್ದರೆ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್​ನ ಅವಧಿಗೆ ಮುನ್ನವೇ ಪೂರ್ಣ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು. ವೈದ್ಯಕೀಯ ವೆಚ್ಚ ಭರಿಸಿದ ಬಳಿಕ ಉಳಿಯುವ ಹಣವನ್ನು ಕಾಮನ್ ಸ್ಕೀಮ್ ಅಕೌಂಟ್​ಗೆ ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಎನ್​ಪಿಎಸ್ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ ಅನ್ನು ಯಾವುದಾದರೂ ಬ್ಯಾಂಕ್​ನಲ್ಲಿ ಪಡೆಯಬಹುದು. ಆನ್​ಲೈನ್​ನಲ್ಲಿ ಎನ್​ಪಿಎಸ್ ವೆಬ್​ಸೈಟ್​ಗೆ ಹೋಗಿಯೂ ಅಕೌಂಟ್ ತೆರೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ