AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಡಿಸೆಂಬರ್ ತಿಂಗಳಲ್ಲಿ 14.93 ಲಕ್ಷ ಇಪಿಎಫ್​ಒ ಸದಸ್ಯರು; ಟಾಪ್-5ನಲ್ಲಿ ಕರ್ನಾಟಕ

14.93 Lakh EPFO Membership Added: 2022ರ ಡಿಸೆಂಬರ್ ತಿಂಗಳಲ್ಲಿ 14.93 ಲಕ್ಷ ಜನರು ಇಪಿಎಫ್​ಒ ಖಾತೆ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠವಾದರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ. ಈ 14.93 ಲಕ್ಷ ಮಂದಿ ಪೈಕಿ 8 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ ಪಿಎಫ್ ಖಾತೆ ಪಡೆದಿದ್ದಾರೆ.

EPFO: ಡಿಸೆಂಬರ್ ತಿಂಗಳಲ್ಲಿ 14.93 ಲಕ್ಷ ಇಪಿಎಫ್​ಒ ಸದಸ್ಯರು; ಟಾಪ್-5ನಲ್ಲಿ ಕರ್ನಾಟಕ
ಸಾಂದರ್ಭಿಕ ಚಿತ್ರ Image Credit source: google image
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 22, 2023 | 5:22 PM

Share

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ 14.93 ಲಕ್ಷ ಹೊಸ ಖಾತೆಗಳನ್ನು ಸೇರಿಸಿದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 32,635 ಹೆಚ್ಚು ಸದಸ್ಯರ ಖಾತೆ ಸೃಷ್ಟಿಯಾಗಿದೆ. ಕುತೂಹಲವೆಂದರೆ ಡಿಸೆಂಬರ್​ನಲ್ಲಿ ಇಪಿಎಫ್​ಒ ಖಾತೆಗೆ ಸೇರ್ಪಡೆಯಾದ 14.93 ಲಕ್ಷ ಮಂದಿ ಪೈಕಿ 8.02 ಲಕ್ಷ ಮಂದಿ ಹೊಸ ಸದಸ್ಯರಾಗಿದ್ದಾರೆ. ಅಂದರೆ ಈ ಎಂಟು ಲಕ್ಷ ಉದ್ಯೋಗಿಗಳು ಮೊದಲ ಬಾರಿಗೆ ಇಪಿಎಫ್ ಯೋಜನೆಗೆ ಒಳಪಟ್ಟಿದ್ದಾರೆ. ಇದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿದುಬಂದ ಅಂಕಿ ಅಂಶ.

ಮಹಾರಾಷ್ಟ್ರ ರಾಜ್ಯದಲ್ಲಿ ಆ ತಿಂಗಳು ಅತಿಹೆಚ್ಚು ಮಂದಿ ಇಪಿಎಫ್​ಒ ಖಾತೆ ಪಡೆದಿದ್ದಾರೆ. ಮಹಾರಾಷ್ಟ್ರ ನಂತರದ ಸ್ಥಾನ ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳದ್ದಾಗಿದೆ. ಡಿಸೆಂಬರ್​ನಲ್ಲಿ ಇಪಿಎಫ್​ಒ ಖಾತೆ ತೆರೆಯಲಾದ 14.93 ಲಕ್ಷ ಮಂದಿ ಪೈಕಿ ಶೇ. 60.08ರಷ್ಟು ಮಂದಿ ಈ ಐದು ರಾಜ್ಯಗಳವರೇ ಆಗಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ ಶೇ. 24.82ರಷ್ಟು ಎನ್​ರೋಲ್ಮೆಂಟ್ ಆಗಿದೆ. ಕರ್ನಾಟಕ 4ನೇ ಸ್ಥಾನದಲ್ಲಿದೆ.

ಇನ್ನು ಹೊಸದಾಗಿ ಎನ್​ರೋಲ್ ಆದ 8 ಲಕ್ಷ ಮಂದಿ ಪೈಕಿ 18ರಿಂದ 21 ವರ್ಷ ವಯೋಮಾನದವರೇ 2.39 ಲಕ್ಷ ಮಂದಿ ಇದ್ದಾರೆ. 22ರಿಂದ 25 ವರ್ಷ ವಯೋಮಾನದ 2.08 ಲಕ್ಷ ಮಂದಿ ಇದ್ದಾರೆ. ಅಂದರೆ 18ರಿಂದ 25 ವರ್ಷದ ವಯೋಮಾನದವರು ಶೇ. 55ಕ್ಕಿಂತಲೂ ಹೆಚ್ಚು ಎಂದಾಯಿತು.

ಇನ್ನು ಡಿಸೆಂಬರ್​ನಲ್ಲಿ ಶುರುವಾದ 14.93 ಪಿಎಫ್ ಖಾತೆಗಳ ಪೈಕಿ 10.74 ಲಕ್ಷ ಸದಸ್ಯರು ಖಾತೆಯಿಂದ ಹೊರಬಂದು ಮತ್ತೆ ಹೊಸ ಖಾತೆ ಪಡೆದಿದ್ದಾರೆ. ಅಂದರೆ ಕೆಲಸ ಬದಲಿಸಿದಾಗ ಸಹಜವಾಗಿ ಹಳೆದ ಪಿಎಫ್ ಖಾತೆ ಮುಚ್ಚಿ, ಹೊಸ ಖಾತೆ ಶುರುವಾಗುತ್ತದೆ. 3.84 ಲಕ್ಷ ಮಂದಿಯ ಪಿಎಫ್ ಖಾತೆ ನಿಂತು ಹೋಗಿದೆ. ಇದಕ್ಕೆ ಕಾರಣ, ಅವರು ನಿವೃತ್ತರಾಗಿರಬಹುದು, ಅಥವಾ ಕೆಲಸ ಕಳೆದುಕೊಂಡು ಇನ್ನೂ ಸಿಕ್ಕಿಲ್ಲದಿರುವವರು ಇರಬಹುದು.

ಇದನ್ನೂ ಓದಿ: HDFC Interest: ಹೆಚ್​ಡಿಎಫ್​ಸಿ ಬ್ಯಾಂಕಲ್ಲಿ ಎಫ್​ಡಿ ಇಟ್ಟರೆ ಭರ್ಜರಿ ಲಾಭ; ವರ್ಷಕ್ಕೆ ಶೇ. 7.75ರವರೆಗೆ ಬಡ್ಡಿ

ಈ ಅಂಕಿಅಂಶದಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಹೊಸ ಪಿಎಫ್ ಖಾತೆದಾರರ ಪೈಕಿ ಮಹಿಳಾ ಸದಸ್ಯರ ಸಂಖ್ಯೆ 2.05 ಇದೆ. ನವೆಂಬರ್ ತಿಂಗಳಿಗೆ ಹೋಲಿಸಿದರೆ ಹೊಸ ಮಹಿಳಾ ಸದಸ್ಯರ ಸೇರ್ಪಡೆಯಲ್ಲಿ ಶೇ. 25.57ರಷ್ಟು ಹೆಚ್ಚಳವಾಗಿದೆ.

ಒಟ್ಟಾರೆಯಾಗಿ ಇಪಿಎಫ್​ಒಗೆ ಹೊಸ ಸದಸ್ಯರು ನಿರಂತರವಾಗಿ ಸೇರ್ಪಡೆಯಾಗುತ್ತಿರುವುದು ದೇಶದಲ್ಲಿ ಸಂಘಟಿತ ವಲಯದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದಕ್ಕೆ ಕೈಗನ್ನಡಿ ಹಿಡಿದಿದೆ ಎಂದು ಕೆಲ ತಜ್ಞರು ವಿಶ್ಲೇಷಿಸುತ್ತಾರೆ.

ಹೆಚ್ಚಿನ ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Wed, 22 February 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ