ಎಸ್​ಸಿಎಸ್​ಎಸ್​ನಿಂದ ನ್ಯಾಷನಲ್ ಸೇವಿಂಗ್ಸ್​ವರೆಗೂ; ಪೋಸ್ಟ್ ಆಫೀಸ್​ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು

|

Updated on: Nov 15, 2023 | 6:06 PM

Post Office Saving Schemes: ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್​ನಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ಹಲವು ಸೇವಿಂಗ್ಸ್ ಸ್ಕೀಮ್​ಗಳನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದಾಗಿದೆ. ಆದಾಯ ತೆರಿಗೆ ಉಳಿತಾಯಕ್ಕೂ ಈ ಹೂಡಿಕೆಗಳು ಸಹಾಯವಾಗುತ್ತವೆ. ಅದರಲ್ಲಿ ಆಯ್ದ ಐದು ಸ್ಕೀಮ್​ಗಳ ಬಗ್ಗೆ ಮಾಹಿತಿ ಇಲ್ಲಿದೆ...

ಎಸ್​ಸಿಎಸ್​ಎಸ್​ನಿಂದ ನ್ಯಾಷನಲ್ ಸೇವಿಂಗ್ಸ್​ವರೆಗೂ; ಪೋಸ್ಟ್ ಆಫೀಸ್​ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು
ಪೋಸ್ಟ್ ಆಫೀಸ್ ಯೋಜನೆ
Follow us on

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಅಂಚೆ ಕಚೇರಿ ವ್ಯವಸ್ಥೆ (Post Office) ಸಾಕಷ್ಟು ಪರಿವರ್ತನೆ ಕಂಡಿದೆ. ಅಂಚೆ ಕಚೇರಿಗಳು ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಸ್ಕೀಮ್​ಗಳನ್ನು ವಿತರಿಸುವ ಕೇಂದ್ರವಾಗಿದೆ. ಹಲವು ಉಳಿತಾಯ ಯೋಜನೆಗಳನ್ನು ಪೋಸ್ಟ್ ಆಫೀಸ್ (post office schemes) ಆಫರ್ ಮಾಡುತ್ತದೆ. ಉತ್ತಮ ಬಡ್ಡಿದರ ಕೂಡ ನೀಡಲಾಗುತ್ತದೆ. ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್​ನಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ಹಲವು ಸೇವಿಂಗ್ಸ್ ಸ್ಕೀಮ್​ಗಳನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದಾಗಿದೆ. ಆದಾಯ ತೆರಿಗೆ ಉಳಿತಾಯಕ್ಕೂ ಈ ಹೂಡಿಕೆಗಳು ಸಹಾಯವಾಗುತ್ತವೆ. ಮೇಲಾಗಿ ಇವೆಲ್ಲವೂ ಸರ್ಕಾರಿ ಪ್ರಾಯೋಜಿತವಾದ ಸ್ಕೀಮ್​ಗಳಾದ್ದರಿಂದ ಹಣಕ್ಕೆ ಗ್ಯಾರಂಟಿಯಂತೂ ಇರುತ್ತದೆ.

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್

ವಯೋವೃದ್ಧರಿಗೆಂದು ರೂಪಿಸಲಾಗಿರುವ ಯೋಜನೆ ಇದು. 60 ವರ್ಷ ವಯಸ್ಸು ದಾಟಿದ ವ್ಯಕ್ತಿಗಳು ಎಸ್​ಸಿಎಸ್​ಎಸ್ ಸ್ಕೀಮ್ ಅನ್ನು ತೆರೆಯಬಹುದು. ಇದಕ್ಕೆ ವರ್ಷಕ್ಕೆ ಶೇ. 8.2ರಷ್ಟು ಬಡ್ಡಿ ಸಿಗುತ್ತದೆ. 5 ವರ್ಷಕ್ಕೆ ಮೆಚ್ಯೂರಿಟಿ ಆಗುತ್ತದೆ. ಅದಾದ ಬಳಿಕ ಬೇಕೆಂದರೆ ಮೂರು ವರ್ಷಕ್ಕೊಮ್ಮೆ ಸ್ಕೀಮ್ ಅವಧಿ ವಿಸ್ತರಿಸಿಕೊಳ್ಳುತ್ತಾ ಹೋಗಬಹುದು.

ಇದನ್ನೂ ಓದಿ: Rule Changes: ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್​ನಲ್ಲಿ 7 ಬದಲಾವಣೆಗಳು; ಯಾವ್ಯಾವುವು, ಇಲ್ಲಿದೆ ವಿವರ

ಸುಕನ್ಯಾ ಸಮೃದ್ದಿ ಯೋಜನೆ

ಇದು 10 ವರ್ಷ ವಯಸ್ಸಿನೊಳಗಿನ ಬಾಲಕಿಯರಿಗೆ ಮಾಡಿಸಿದ ಸ್ಕೀಮ್. ಇದಕ್ಕೆ ವಾರ್ಷಿಕ ಶೇ. 8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. 10 ವರ್ಷದೊಳಗಿನ ಯಾವುದೇ ಬಾಲಕಿಯ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ಆರಂಭಿಸಬಹುದು

ನ್ಯಾಷನಲ್ ಸೇವಿಂಗ್ಸ್ ಸ್ಕೀಮ್

ಅಂಚೆ ಕಚೇರಿಯಲ್ಲಿ ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ ಅನ್ನು ಯಾರು ಬೇಕಾದರೂ ತೆರೆಯಬಹುದು. ಒಂದು ವರ್ಷದಲ್ಲಿ ಕನಿಷ್ಠ ಹೂಡಿಕೆ 100 ಇದೆ. ವರ್ಷದಲ್ಲಿ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಮಅಡಬಹುದ. ಇದಕ್ಕೆ ಶೇ. 7.7ರಷ್ಟು ಬಡ್ಡಿದರವನ್ನು ನಿಗದಿ ಮಾಡಲಾಗಿದೆ.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್

ಅಂಚೆ ಕಚೇರಿಯ ಅವಧಿ ಠೇವಣಿ ಯೋಜನೆಯಲ್ಲಿ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇದು 5 ವರ್ಷದ ಠೇವಣಿಗೆ ಇರುವ ಬಡ್ಡಿದರ. ಹಾಗೆಯೇ, 1 ವರ್ಷ, 2 ವರ್ಷ ಮತ್ತು 5 ವರ್ಷದ ಅವಧಿ ಠೇವಣಿಯ ಆಯ್ಕೆಗಳಿವೆ. ಕಡಿಮೆ ಅವಧಿಗೆ ಬಡ್ಡಿದರ ತುಸು ಕಡಿಮೆ ಇರುತ್ತದೆ.

ಇದನ್ನೂ ಓದಿ: ಬಡ್ಡಿದರ, ಇಎಂಐ, ದಂಡ ಎಷ್ಟು? ಬ್ಯಾಂಕ್​ನಲ್ಲಿ ವೈಯಕ್ತಿಕ ಸಾಲ ಪಡೆಯುವ ವಿಚಾರಿಸಬೇಕಾದ ಸಂಗತಿಗಳು

ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್

ಬ್ಯಾಂಕುಗಳಲ್ಲಿರುವ ರೆಕರಿಂಗ್ ಡೆಪಾಸಿಟ್ ಸ್ಕೀಮ್​ನಂತೆ ಅಂಚೆ ಕಚೇರಿಯಲ್ಲೂ ಆರ್​ಡಿ ಪ್ಲಾನ್​ಗಳಿವೆ. ಐದು ವರ್ಷದ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್​ನಲ್ಲಿ ವರ್ಷಕ್ಕೆ ಶೇ. 6.20ರಷ್ಟು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ