ಅಂಚೆ ಕಚೇರಿ ಹಿಂದೆಲ್ಲಾ ಪತ್ರಗಳನ್ನು ತಲುಪಿಸಲು ಸೀಮಿತವಾಗಿತ್ತು. ಇಂಟರ್ನೆಟ್ ಯುಗದಲ್ಲಿ ಪತ್ರಗಳ (postal letters) ಬಳಕೆ ತೀರಾ ಕಡಿಮೆ ಆಗಿದೆ. ಅಂಚೆ ಕಚೇರಿ ಅಸ್ತಿತ್ವ ಮುಗಿಯಿತು ಎಂದುಕೊಳ್ಳುವ ಹೊತ್ತಿನಲ್ಲಿ ಅಂಚೆ ಇಲಾಖೆಗೆ (Postal dept) ಹೊಸ ಜವಾಬ್ದಾರಿಗಳನ್ನು ಕೊಡಲಾಗಿದೆ. ಅಂಚೆ ಕಚೇರಿಗಳು ಮಿನಿ ಬ್ಯಾಂಕುಗಳಂತೆ ಮತ್ತು ಸಣ್ಣ ಉಳಿತಾಯ ಯೋಜನೆಗಳ ಅಡ್ಡೆಯಂತೆ ಕಾರ್ಯನಿರ್ವಹಿಸುತ್ತಿವೆ. ಪೋಸ್ಟ್ ಆಫೀಸ್ನಲ್ಲಿ ಹಲವು ಸ್ಕೀಮ್ಗಳಿದ್ದು ಬಹಳ ಜನರಿಗೆ ಸೇವೆ ನೀಡಲಾಗುತ್ತಿದೆ. ಆರ್ಡಿ, ಎಫ್ಡಿ ಜೊತೆಗೆ ಪಿಪಿಎಫ್, ಕೆವಿಸಿ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳನ್ನು ಪೋಸ್ಟ್ ಆಫೀಸ್ನಲ್ಲಿ ಪಡೆಯಬಹುದಾಗಿದೆ. ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಕೆಲ ಪ್ರಮುಖ ಸ್ಕೀಮ್ಗಳು, ಹಾಗೂ ಅದರಲ್ಲಿನ ಹೂಡಿಕೆಗೆ ಸಿಗುವ ಬಡ್ಡಿ ಇತ್ಯಾದಿ ವಿವರ ಇಲ್ಲಿದೆ.
ಬ್ಯಾಂಕ್ಗಳಲ್ಲಿ ಖಾತೆ ತೆರೆಯುವಂತೆ ನೀವು ಅಂಚೆ ಕಚೇರಿಯಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಬ್ಯಾಂಕ್ನಲ್ಲಿಯಂತೆ ಇಲ್ಲಿಯೂ ಹಾಗೇ ಸುಮ್ಮನೆ ಇಡಲಾಗುವ ಹಣಕ್ಕೆ ಶೇ. 4 ಮಾತ್ರವೇ ಬಡ್ಡಿ ಇರುತ್ತದೆ. ಇದರಲ್ಲಿ ಕನಿಷ್ಠ ಬ್ಯಾಲನ್ಸ್ 500 ರೂ ಇರಬೇಕು.
ಪೋಸ್ಟ್ ಆಫೀಸ್ ಆರ್ಡಿ ಎಂದು ಜನಪ್ರಿಯವಾಗಿರುವ ನ್ಯಾಷನಲ್ ಸೇವಿಂಗ್ಸ್ ರೆಕರಿಂಗ್ ಡೆಪಾಸಿಟ್ ಅಕೌಂಟ್ ಬ್ಯಾಂಕ್ ಆರ್ಡಿಗಳಿಗಿಂತ ತುಸು ಹೆಚ್ಚು ಬಡ್ಡಿ ಕೊಡುತ್ತದೆ. ಇದರಲ್ಲಿ ನೀವು ಮಾಸಿಕವಾಗಿ ಕಟ್ಟಿಕೊಂಡು ಹೋಗಲು ಕನಿಷ್ಠ ಮೊತ್ತ 100 ರೂ ಇದೆ. ಶೇ. 6.7ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ವರ್ಷಕ್ಕೆ ಕೇವಲ 436 ರೂ ಪ್ರೀಮಿಯಮ್; 2 ಲಕ್ಷ ರೂ ಕವರೇಜ್
ಪೋಸ್ಟ್ ಆಫೀಸ್ ಅವಧಿ ಠೇವಣಿ ಯೋಜನೆ ಎಂಬುದು ನಿಶ್ಚಿತ ಠೇವಣಿ ಸ್ಕೀಮ್ ಆಗಿದೆ. 5 ವರ್ಷಗಳವರೆಗೆ ಬೇರೆ ಬೇರೆ ಅವಧಿಗೆ ಠೇವಣಿ ಇಡುವ ಆಯ್ಕೆಗಳಿವೆ. ಶೇ. 6.9ರಿಂದ ಶೇ. 7.5ರವರೆಗೂ ಬಡ್ಡಿ ಸಿಗುತ್ತದೆ.
ನ್ಯಾಷನಲ್ ಸೇವಿಂಗ್ಸ್ ಮಂತ್ಲಿ ಇನ್ಕಮ್ ಅಕೌಂಟ್ ಅನ್ನು ತೆರೆಯಬಹುದು. ಇದರಲ್ಲಿ ಕನಿಷ್ಠ ಹೂಡಿಕೆ 1,000 ರೂ ಆಗಿದೆ. 4.5 ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. ವರ್ಷಕ್ಕೆ ಶೇ. 7.4ರಷ್ಟು ಬಡ್ಡಿ ಸಿಗುತ್ತದೆ. ಈ ಸ್ಕೀಮ್ನಲ್ಲಿ ನೀವು ಗಳಿಸುವ ಬಡ್ಡಿ ಆದಾಯಕ್ಕೆ ತೆರಿಗೆ ಕಡಿತ ಆಗುತ್ತದೆ.
60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಈ ಸ್ಕೀಮ್ ಪಡೆಯಬಹುದು. 30 ಲಕ್ಷ ರೂವರೆಗೂ ಇದರಲ್ಲಿ ಹೂಡಿಕೆಗೆ ಅವಕಾಶ ಇದೆ. ವರ್ಷಕ್ಕೆ ಶೇ. 8.2ರ ದರದಲ್ಲಿ ಬಡ್ಡಿ ಸಿಗುತ್ತದೆ. ಈ ಸ್ಕೀಮ್ಗೆ ತೆರಿಗೆ ವಿನಾಯಿತಿ ಕೂಡ ಇರುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂಚೆ ಕಚೇರಿಯಲ್ಲಿಯೂ ಲಭ್ಯ ಇದೆ. ವರ್ಷಕ್ಕೆ 500 ರೂನಿಂದ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ಇದಕ್ಕೆ ಬಡ್ಡಿ ಶೇ. 7.1ರಷ್ಟು ಇದೆ. ಈ ಸ್ಕೀಮ್ಗೂ ತೆರಿಗೆ ವಿನಾಯಿತಿ ಅವಕಾಶ ಇದೆ.
ಇದನ್ನೂ ಓದಿ: ಎಸ್ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಇದಕ್ಕೆ ಬಡ್ಡಿದರ ಶೇ. 7.7ರಷ್ಟು ಇದೆ. ಈ ಸ್ಕೀಮ್ಗೆ ತೆರಿಗೆ ವಿನಾಯಿತಿ ಇರುತ್ತದೆ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ರೀತಿಯಲ್ಲಿ ಕಿಸಾನ್ ವಿಕಾಸ್ ಪತ್ರವನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದು. ಶೇ. 7.50ರಷ್ಟು ಬಡ್ಡಿ ತರುವ ಈ ಸ್ಕೀಮ್ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಆಗಿದ್ದು, ತೆರಿಗೆ ವಿನಾಯಿತಿ ಸೌಲಭ್ಯ ಇರುತ್ತದೆ.
ಹತ್ತು ವರ್ಷದೊಳಗಿನ ಹೆಣ್ಮಕ್ಕಳಿಗೆಂದು ಸುಕನ್ಯಾ ಸಮೃದ್ಧಿ ಯೋಜನೆ ರೂಪಿಸಲಾಗಿದೆ. ವರ್ಷಕ್ಕೆ 250 ರೂನಿಂದ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. ಬಡ್ಡಿ ಕೂಡ ಶೇ. 8.2ರಷ್ಟು ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ