Insurance: ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ವರ್ಷಕ್ಕೆ ಕೇವಲ 436 ರೂ ಪ್ರೀಮಿಯಮ್; 2 ಲಕ್ಷ ರೂ ಕವರೇಜ್

PM Jeevan Jyoti Bima Yojana: ಸರ್ಕಾರದಿಂದ ನಡೆಸಲಾಗುವ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಒಂದು ಲೈಫ್ ಇನ್ಷೂರೆನ್ಸ್ ಸ್ಕೀಮ್ ಆಗಿದೆ. 18ರಿಂದ 55 ವರ್ಷದೊಳಗಿನ ವಯಸ್ಸಿನವರು ಈ ಇನ್ಷೂರೆನ್ಸ್ ಪಡೆಯಬಹುದಾಗಿದ್ದು ವರ್ಷಕ್ಕೆ ಕಟ್ಟಬೇಕಾದ ಪ್ರೀಮಿಯಮ್ ಕೇವಲ 436 ರೂ. ಇನ್ಷೂರೆನ್ಸ್ ಹೊಂದಿದವರು ಯಾವುದೇ ಕಾರಣಕ್ಕೆ ಸತ್ತರೂ ನಾಮಿನಿ ಅಥವಾ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಸಿಗುತ್ತದೆ.

Insurance: ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ವರ್ಷಕ್ಕೆ ಕೇವಲ 436 ರೂ ಪ್ರೀಮಿಯಮ್; 2 ಲಕ್ಷ ರೂ ಕವರೇಜ್
ಲೈಫ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2024 | 3:52 PM

ನವದೆಹಲಿ, ಫೆಬ್ರುವರಿ 12: ಇವತ್ತಿನ ಸಂದರ್ಭದಲ್ಲಿ ಯಾರಿಗೆ ಯಾವಾಗ ಏನು ಬೇಕಾದರೂ ಜರುಗಬಹುದು. ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಮೊದಲಾದ ಕಾರಣದಿಂದ ಜನರು ಅಕಾಲಿಕ ಮರಣಕ್ಕೆ ಒಳಗಾಗುತ್ತಿದ್ದಾರೆ. ಇವರ ಪ್ರಾಣ ಹೋಗುವುದರ ಜೊತೆಗೆ ಇವರನ್ನು ನಂಬಿಕೊಂಡ ಕುಟುಂಬವೂ ಸಂಕಷ್ಟಕ್ಕೆ ಸಿಲುಕುತ್ತದೆ. ಲೈಫ್ ಇನ್ಷೂರೆನ್ಸ್ (Life insurance) ಇದ್ದರೆ ಒಂದಷ್ಟು ಪರಿಹಾರ ಸಿಗುತ್ತದೆ. ಇವತ್ತು ಜೀವ ವಿಮೆಯ ಬೆಲೆ ಸಾಕಷ್ಟು ಹೆಚ್ಚಿದೆ. 2015-16ರಲ್ಲಿ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ (PMJJBY- Pradhanmantri Jeevan Jyoti bima Yojana) ಬಹಳ ಉಪಯುಕ್ತ ಎನಿಸಿದೆ. ಇದರಲ್ಲಿ ವರ್ಷಕ್ಕೆ ಕಟ್ಟಬೇಕಾದ ಪ್ರೀಮಿಯಮ್ ಕೇವಲ 436 ರೂ ಮಾತ್ರವೇ. ಅಂದರೆ ತಿಂಗಳಿಗೆ ಸುಮಾರು 36 ರೂ ಹಣವನ್ನು ವಿನಿಯೋಗಿಸಿದರೆ ಪಿಎಂ ಜೀವನ ಜ್ಯೋತಿ ವಿಮಾ ಯೋಜನೆ ಪಡೆಯಬಹುದು.

ಪಿಎಂಜೆಜೆಬಿವೈ ಯೋಜನೆಯನ್ನು ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಇದ್ದರೆ, ಗರಿಷ್ಠ ವಯಸ್ಸು 55 ವರ್ಷ. ವರ್ಷಕ್ಕೆ 436 ರೂ ಪ್ರೀಮಿಯಮ್ ಕಟ್ಟಬೇಕು. ಒಂದು ವರ್ಷದಲ್ಲಿ 2 ಲಕ್ಷ ರೂ ಲೈಫ್ ಕವರೇಜ್ ಇರುತ್ತದೆ. ಅಂದರೆ, ಪಾಲಿಸಿದಾರ ಯಾವುದೇ ಕಾರಣಕ್ಕೆ ಮೃತಪಟ್ಟಲ್ಲಿ ನಾಮಿನಿ ಅಥವಾ ಅವರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಸಾವರನ್ ಗೋಲ್ಡ್ ಬಾಂಡ್ 4ನೇ ಸರಣಿ ಇಂದು ಆರಂಭ, ಗ್ರಾಮ್​ಗೆ 6,263 ರೂ ಬೆಲೆ ನಿಗದಿ; ಆನ್​ಲೈನ್​ನಲ್ಲಿ ಹಣಪಾವತಿಸಿದರೆ ಡಿಸ್ಕೌಂಟ್

ಪಿಎಂ ಜೀವನ ಜ್ಯೋತಿ ಬಿಮಾ ಯೋಜನೆ ಪಡೆಯುವುದು ಹೇಗೆ?

ಪೋಸ್ಟ್ ಆಫೀಸ್ ಮತ್ತು ಯಾವುದೇ ಬ್ಯಾಂಕ್​ಗಳಲ್ಲಿ ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಪಡೆಯಬಹುದು. ಆದರೆ ಆ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಬ್ಯಾಂಕ್ ಶಾಖೆಗೆ ಹೋಗಿ ಇದರ ಒಂದು ಅರ್ಜಿಯನ್ನು ಭರ್ತಿ ಮಾಡಿ ಕೊಡಬೇಕು.

ಇಲ್ಲಿ ಇನ್ಷೂರೆನ್ಸ್ ಪ್ರೀಮಿಯನ್ ಹಣ ಪ್ರತೀ ವರ್ಷ ಆಟೊ ಡೆಬಿಟ್ ಆಗುತ್ತದೆ. ಈ ವಿಮೆ ಜೂನ್ 1ರಿಂದ ಮೇ 31ರವರೆಗೆ ಚಾಲನೆಯಲ್ಲಿರುತ್ತದೆ. ಬ್ಯಾಂಕ್ ಖಾತೆಯಿಂದ ಮೇ 25ರಿಂದ ಮೇ 31ರೊಳಗೆ 436 ರೂ ಆಟೊ ಡೆಬಿಟ್ ಆಗುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಲ್ಲಿ ಅಷ್ಟು ಹಣ ಇರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಪ್ರೀಮಿಯಮ್ ಕಟ್ಟಲಿಲ್ಲವೆಂದರೆ ಇನ್ಷೂರೆನ್ಸ್ ಅಸಿಂಧುಗೊಳ್ಳುತ್ತದೆ.

ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

ವೈದ್ಯಕೀಯ ಪರೀಕ್ಷೆ ಅಗತ್ಯ ಇಲ್ಲ

ಪಿಎಂ ಜೀವನಜ್ಯೋತಿ ಬಿಮಾ ಯೋಜನೆನ್ನ ಪಡೆಯಲು ಯಾವ ವೈದ್ಯಕೀಯ ಪ್ರಮಾಣಪತ್ರ ಕೊಡುವ ಅವಶ್ಯಕತೆ ಇರುವುದಿಲ್ಲ. ಆದರೆ, ಕೆಲ ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು.

ವಿಮೆಯ ಮೊದಲ ಪ್ರೀಮಿಯಮ್ ಕಟ್ಟಿ 30 ದಿನದವರೆಗೆ ರಿಸ್ಕ್ ಕವರೇಜ್ ಇರುವುದಿಲ್ಲ. ವಿಮಾದಾರ ಈ ಅವಧಿಯಲ್ಲಿ ಅಪಘಾತಕ್ಕೆ ಒಳಗಾದರೆ ಮಾತ್ರವೇ ಪರಿಹಾರ ಸಿಗುತ್ತದೆ. ಬೇರೆ ಕಾರಣಗಳಿಂದ ಸತ್ತರೆ ಈ ಅಲ್ಪ ಅವಧಿಗೆ ಕವರೇಜ್ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ