Gold: ಸಾವರನ್ ಗೋಲ್ಡ್ ಬಾಂಡ್ 4ನೇ ಸರಣಿ ಇಂದು ಆರಂಭ, ಗ್ರಾಮ್​ಗೆ 6,263 ರೂ ಬೆಲೆ ನಿಗದಿ; ಆನ್​ಲೈನ್​ನಲ್ಲಿ ಹಣಪಾವತಿಸಿದರೆ ಡಿಸ್ಕೌಂಟ್

Sovereign Gold Bond 2023-24 Series IV: ಸಾವರನ್ ಗೋಲ್ಡ್ ಬಾಂಡ್ 2023-24ರ ನಾಲ್ಕನೇ ಸರಣಿ ಫೆ. 12ರಿಂದ 16ರವರೆಗೆ ಸಬ್​ಸ್ಕ್ರಿಪ್ಷನ್​ಗೆ ತೆರೆದಿದೆ. ಈ ಸರಣಿಯ ಬಾಂಡ್ ಬೆಲೆ ಗ್ರಾಮ್​ಗೆ 6,263 ರೂ ನಿಗದಿ ಮಾಡಲಾಗಿದೆ. ಆನ್​ಲೈನ್​ನಲ್ಲಿ ಹಣ ಪಾವತಿಸಿದರೆ 50 ರೂ ಡಿಸ್ಕೌಂಟ್ ಇದೆ. ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಲು ಅವಕಾಶ ಇದೆ.

Gold: ಸಾವರನ್ ಗೋಲ್ಡ್ ಬಾಂಡ್ 4ನೇ ಸರಣಿ ಇಂದು ಆರಂಭ, ಗ್ರಾಮ್​ಗೆ 6,263 ರೂ ಬೆಲೆ ನಿಗದಿ; ಆನ್​ಲೈನ್​ನಲ್ಲಿ ಹಣಪಾವತಿಸಿದರೆ ಡಿಸ್ಕೌಂಟ್
ಸಾವರನ್ ಗೋಲ್ಡ್ ಬಾಂಡ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2024 | 10:57 AM

ಸಾವರನ್ ಗೋಲ್ಡ್ ಬಾಂಡ್​ನ 2023-24ನೇ ಸಾಲಿನ ನಾಲ್ಕನೇ ಸರಣಿ (Sovereign Gold Bond 2023-24 Series IV) ಇಂದು ಬಿಡುಗಡೆ ಆಗಲಿದೆ. ಫೆಬ್ರುವರಿ 16ರವರೆಗೂ ಐದು ದಿನಗಳ ಕಾಲ ಈ ಸರಣಿಯ ಬಾಂಡ್ ಮಾರಾಟಕ್ಕೆ ಲಭ್ಯ ಇದೆ. ಆರ್​ಬಿಐ ವತಿಯಿಂದ ನಡೆಯುವ ಈ ಜನಪ್ರಿಯ ಹೂಡಿಕೆ ಯೋಜನೆಯಲ್ಲಿ ಈ ಬಾರಿಯ ಸರಣಿಯಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆಯನ್ನು 6,263 ರೂ ಎಂದು ನಿಗದಿ ಮಾಡಲಾಗಿದೆ. ಒಬ್ಬ ವ್ಯಕ್ತಿ ನಾಲ್ಕು ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಅಂದರೆ, ಈ ನಾಲ್ಕನೇ ಸರಣಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 2.5 ಕೋಟಿ ರೂವರೆಗೆ ಹೂಡಿಕೆ ಮಾಡಬಹುದು.

ಆನ್​ಲೈನ್​ನಲ್ಲಿ ಹಣ ಪಾವತಿಸಿದರೆ ಡಿಸ್ಕೌಂಟ್

ಸಾವರನ್ ಗೋಲ್ಡ್ ಬಾಂಡ್ ಅನ್ನು ಸರ್ಕಾರದ ಪರವಾಗಿ ಆರ್​ಬಿಐ ವಿತರಿಸುತ್ತದೆ. ಎಸ್​ಬಿಐ, ಎಚ್​ಡಿಎಫ್​ಸಿ ಇತ್ಯಾದಿ ಕಮರ್ಷಿಯಲ್ ಬ್ಯಾಂಕುಗಳು, ಅಂಚೆ ಕಚೇರಿಗಳು ಹಾಗೂ ಷೇರು ವಿನಿಮಯ ಕೇಂದ್ರಗಳಲ್ಲಿ ಮೊದಲಾದ ಕಡೆ ಸಾವರನ್ ಗೋಲ್ಡ್ ಬಾಂಡ್​ಗಳನ್ನು ಪಡೆಯಬಹುದು.

ಒಬ್ಬ ವ್ಯಕ್ತಿಯಾದರೆ 4 ಕಿಲೋ, ಟ್ರಸ್ಟ್​ನಂಥ ಸಂಸ್ಥೆಗಳಾದರೆ 20 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುವುದಾದರೆ ಗ್ರಾಮ್​ಗೆ 6,263 ರೂನಂತೆ ಒಟ್ಟು 6,26,300 ರೂ ಮೊತ್ತದ ಬಾಂಡ್ ಅನ್ನು ಖರೀದಿಸಬೇಕಾಗುತ್ತದೆ.

ಇದನ್ನೂ ಓದಿ: ಶೇ. 13.6ರಷ್ಟು ರಿಟರ್ನ್; ಈಕ್ವಿಟಿಗಿಂತಲೂ ಹೆಚ್ಚು ಲಾಭ ಕೊಟ್ಟಿದೆ 2016ರ ಸಾವರನ್ ಗೋಲ್ಡ್ ಬಾಂಡ್ ಪ್ಲಾನ್

ಆನ್​ಲೈನ್​ನಲ್ಲಿ ಹಣ ಪಾವತಿಸುವುದಾದರೆ ಗ್ರಾಮ್​ಗೆ 50 ರೂ ರಿಯಾಯಿತಿ ಇರುತ್ತದೆ. ಈ ನಾಲ್ಕನೇ ಸರಣಿಯ ಬಾಂಡ್​ನ ಬೆಲೆಯಾಗಿ 6,263 ರೂ ಇದೆ. ಇದಕ್ಕೆ 50 ರೂ ಡಿಸ್ಕೌಂಟ್ ಎಂದರೆ 6,213 ರೂ ಆಗುತ್ತದೆ. 100 ಗ್ರಾಮ್ ಹೂಡಿಕೆಯಲ್ಲಿ 5,000 ರೂ ಡಿಸ್ಕೌಂಟ್ ಸಿಕ್ಕಂತಾಗುತ್ತದೆ.

ಏನಿದು ಸಾವರನ್ ಗೋಲ್ಡ್ ಬಾಂಡ್ ಸ್ಕೀಮ್?

ಚಿನ್ನದ ಬದಲು ಆ ಬೆಲೆಯ ಬಾಂಡ್ ಅನ್ನು ಪಡೆಯಬಹುದು. ಎಂಟು ವರ್ಷಕ್ಕೆ ಈ ಸ್ಕೀಮ್ ಮೆಚ್ಯೂರ್ ಆಗುತ್ತದೆ. ಮೆಚ್ಯೂರ್ ಆಗುವಾಗ ಚಿನ್ನದ ಬೆಲೆ ಎಷ್ಟಿರುತ್ತದೋ ಅದಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆಯ ಮೌಲ್ಯ ಹೆಚ್ಚಿರುತ್ತದೆ. ಚಿನ್ನ ಸಾಮಾನ್ಯವಾಗಿ ವರ್ಷಕ್ಕೆ ಶೇ. 10ರಿಂದ ಶೇ. 16ರಷ್ಟು ಬೆಳೆಯುತ್ತದೆ. ಎಂಟು ವರ್ಷದಲ್ಲಿ ಹೂಡಿಕೆಯ ಮೌಲ್ಯ ಕನಿಷ್ಠ ಡಬಲ್ ಆಗಿರುತ್ತದೆ.

ಸಾವರನ್ ಗೋಲ್ಡ್ ಬಾಂಡ್​ನ ಇನ್ನೊಂದು ಪ್ರಯೋಜನವೆಂದರೆ ಅದು ತರುವ ಬಡ್ಡಿ ಆದಾಯ. ನೀವು ಮಾಡಿದ ಹೂಡಿಕೆಯ ಮೊತ್ತಕ್ಕೆ ವರ್ಷಕ್ಕೆ ಶೇ. 2.50ರಷ್ಟು ಬಡ್ಡಿ ಹಣವನ್ನು ನೀವು ಪಡೆಯಬಹುದು.

ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್​ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ

ಸಾವರನ್ ಗೋಲ್ಡ್ ಬಾಂಡ್​ಗೆ ತೆರಿಗೆ ವಿಧಿಸಲಾಗುತ್ತದಾ?

ಸಾವರನ್ ಗೋಲ್ಡ್ ಬಾಂಡ್ ಮೆಚ್ಯೂರ್ ಆದಾಗ ಅದರಿಂದ ಬರುವ ಲಾಭಕ್ಕೆ ತೆರಿಗೆ ಇರುವುದಿಲ್ಲ. ಆದರೆ, ಹೂಡಿಕೆಗೆ ನೀಡಲಾಗುವ ಶೇ. 2.50ರಷ್ಟು ಬಡ್ಡಿ ಆದಾಯಕ್ಕೆ ತೆರಿಗೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?