Bond Investments: ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
Debt Instruments: ಷೇರು ಮಾರುಕಟ್ಟೆ ಮತ್ತು ಡೆಟ್ ಮಾರುಕಟ್ಟೆಗಳಲ್ಲಿ ನಿಮ್ಮ ಹೂಡಿಕೆ ಕ್ರಮವಾಗಿ ಶೇ. 60 ಮತ್ತು ಶೇ. 40 ಇದ್ದರೆ ಉತ್ತಮ. ಡೆಟ್ ಇನ್ಸ್ಟ್ರುಮೆಂಟ್ಗಳಲ್ಲಿ ಬಾಂಡ್ಗಳು, ಎಫ್ಡಿ, ಆರ್ಡಿ ಇತ್ಯಾದಿ ಇವೆ. ಗವರ್ನ್ಮೆಂಟ್ ಬಾಂಡ್ಗಳು ನಿಶ್ಚಿತ ಆದಾಯ ತರಬಲ್ಲ, ಮತ್ತು ಹಣಕ್ಕೆ ಸರ್ಕಾರದ ಗ್ಯಾರಂಟಿಯೂ ಇರುವುದರಿಂದ ಹೂಡಿಕೆಗೆ ಉತ್ತಮ ಆಯ್ಕೆ ಎನಿಸುತ್ತವೆ.
ಇವತ್ತಿನ ಕಾಲಘಟ್ಟದಲ್ಲಿ ಹಣ ಹೂಡಿಕೆಗೆ ಹಲವು ಮಾರ್ಗಗಳಿವೆ. ಸಾಂಪ್ರದಾಯಿಕ ಬ್ಯಾಂಕ್ ಠೇವಣಿಗಳಿಂದ (Bank Fixed Deposits) ಹಿಡಿದು ಷೇರುಗಳವರೆಗೆ ಹೂಡಿಕೆದಾರರಿಗೆ ನಾನಾ ಆಯ್ಕೆಗಳಿವೆ. ಷೇರು ಮಾರುಕಟ್ಟೆಗೆ ಜೋಡಿತವಾದ ಹೂಡಿಕೆಗಳು ಹೆಚ್ಚು ಲಾಭ ತರಬಲ್ಲ ಸಾಧ್ಯತೆ ಹೊಂದಿದವಾದರೂ ಅಪಾಯದ ಪ್ರಮಾಣವೂ ಹೆಚ್ಚು. ಈ ಸಂದರ್ಭದಲ್ಲಿ ಡೆಟ್ ಹೂಡಿಕೆ ಆಯ್ಕೆಗಳು ನೆರವಿಗೆ ಬರುತ್ತವೆ. ಡೆಟ್ ಇನ್ಸ್ಟ್ರುಮೆಂಟ್ಗಳಲ್ಲಿ ಗವರ್ನ್ಮೆಂಟ್ ಬಾಂಡ್ ಪ್ರಮುಖವಾದುದು.
ತಜ್ಞರ ಪ್ರಕಾರ ನಿಮ್ಮ ನೂರು ರುಪಾಯಿ ಹೂಡಿಕೆಯಲ್ಲಿ ಷೇರು ಸಂಬಂಧಿತ ಹೂಡಿಕೆಗಳಿಗೆ 60 ರೂ, ಡೆಟ್ ಹೂಡಿಕೆಗಳಿಗೆ 40 ರೂ ವಿನಿಯೋಗಿಸಬೇಕು. ಈ ಸೂತ್ರ ಡಬಲ್ ಎಂಜಿನ್ನಂತೆ ಕೆಲಸ ಮಾಡಬಹುದು. ಷೇರು ಇನ್ಸ್ಟ್ರುಮೆಂಟ್ಗಳಲ್ಲಿ ಮ್ಯುಚುವಲ್ ಫಂಡ್, ಇಟಿಎಫ್ ಮತ್ತು ನೇರ ಷೇರಿನ ಮೇಲಿನ ಹೂಡಿಕೆ ಒಳಗೊಂಡಿರುತ್ತದೆ. ಡೆಟ್ ಇನ್ವೆಸ್ಟ್ಮೆಂಟ್ನಲ್ಲಿ ಗವರ್ನ್ಮೆಂಟ್ ಬಾಂಡ್ ಜೊತೆಗೆ ಎಫ್ಡಿ, ಸ್ಮಾಲ್ ಸೇವಿಂಗ್ ಸ್ಕೀಮ್ಸ್ಗಳನ್ನೂ ಒಳಗೊಳ್ಳಬಹುದು.
ಇದನ್ನೂ ಓದಿ: KYC Frauds: ಕೆವೈಸಿ ಅಪ್ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್ಬಿಐ ಸಲಹೆ, ಸೂಚನೆಗಳಿವು
ಗವರ್ನ್ಮೆಂಟ್ ಬಾಂಡ್ ಯಾಕೆ ಬೇಕು?
ಸರ್ಕಾರಿ ಬಾಂಡ್ಗಳು ನಿಶ್ಚಿತ ವರಮಾನ ತಂದುಕೊಡಬಲ್ಲುವು. ಷೇರು ಮಾರುಕಟ್ಟೆ ಕುಸಿತ ಕಾಣುವ ಸಾಧ್ಯತೆ ಇರುತ್ತದೆ. ಬಾಂಡ್ ಅಥವಾ ಸಾಲಪತ್ರಗಳು ನಿರ್ದಿಷ್ಟ ಬಡ್ಡಿ ಕೊಡುತ್ತವೆ. ಒಂದು ರೀತಿಯಲ್ಲಿ ಸ್ಥಿರ ಆದಾಯ ನಿಮಗೆ ಸಿಗುತ್ತದೆ. ಸರ್ಕಾರದ ಗ್ಯಾರಂಟಿ ಇರುವುದರಿಂದ ಹಣ ನಶಿಸುವ ಯೋಚನೆ ಬಾರದು. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಡೆಟ್ ಮಾರುಕಟ್ಟೆಗಳಿಗೆ ಜೋಡಿತಗೊಂಡ ಫಂಡ್ಗಳು ಇದ್ದುದ್ದರಲ್ಲಿ ಹೆಚ್ಚು ರಿಟರ್ನ್ ತಂದಿದ್ದವು.
ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣದುಬ್ಬರ ಜೋಡಿತ ಬಾಂಡ್ಗಳೆನಿಸಿದ ಐಐಬಿ ಅಥವಾ ಇನ್ಫ್ಲೇಶನ್ ಇಂಡೆಕ್ಸ್ಡ್ ಬಾಂಡ್ಗಳನ್ನು ಪಡೆಯಬಹುದು. ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿದ್ದಾಗ ಇಂಥ ಬಾಂಡ್ಗಳು ಬಹಳ ಉಪಯುಕ್ತ ಎನಿಸುತ್ತವೆ.
ಇದನ್ನೂ ಓದಿ: ಇಪಿಎಫ್ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ
ಡೆಟ್ ಆಯ್ಕೆಗಳಲ್ಲಿ ಗವರ್ನ್ಮೆಂಟ್ ಬಾಂಡ್ ಮಾತ್ರವಲ್ಲ ಬ್ಯಾಂಕ್ ಡೆಪಾಸಿಟ್ಗಳೂ ಇವೆ. ಉತ್ತಮ ವಾರ್ಷಿಕ ಬಡ್ಡಿ ಕೊಡುವ ಎಫ್ಡಿ ಪ್ಲಾನ್ಗಳಿವೆ. ಆರ್ಡಿಗಳಲ್ಲೂ ಹಣ ತೊಡಗಿಸಿಕೊಳ್ಳಬಹುದು. ನಿಮ್ಮ ಮಾಸಿಕ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಎಸ್ಐಪಿಯಂತೆ ಆರ್ಡಿ ಉತ್ತಮ ಆಯ್ಕೆ.
ಒಟ್ಟಾರೆ, ನಿಮ್ಮ ಬಳಿ ಇರುವ ಉಳಿತಾಯ ಹಣ ಎಷ್ಟು ಎಂಬುದರ ಮೇಲೆ ನಿಮ್ಮ ಹೂಡಿಕೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಷೇರು ಮಾರುಕಟ್ಟೆ ಮತ್ತು ಡೆಟ್ ಮಾರುಕಟ್ಟೆಗಳಲ್ಲಿ ನಿಮ್ಮ ಹೂಡಿಕೆಗಳು ವ್ಯಾಪಿಸಿರಲಿ ಎಂಬುದು ತಜ್ಞರ ಸಲಹೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ