ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಾವರಿನ್ ಗೋಲ್ಡ್ ಬಾಂಡ್ನ (Sovereign Gold Bond) ಹೊಸ ಕಂತನ್ನು ಬಿಡುಗಡೆ ಮಾಡಿದೆ. 2022-23ನೇ ಸಾಲಿನ ಈ ಕಂತಿನ ಸಾವರಿನ್ ಗೋಲ್ಡ್ ಬಾಂಡ್ ಅನ್ನು ಖರೀದಿಸಲು ಡಿಸೆಂಬರ್ 19ರಿಂದ ಮೊದಲ್ಗೊಂಡು 5 ದಿನಗಳ ಅವಕಾಶವಿದೆ. ಒಂದು ಗ್ರಾಂ ಚಿನ್ನಕ್ಕೆ 5,409 ರೂ.ನಂತೆ ದರ ನಿಗದಿಪಡಿಸಲಾಗಿದೆ. 2022-23ನೇ ಸಾಲಿನ ಮೂರನೇ ಕಂತು ಇದಾಗಿದ್ದು, ಆನ್ಲೈನ್ ಮೂಲಕ ಖರೀದಿಗೆ ಆರ್ಬಿಐ ಅವಕಾಶ ಮಾಡಿಕೊಟ್ಟಿದೆ. ಪ್ರತಿ ಗ್ರಾಂ ಚಿನ್ನಕ್ಕ 50 ರೂ.ನಂತೆ ರಿಯಾಯಿತಿ ದರದ (Discount) ಆಫರ್ ಸಹ ನೀಡಲಾಗಿದೆ. ಅಂದರೆ, ಪ್ರತಿ ಗ್ರಾಂ 5,359 ರೂ.ನಂತೆ ದೊರೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ಮೂಲ ಅಥವಾ ಇಶ್ಯೂ ದರಕ್ಕಿಂತ ವಾರ್ಷಿಕ ಶೇಕಡಾ 2.5ರಷ್ಟು ರಿಟರ್ನ್ಸ್ ತಂದುಕೊಡುತ್ತದೆ. ಈ ಬಾಂಡ್ಗಳಿಗೆ ದೊರೆಯುವ ಬಡ್ಡಿಯನ್ನು ಇತರ ಮೂಲಗಳಿಂದ ದೊರೆಯುವ ಆದಾಯ ಎಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಮೆಚ್ಯೂರಿಟಿ ಅವಧಿಯ ನಂತರ ವಾಪಸ್ ಪಡೆಯುವುದಾದರೆ ತೆರಿಗೆ ಪಾವತಿಸಬೇಕಾಗಿಲ್ಲ.
ಸಾವರಿನ್ ಗೋಲ್ಡ್ ಬಾಂಡ್ ಎಂಬುದು ವಸ್ತು ರೂಪದ ಅಥವಾ ಸಾಮಾನ್ಯ ಚಿನ್ನಕ್ಕೆ ಬದಲಾಗಿ ಸರ್ಕಾರದ ಪರವಾಗಿ ಕೇಂದ್ರೀಯ ಬ್ಯಾಂಕ್ಗಳು ಬಿಡುಗಡೆ ಚಿನ್ನವಾಗಿದೆ. ಅಂದರೆ, ಇಲ್ಲಿ ಬಾಂಡ್ ರೂಪದಲ್ಲಿ ಚಿನ್ನವನ್ನು ನೀಡಲಾಗುತ್ತದೆ. ಭಾರತದಲ್ಲಿ ಆರ್ಬಿಐ ಇದನ್ನು ಬಿಡುಗಡೆ ಮಾಡುತ್ತದೆ. ಚಿನ್ನದ ಬದಲಿಗೆ ಚಿನ್ನದ ಬೆಲೆಗೆ ಬಾಂಡ್ಗಳನ್ನು ಖರೀದಿಸುವ ಹೂಡಿಕೆದಾರರು ಮೆಚ್ಯೂರಿಟಿ ಅವಧಿಯ ಬಳಿಕ ಬಾಂಡ್ಗಳನ್ನು ವಾಪಸ್ ನೀಡಿ ಅದಕ್ಕೆ ರಿಟರ್ನ್ಸ್ ಪಡೆಯುತ್ತಾರೆ. ಈ ಬಾಂಡ್ಗಳನ್ನು 8 ವರ್ಷಗಳ ಅವಧಿಗೆ ಆರ್ಬಿಐ ಬಿಡುಗಡೆ ಮಾಡುತ್ತದೆ. 5ನೇ ವರ್ಷದ ನಂತರ ಮರಳಿಸಲೂ ಈಗ ಅವಕಾಶವಿದೆ. ಚಿನ್ನದ ವಹಿವಾಟಿನ ಬೆಲೆಯ ಸರಾಸರಿಯನ್ನು ತೆಗೆದುಕೊಂಡು ಸಾವರಿನ್ ಗೋಲ್ಡ್ ಬಾಂಡ್ ಬೆಲೆ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: Gold Bonds: ಸಾವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?
ಸಾವರಿನ್ ಗೋಲ್ಡ್ ಬಾಂಡ್ ಅನ್ನು ಆನ್ಲೈನ್ ಮೂಲಕ ಖರೀದಿಸುವುದು ಹೇಗೆ? ಅದಕ್ಕಾಗಿ ಏನೇನು ಪ್ರಕ್ರಿಯೆಗಳನ್ನು ಅನುಸರಿಸಬೇಕು? ಪೂರ್ತಿ ವಿವರವನ್ನು ಇಲ್ಲಿ ನೀಡಲಾಗಿದೆ.
Published On - 2:16 pm, Tue, 20 December 22