ಮಾರುಕಟ್ಟೆ ಒಂದೇ ತೆರನಾಗಿ ಇರೋದಿಲ್ಲ ಇರಲ್ಲ. ಕಳೆದ ಮೂರು ವರ್ಷಗಳಿಂದ ಭಾರತೀಯ ಷೇರುಪೇಟೆ ಅದ್ವಿತೀಯ ಓಟದಲ್ಲಿದೆ. ಇಲ್ಲಿ ಹೂಡಿಕೆದಾರರು ಮುಟ್ಟಿದ್ದೆಲ್ಲವೂ ಚಿನ್ನ ಎಂದು ಭಾವಿಸುವ ಸಂದರ್ಭ. ಆದರೆ, ಪರಿಸ್ಥಿತಿ ಇದೇ ರೀತಿ ಮುಂದುವರಿಯಬಹುದು, ಅಥವಾ ರೇಖೆ ಹಿಮ್ಮುಖವಾಗಬಹುದು. ಕೋವಿಡ್ನಂತಹ ಮಾರಕ ಹೊಸ ಕಾಯಿಲೆ ಎದುರಾಗಬಹುದು, ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹಗರಣವೊಂದು ಸುಳಿದಾಡಬಹುದು, ಅಥವಾ ದೊಡ್ಡ ಯುದ್ಧವೇ ನಡೆಯಬಹುದು, ಹೀಗೆ ಯಾವುದಾದರೂ ದೊಡ್ಡ ಘಟನೆಯಾದರೆ ಮಾರುಕಟ್ಟೆ ಒಂದಷ್ಟು ಕಾಲ ಅಲುಗಾಡಿ ಹೋಗುತ್ತದೆ. ನೀವು ಮಾಡಿದ್ದ ಹೂಡಿಕೆ ನೀರಲ್ಲಿ ಹೋಮ ಮಾಡಿದಂತೆ ಆಯಿತಲ್ಲ ಎನಿಸಬಹುದು. ಹಾಗಿದ್ದರೆ ಅನಿಶ್ಚಿತ ಎನಿಸುವ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ಮಾಡುವುದೇ ತಪ್ಪಾ? ಖಂಡಿತ ಅಲ್ಲ.
ಷೇರು ಮಾರುಕಟ್ಟೆ ಚಿನ್ನದ ಮೊಟ್ಟೆ ಇಡುವ ಕೋಳಿಯಲ್ಲ. ಮಲ್ಟಿಬ್ಯಾಗರ್ ಷೇರುಗಳು ಐದು ವರ್ಷದಲ್ಲಿ 10 ಪಟ್ಟು ಬೆಳೆದಿರುವುದನ್ನು ಕಂಡು ಎಲ್ಲಾ ಷೇರುಗಳೂ ಅದೇ ರೀತಿ ರಿಟರ್ನ್ ಕೊಡಬಲ್ಲುದು ಎಂದು ನಂಬಿಕೊಳ್ಳಲು ಆಗೊಲ್ಲ. ಐದು ವರ್ಷದಲ್ಲಿ ಮಲ್ಟಿಬ್ಯಾಗರ್ ಎನಿಸಿದ ಷೇರುಗಳು ನೋಡನೋಡುತ್ತಿದ್ದಂತೆಯೇ ಎರಡು ವರ್ಷದಲ್ಲಿ ಕುಸಿದುಹೋಗಬಹುದು. ಸಂಭಾವ್ಯತೆ ಹಲವಿರುತ್ತವೆ.
ಇದನ್ನೂ ಓದಿ: ಹಣದ ಮೌಲ್ಯ ಇವತ್ತೇ ಬೇರೆ ನಾಳೆಯೇ ಬೇರೆ; ಭವಿಷ್ಯಕ್ಕೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಸಿಂಪಲ್ ಸೂತ್ರ
ಕಳೆದ 25 ವರ್ಷಗಳ ಭಾರತೀಯ ಷೇರು ಮಾರುಕಟ್ಟೆಯ ಏರಿಳಿತದ ದತ್ತಾಂಶವನ್ನು ಪರಿಗಣಿಸಿ ನೋಡಿದರೆ ಒಂದು ಅಂಶ ಪ್ರಮುಖವಾಗಿ ಕಾಣುತ್ತದೆ. ಅದು ಕನಿಷ್ಠ 10 ವರ್ಷವಾದರೂ ಹೂಡಿಕೆ ಮಾಡಿದರೆ ನಷ್ಟದ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಲಾಭದ ಸಾಧ್ಯತೆ ಶೇ. 80ಕ್ಕಿಂತಲೂ ಹೆಚ್ಚಿರುತ್ತದೆ.
ಒಂದು ದಿನದ ಹೂಡಿಕೆ: ನಷ್ಟದ ಸಾಧ್ಯತೆ ಶೇ. 46
ಒಂದು ತಿಂಗಳು: ಶೇ. 38
6 ತಿಂಗಳು: ಶೇ. 35
1 ವರ್ಷ: ಶೇ. 24
3 ವರ್ಷ: ಶೇ. 7
5 ವರ್ಷ: ಶೇ. 0.1
10 ವರ್ಷ: 0
ಇದನ್ನೂ ಓದಿ: ತಾತ್ಕಾಲಿಕವಾಗಿ ಹಣದ ಅಗತ್ಯ ಇದೆಯಾ? ಷೇರು ಅಡ ಇಟ್ಟು ಸಾಲ ಪಡೆಯುವ ಅವಕಾಶ
ಈ ಮೇಲಿನ ಅಂಕಿ ಅಂಶವನ್ನು 1999ರ ಜೂನ್ನಿಂದ ಈವರೆಗೆ ನಿಫ್ಟಿ50 ಸೂಚ್ಯಂಕವನ್ನು ಆಧರಿಸಿ ಪಡೆಯಲಾಗಿದೆ. ಇದರಲ್ಲಿ ಕನಿಷ್ಠ 5 ವರ್ಷವಾದರೂ ನಿಮ್ಮ ಹೂಡಿಕೆ ಇದ್ದರೆ ಅದು ಸುರಕ್ಷಿತವಾಗಿರುತ್ತದೆ. ಐದು ವರ್ಷದವರೆಗೆ ಆಗೊಲ್ಲವೆಂದರೆ ಕನಿಷ್ಠ ಮೂರು ವರ್ಷವಾದರೂ ನಿಮ್ಮ ಹೂಡಿಕೆ ಇರಬೇಕು.
ನಿಮ್ಮ ಹೂಡಿಕೆ ಅವಧಿ ಹೆಚ್ಚಾದಷ್ಟೂ ಲಾಭದ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಐದು ವರ್ಷ ನಿಮ್ಮ ಹೂಡಿಕೆ ಅವಧಿ ಇದ್ದರೆ ಶೇ. 10ಕ್ಕಿಂತಲೂ ಹೆಚ್ಚು ಲಾಭ ಪಡೆಯುವ ಸಂಭವನೀಯತೆ 73 ಪ್ರತಿಶತ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ