
ಮಕ್ಕಳ ಓದು ಇವತ್ತು ಬಹಳ ಮುಖ್ಯ. ಒಳ್ಳೆಯ ಶಾಲೆ ಮತ್ತು ಯೂನಿವರ್ಸಿಟಿಗಳಲ್ಲಿ ಸೀಟು ಸಿಗಬೇಕಾದರೆ ಸಾಕಷ್ಟು ಶುಲ್ಕ ಕಟ್ಟಬೇಕು. ಪ್ರಾಥಮಿಕ ಹಂತದಿಂದಲೇ ಶಾಲಾ ಫೀಸು ಬಹಳ ದುಬಾರಿ (Education expense) ಇರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಸರಾಸರಿ ಶಾಲೆಗಳಲ್ಲಿ ಶುಲ್ಕ 50,000 ರೂನಿಂದ 1,50,000 ರೂ ಇರುತ್ತದೆ. ಇನ್ನೂ ಪ್ರತಿಷ್ಠಿತ ಶಾಲೆಗಳಾದರೆ ವರ್ಷದ ಫೀಸು 2ರಿಂದ 6 ಲಕ್ಷ ರೂವರೆಗೂ ಇರಬಹುದು. ಹೆಚ್ಚು ಶುಲ್ಕ ಪಾವತಿಸಲಾಗದೆ ಸಾಧಾರಣ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವಂತಾಗಬಹುದು.
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಈ ವಿಚಾರ ಪ್ರಸ್ತಾಪಿಸಿ, ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ‘ನೂರಕ್ಕೆ 99 ಪೋಷಕರು ಶಾಲಾ ಫೀಸ್ಗೆ ಲಕ್ಷಾಂತರ ರೂ ವ್ಯಯಿಸುತ್ತಾರೆ. ನಿಮ್ಮ ಮಗುವಿನ ಶಿಕ್ಷಣವನ್ನು ಉಚಿತವಾಗಿ ಭರಿಸುವಂತಹ 10 ವರ್ಷದ ಎಸ್ಐಪಿ ಪ್ಲಾನ್ ಇದೆ, ನೋಡಿ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?
ಮಗು ಹುಟ್ಟಿದಾಗಲೇ ನೀವು 10,000 ರೂ ಎಸ್ಐಪಿ ಆರಂಭಿಸಿ. ಶೇ. 10 ಸ್ಟೆಪ್ ಅಪ್ ಮಾಡಿ. ಅಂದರೆ ವರ್ಷಕ್ಕೆ ನಿಮ್ಮ ಹೂಡಿಕೆಯನ್ನು ಶೇ. 10ರಷ್ಟು ಹೆಚ್ಚಿಸುತ್ತಾ ಹೋಗಿ. ಈ ವರ್ಷ ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತೀರಿ. ಮುಂದಿನ ವರ್ಷ ನೀವು ಮಾಸಿಕ ಹೂಡಿಕೆಯನ್ನು 11,000 ರೂಗೆ ಹೆಚ್ಚಿಸುತ್ತೀರಿ. ಈ ರೀತಿ 10 ವರ್ಷಗಳವರೆಗೆ ಮಾಡಿ, ಹೂಡಿಕೆ ನಿಲ್ಲಿಸಬಹುದು.
ಈ 10 ವರ್ಷದಲ್ಲಿ 10,000 ರೂಗಳ ಸ್ಟೆಪಪ್ ಹೂಡಿಕೆಯಲ್ಲಿ ನೀವು ವ್ಯಯಿಸುವುದು ಸುಮಾರು 19.12 ಲಕ್ಷ ರೂ. ಈ ಫಂಡ್ ವರ್ಷಕ್ಕೆ ಶೇ. 12ರಷ್ಟು ಲಾಭ ಮಾಡಿದ್ದರೆ ನಿಮ್ಮ 19 ಲಕ್ ರೂ ಹೂಡಿಕೆಯು 32.69 ಲಕ್ಷ ರೂ ಆಗುತ್ತದೆ.
ಮಗು ಹುಟ್ಟಿದಾಗಲೇ ನೀವು ಎಸ್ಐಪಿ ಆರಂಭಿಸಿದರೆ ಹತ್ತು ವರ್ಷಕ್ಕೆ ಹೂಡಿಕೆ ನಿಲ್ಲಿಸಿದಾಗ ಮಗು ವಯಸ್ಸು 10 ವರ್ಷ ಆಗಿರುತ್ತದೆ. ಆಗಿನಿಂದ ಹಿಡಿದು 22ರ ವಯಸ್ಸಿನವರೆಗೆ ನೀವು ಫಂಡ್ನಿಂದ ತಿಂಗಳಿಗೆ 25,000 ರೂ ವಿತ್ಡ್ರಾ ಮಾಡಿಕೊಳ್ಳುತ್ತಾ ಹೋಗಬಹುದು. ಆ ಫಂಡ್ ಶೇ. 12ರ ಸಿಎಜಿಆರ್ನಲ್ಲೇ ಬೆಳೆಯುತ್ತಾ ಹೋಗುತ್ತಿದ್ದರೆ ಫಂಡ್ನಲ್ಲಿರುವ ಹಣ ಖಾಲಿಯೇ ಆಗುವುದಿಲ್ಲ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು: ಅಕ್ಟೋಬರ್-ಡಿಸೆಂಬರ್ ಬಡ್ಡಿದರ ಪರಿಷ್ಕರಣೆ
12 ವರ್ಷದಲ್ಲಿ ನೀವು 36 ಲಕ್ಷ ರೂ ವಿತ್ಡ್ರಾ ಮಾಡುತ್ತೀರಿ. ಅದಾದ ಬಳಿಕವೂ 51 ಲಕ್ಷ ರೂ ಹಣವು ಫಂಡ್ನಲ್ಲಿ ಇರುತ್ತದೆ. ಈ ಹಂತದಲ್ಲಿ ಮಗುವಿನ ವಯಸ್ಸು 22 ವರ್ಷ ಆಗಿರುತ್ತದೆ. ಅದು ಉನ್ನತ ವ್ಯಾಸಂಗ ಮಾಡಬಹುದು. ಆದಕ್ಕೂ ಕೂಡ ನಿಮ್ಮ ಫಂಡ್ನಲ್ಲಿರುವ ಹಣ ಉಪಯೋಗಕ್ಕೆ ಬರುತ್ತದೆ. ಆದರೆ, ಇವೆಲ್ಲವೂ ಸಾಧ್ಯವಾಗುವುದು ಎಸ್ಐಪಿ ಫಂಡ್ ದೀರ್ಘಾವಧಿಯಲ್ಲಿ ಶೇ. 12ರ ಸಿಎಜಿಆರ್ನಲ್ಲಿ ಬೆಳೆದಾಗ ಮಾತ್ರ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ