RuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್​ನ ಅನುಕೂಲತೆಗಳು

|

Updated on: Jul 14, 2023 | 2:18 PM

Benefits of RuPay Credit Cards: ರುಪೇ ಕಾರ್ಡ್​ಗಳು ಇದೀಗ ಬಹಳ ಜನಪ್ರಿಯವಾಗುತ್ತಿವೆ. ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ವೀಸಾ ಮತ್ತು ಮಾಸ್ಟರ್​ಕಾರ್ಡ್ ಸಂಸ್ಥೆಗಳು ಹೊಂದಿದ್ದ ಪ್ರಾಬಲ್ಯವನ್ನು ರುಪೇ ಮುರಿಯುತ್ತಿದೆ. ರುಪೆ ಕಾರ್ಡ್​ಗಳಿಂದ ಅನುಕೂಲ ಮತ್ತು ಅನನುಕೂಲಗಳು ಏನು ಎಂಬ ವಿವರ ಇಲ್ಲಿದೆ..

RuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್​ನ ಅನುಕೂಲತೆಗಳು
ರುಪೇ ಕಾರ್ಡ್
Follow us on

ಕೆಲ ವರ್ಷಗಳ ಹಿಂದಿನವರೆಗೂ ಕ್ರೆಡಿಟ್ ಕಾರ್ಡ್​ಗಳೆಂದರೆ ಸಾಮಾನ್ಯವಾಗಿ ವೀಸಾ, ಮಾಸ್ಟರ್ ಕಾರ್ಡ್​ನದ್ದಾಗಿರುತ್ತಿದ್ದವು. ಈಗ ರುಪೇ ಕಾರ್ಡ್​ಗಳ ಸಂಖ್ಯೆ ಹೆಚ್ಚುತ್ತಿದೆ, ಜನಪ್ರಿಯತೆಯೂ ಹೆಚ್ಚುತ್ತಿದೆ. ರುಪೇ ಎಂಬುದು ಸರ್ಕಾರದಿಂದಲೇ ಪ್ರಚಾರ ಪಡೆದಿರುವ ಸರ್ಕಾರೀ ಸಂಸ್ಥೆಯೇ ರೂಪಿಸಿರುವ ಕಾರ್ಡ್ ನೆಟ್ವರ್ಕ್. ಹೀಗಾಗಿ, ರುಪೇ ಕಾರ್ಡ್ ವಿಶ್ವಾಸಾರ್ಹವೆನಿಸಿವೆ, ಹಲವು ಲಾಭಗಳನ್ನೂ ತರುತ್ತವೆ.

ವೀಸಾ, ಮಾಸ್ಟರ್​ಕಾರ್ಡ್​ಗಳಂತೆ ರುಪೇ ಕೂಡ ಕಾರ್ಡ್ ನೆಟ್ವರ್ಕ್. ಕಾರ್ಡ್ ನೆಟ್ವರ್ಕ್​ಗಳು ಸ್ವತಃ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕೊಡುವುದಿಲ್ಲ. ಬ್ಯಾಂಕುಗಳ ಮೂಲಕ ವಿತರಿಸುತ್ತವೆ. ಬ್ಯಾಂಕುಗಳು ಯಾವುದೇ ಕಾರ್ಡ್ ನೆಟ್ವರ್ಕ್ ಕಂಪನಿಯೊಂದಿಗೆ ಸಹಯೋಗದಲ್ಲಿ ಕಾರ್ಡ್ ನೀಡುತ್ತವೆ. ಅಂತೆಯೇ ನೀವು ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ವೀಸಾ ಕಾರ್ಡ್ ಪಡೆಯಬಹುದು, ಮಾಸ್ಟರ್ ಕಾರ್ಡ್ ಪಡೆಯಬಹುದು. ರುಪೇ ಕಾರ್ಡ್ ಕೂಡ ಪಡೆಯಬಹುದು. ಎಲ್ಲಾ ಬ್ಯಾಂಕುಗಳು ಎಲ್ಲಾ ಕಾರ್ಡ್ ನೆಟ್ವರ್ಕ್​ಗಳ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಬೇಕು ಎಂದು ಇತ್ತೀಚೆಗೆ ಸರ್ಕಾರ ತಿಳಿಸಿತ್ತು. ಹಾಗೆಯೇ, ಯುಪಿಐ ಪಾವತಿಗೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಇದು ರುಪೇ ಕಾರ್ಡ್​ಗೆ ಪ್ರಾಮುಖ್ಯತೆ ಗಿಟ್ಟಿಸುವ ಸರ್ಕಾರದ ಒಂದು ಹೆಜ್ಜೆ ಎಂದು ಪರಿಗಣಿಸಲಡ್ಡಿ ಇಲ್ಲ.

ಇದನ್ನೂ ಓದಿESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?

ರುಪೇ ಕ್ರೆಡಿಟ್ ಕಾರ್ಡ್​ನ ಅನುಕೂಲತೆಗಳು

  • ಕ್ರೆಡಿಟ್ ಕಾರ್ಡ್ ಕಂಪನಿಗಳ ಪೈಕಿ ರುಪೇ ಮಾತ್ರವೇ ಭಾರತದ್ದು. ಇದರ ಸರ್ವರ್​ಗಳು ಭಾರತದಲ್ಲಿ ಇದ್ದು, ವಹಿವಾಟು ಬಹಳ ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ.
  • ರುಪೇ ಕಾರ್ಡನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ (ಎನ್​ಪಿಸಿಐ) ಅಭಿವೃದ್ಧಿಪಡಿಸಿದ್ದು, ವಂಚನೆ ಇತ್ಯಾದಿಗಳಿಗೆ ಅವಕಾಶ ಇಲ್ಲದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
  • ರುಪೇ ಕಾರ್ಡ್​ಗಳ ವಾರ್ಷಿಕ ಶುಲ್ಕ ಹಾಗೂ ಪ್ರವೇಶ ಶುಲ್ಕ ಬಹಳ ಕಡಿಮೆ.
  • ಯುಪಿಐ ಆ್ಯಪ್​ಗಳಿಗೆ ರುಪೇ ಕಾರ್ಡ್​ಗಳನ್ನು ಲಿಂಕ್ ಮಾಡಬಹುದು. ಬೇರೆ ಕ್ರೆಡಿಟ್ ಕಾರ್ಡ್​ಗಳಿಗೆ ಇದಕ್ಕೆ ಅವಕಾಶ ಇಲ್ಲ.
  • ರುಪೇ ಬಳಿ ಆ್ಯಂಟಿಫಿಶಿಂಗ್ ಟೆಕ್ನಾಲಜಿ ಇದೆ. ಅತ್ಯುನ್ನತ ಇಎಂವಿ ಚಿಪ್​ಸೆಟ್ ಹೊಂದಿದೆ. ಇದು ಬಹಳ ಸುರಕ್ಷಿತ ಹಾಗೂ ವೇಗದ ವಹಿವಾಟಿಗೆ ಅನುವು ಮಾಡಿಕೊಡುತ್ತದೆ.
  • ರುಪೇ ನೆಟ್ವರ್ಕ್​ನಲ್ಲಿ ಹಲವು ವರ್ಗಗಳಿಗೆ, ಗುಂಪುಗಳಿಗೆ, ಹವ್ಯಾಸಗಳಿಗೆ ತಕ್ಕಂತಹ ವಿವಿಧ ಕಾರ್ಡ್​ಗಳ ಆಯ್ಕೆಗಳಿವೆ.
  • ಬಹಳಷ್ಟು ವರ್ತಕರೊಂದಿಗೆ ರುಪೇ ಸಹಭಾಗಿತ್ವ ಹೊಂದಿದೆ. ರಿವಾರ್ಡ್, ಡಿಸ್ಕೌಂಟ್ ಪ್ರಮಾಣ ಹೆಚ್ಚು ಇರುತ್ತದೆ.
  • ರುಪೇ ಕ್ರೆಡಿಟ್ ಕಾರ್ಡ್​ಗಳ ಅನನುಕೂಲತೆಗಳೇನು?
  • ಹೊರದೇಶಗಳಿಗೆ ಹೋದರೆ ರುಪೇ ಕ್ರೆಡಿಟ್ ಕಾರ್ಡ್ ಬಳಸುವ ಪಿಒಎಸ್ ಹೆಚ್ಚು ಪ್ರಮಾಣದಲ್ಲಿ ಇಲ್ಲ.
  • ವೀಸಾ ಅಥವಾ ಮಾಸ್ಟರ್​ಕಾರ್ಡ್​ಗಳಿಗೆ ಹೋಲಿಸಿದರೆ ರುಪೇ ಕ್ರೆಡಿಟ್ ಕಾರ್ಡ್​ಗಳಲ್ಲಿ ಕ್ರೆಡಿಟ್ ಲಿಮಿಟ್ ಕಡಿಮೆ ಇದೆ.

ಇದನ್ನೂ ಓದಿAadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?

ಮೇಲಿನ ಈ ಎರಡು ಅನನುಕೂಲತೆಗಳನ್ನು ಸರಿದೂಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ವಿದೇಶಗಳಲ್ಲಿ ರುಪೇ ಕ್ರೆಡಿಟ್ ಕಾರ್ಡ್​ಗೆ ಮಾನ್ಯತೆ ಹೆಚ್ಚಿಸುವ ಪ್ರಯತ್ನವಾಗುತ್ತಿದೆ. ಫೋರೆಕ್ಸ್ ಕಾರ್ಡ್, ಪ್ರೀಪೇಡ್ ಕಾರ್ಡ್ ಇತ್ಯಾದಿಗಳನ್ನು ಒದಗಿಸುತ್ತಿದೆ.

ಇದೀಗ ಕ್ರೆಡಿಟ್ ಕಾರ್ಡ್ ವರ್ಗಾವಣೆಗೆ ಅವಕಾಶ ಮಾಡಿಕೊಡುವ ಕಾನೂನನ್ನು ಸರ್ಕಾರ ರೂಪಿಸುತ್ತಿದೆ. ಅಂದರೆ ಒಂದು ಕಾರ್ಡ್ ನೆಟ್ವರ್ಕ್​ನಲ್ಲಿರುವ ಕಾರ್ಡನ್ನು ಬೇರೆ ನೆಟ್ವರ್ಕ್​ಗೆ ಬದಲಾಯಿಸುವ ಅವಕಾಶವನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸಬೇಕಾಗುತ್ತದೆ. ಉದಾಹರಣೆಗೆ, ಎಚ್​ಡಿಎಫ್​ಸಿಯ ವೀಸಾ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬೇಕಾದರೆ ತಮ್ಮ ಕಾರ್ಡ್ ನೆಟ್ವರ್ಕ್ ಅನ್ನು ರುಪೇ ಅಥವಾ ಮಾಸ್ಟರ್​​ಕಾರ್ಡ್​ಗೆ ಬದಲಾಯಿಸಿಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ