ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ ಮಾಡಿರುವ ಹಲವು ಠೇವಣಿ ಯೋಜನೆಗಳಲ್ಲಿ ಅಮೃತ್ ಕಳಶ್ ಸ್ಪೆಷಲ್ ಎಫ್ಡಿ (SBI Amrit Kalash Special FD) ಸ್ಕೀಮ್ ಪ್ರಮುಖವಾದುದು. ರೆಗ್ಯುಲರ್ ಡೆಪಾಸಿಟ್ಗಳಿಗಿಂತ ಅಮೃತ್ ಕಳಶ್ ಪ್ಲಾನ್ನಲ್ಲಿ ಹೆಚ್ಚು ಬಡ್ಡಿ ಕೊಡಲಾಗುತ್ತದೆ. ಈ ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಮಾರ್ಚ್ 31ರವರೆಗೆ ಲಭ್ಯ ಇರುತ್ತದೆ. 2023ರ ಏಪ್ರಿಲ್ 12ರಂದು ಆರಂಭಗೊಂಡ ಈ ಪ್ಲಾನ್ನ ಡೆಡ್ಲೈನ್ ಅನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಇದೀಗ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಶ್ಚಿತ ಠೇವಣಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7.1, ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ.
ಎಸ್ಬಿಐ ಅಮೃತ್ ಕಳಶ್ ಯೋಜನೆಯಲ್ಲಿ ನಿಶ್ಚಿತ ಠೇವಣಿ 400 ದಿನದ ಅವಧಿಯದ್ದಾಗಿರುತ್ತದೆ. ಇದರ ಮೇಲಿನ ಬಡ್ಡಿ ಹಣವನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ, ಅಥವಾ ಅರ್ಧವಾರ್ಷಿಕವಾಗಿ ಪಡೆಯಬಹುದು.
ಎಸ್ಬಿಐನ ಬೇರೆ ಠೇವಣಿಗಳಿಗೆ ಶೇ. 3.5ರಿಂದ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಬರುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಎರಡು ವರ್ಷದಿಂದ ಮೂರು ವರ್ಷದವರೆಗಿನ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇದು ಎಸ್ಬಿಐನ ರೆಗ್ಯುಲರ್ ಡೆಪಾಸಿಟ್ ಯೋಜನೆಗಳಲ್ಲೇ ಗರಿಷ್ಠವೆನಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ನಲ್ಲಿ ಎಫ್ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್
ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ವೀ ಕೇರ್ ಡೆಪಾಸಿಟ್ ಸ್ಕೀಮ್ನಲ್ಲಿ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಸರ್ವೋತ್ತಮ್ ಸ್ಕೀಮ್ನಲ್ಲಿ ಎರಡು ವರ್ಷದ ಠೇವಣಿಗೆ ಶೇ. 7.4ರಷ್ಟು ಬಡ್ಡಿ ಆಫರ್ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಶೇ. 7.9ರಷ್ಟು ಆದಾಯ ಬರುತ್ತದೆ.
ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ
400 ದಿನಗಳ ಠೇವಣಿಯು ಅಮೃತ್ ಕಳಶ್ ಪ್ಲಾನ್ ಅಡಿಯಲ್ಲಿ ಬರುತ್ತದೆ. ಇದಕ್ಕೆ ಶೇ. 7.1ರಷ್ಟು ಬಡ್ಡಿ ಇದೆ. ಈ ಎಲ್ಲಾ ವಿಶೇಷ ಮತ್ತು ರೆಗ್ಯುಲರ್ ಡೆಪಾಸಿಟ್ ಪ್ಲಾನ್ಗಳಲ್ಲಿ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚಿಗೆ ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ