ಉಳಿಸಿದ ಹಣವನ್ನು ಹೂಡಿಕೆ ಮಾಡಲು ಹೆಚ್ಚಿನ ಮಂದಿಯ ಸಾಂಪ್ರದಾಯಿಕ ಆಯ್ಕೆ ಎಂದರೆ ಫಿಕ್ಸೆಡ್ ಡೆಪಾಸಿಟ್. ಮಾರುಕಟ್ಟೆ ವಿಚಲನೆಯ (Market uncertainty) ಅಪಾಯ ಇಲ್ಲದೇ ನಿಶ್ಚಿತ ದರದಲ್ಲಿ ಇದು ಹೂಡಿಕೆಯನ್ನು ಬೆಳೆಸಬಲ್ಲುದು. ಆದರೆ, ನಿಶ್ಚಿತ ಠೇವಣಿಯ ಒಂದು ಪ್ರಮುಖ ತೊಡಕೆಂದರೆ ಒಮ್ಮೆಗೇ ಹಣವನ್ನು ಠೇವಣಿ ಇಡಬೇಕು. ನಿಯಮಿತವಾಗಿ ಡೆಪಾಸಿಟ್ ಇಡಲು ಆರ್ಡಿ ಪ್ಲಾನ್ಗಳಿವೆ. ಆದರೆ, ರೆಕರಿಂಗ್ ಡೆಪಾಸಿಟ್ನಲ್ಲಿ ಎಫ್ಡಿಯಷ್ಟು ಬಡ್ಡಿ ಸಿಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕೊಡುತ್ತದೆ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್. ಎಫ್ಡಿ, ಆರ್ಡಿ ಮತ್ತು ಎಸ್ಐಪಿ ಯೋಜನೆಗಳನ್ನು ಮೇಳೈಸಿದ ಪ್ಲಾನ್ ಇದು.
ಎಸ್ಡಿಪಿಯಲ್ಲಿ ಆರ್ಡಿಯಂತೆ ನಿಯಮಿತವಾಗಿ ಹಣವನ್ನು ಠೇವಣಿ ಇಡುತ್ತಾ ಹೋಗಬಹುದು. ತಿಂಗಳಿಗೆ ಠೇವಣಿ ಹಣ 500 ರೂನಿಂದ ಆರಂಭವಾಗುತ್ತದೆ. ಒಂದೊಂದು ಕಂತನ್ನೂ ಪ್ರತ್ಯೇಕ ಠೇವಣಿ ಎಂದು ಪರಿಗಣಿಸಲಾಗುತ್ತದೆ. ಠೇವಣಿ ಇಡುವಾಗ ಹಾಲಿ ಎಫ್ಡಿ ದರ ಅನ್ವಯ ಆಗುತ್ತದೆ. ಒಂದೊಂದು ಠೇವಣಿಗೂ ಮೆಚ್ಯೂರಿಟಿ ಅವಧಿ ಬೇರೆಯೇ ಇರುತ್ತದೆ. ಎಫ್ಡಿ ದರದಲ್ಲಿ ಬದಲಾವಣೆ ಆದಾಗ ನೀವು ಎಸ್ಡಿಪಿಯಲ್ಲಿ ಠೇವಣಿ ಇಟ್ಟರೆ ಆ ಬದಲಾದ ದರ ಅನ್ವಯ ಆಗುತ್ತದೆ.
ಇದನ್ನೂ ಓದಿ: FD Rates: ಎಸ್ಬಿಐ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ; ವಿವಿಧ ಎಫ್ಡಿ ದರಗಳ ಹೆಚ್ಚಳ
ಫಿಕ್ಸೆಡ್ ಡೆಪಾಸಿಟ್ನಲ್ಲಿ ಇಡೀ ಲಂಪ್ಸಮ್ ಹಣಕ್ಕೆ ಪೂರ್ವನಿಗದಿತವಾದ ಬಡ್ಡಿದರ ಅನ್ವಯ ಆಗುತ್ತದೆ. ಆರ್ಡಿಯಲ್ಲೂ ಹೀಗೇ ಇರುತ್ತದೆ. ಆದರೆ, ಎಸ್ಡಿಪಿ ಅಥವಾ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ನಲ್ಲಿ ಬಡ್ಡಿದರ ಬದಲಾಗಬಹುದು. ಡೆಪಾಸಿಟ್ ಇಡುವಾಗ ಎಫ್ಡಿ ದರ ಹೆಚ್ಚಾದರೆ ನಿಮಗೆ ಹೆಚ್ಚು ಲಾಭ, ದರ ಕಡಿಮೆ ಆದರೆ ಕಡಿಮೆ ಭಾಗ್ಯ.
ಇನ್ನು, ಮ್ಯುಚುವಲ್ ಫಂಡ್ ಹೂಡಿಕೆಯಲ್ಲಿ ಇರುವ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ನಲ್ಲಿ ಹೂಡಿಕೆಯೊಳಗೆ ಹೂಡಿಕೆಗಳು ಸೇರುತ್ತಾ ಹೋಗಿ ಸಂಯುಕ್ತಗೊಂಡು (power of compounding) ಫಂಡ್ ರಿಟರ್ನ್ ಹೆಚ್ಚಾಗುತ್ತದೆ. ಎಸ್ಡಿಪಿಯಲ್ಲೂ ಕೂಡ ಠೇವಣಿ ಇಡುವ ಹಣಕ್ಕೆ ಬಡ್ಡಿ ಸೇರುತ್ತಾ ಹೋಗಿ ಆ ಬಡ್ಡಿಹಣಕ್ಕೆ ಚಕ್ರಬಡ್ಡಿ ಸೇರ್ಪಡೆಯಾಗುತ್ತದೆ. ಈ ಕಾಂಪೌಂಡಿಂಗ್ ಗುಣವು ಎಸ್ಡಿಪಿಯನ್ನು ಆಕರ್ಷಕವನ್ನಾಗಿ ಮಾಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ