AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Rates: ಎಸ್​ಬಿಐ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ; ವಿವಿಧ ಎಫ್​ಡಿ ದರಗಳ ಹೆಚ್ಚಳ

State Bank of India fixed deposits: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವರ್ಷಕ್ಕೆ ಮುನ್ನ ತನ್ನ ವಿವಿಧ ಅವಧಿಯ ಠೇವಣಿ ದರಗಳನ್ನು ಹೆಚ್ಚಿಸಿದೆ. ಹೆಚ್ಚಿನ ಠೇವಣಿಗಳಿಗೆ 50 ಮತ್ತು 25 ಬೇಸಿಸ್ ಅಂಕಗಳಷ್ಟು ಬಡ್ಡಿದರವನ್ನು ಎಸ್​ಬಿಐ ಏರಿಸಿದೆ. ಡಿಸೆಂಬರ್ 27, ಬುಧವಾರದಿಂದ ಪರಿಷ್ಕೃತ ಠೇವಣಿ ದರಗಳು ಚಾಲನೆಗೆ ಬರುತ್ತವೆ. ಅಮೃತ್ ಕಳಶ್ ಇತ್ಯಾದಿ ಸ್ಪೆಷಲ್ ಎಫ್​​ಡಿಗಳ ಬಡ್ಡಿ ಪರಿಷ್ಕರಣೆ ಆಗಿಲ್ಲ.

FD Rates: ಎಸ್​ಬಿಐ ಗ್ರಾಹಕರಿಗೆ  ಹೊಸ ವರ್ಷದ ಕೊಡುಗೆ; ವಿವಿಧ ಎಫ್​ಡಿ ದರಗಳ ಹೆಚ್ಚಳ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 27, 2023 | 12:08 PM

Share

ನವದೆಹಲಿ, ಡಿಸೆಂಬರ್ 27: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಫಿಕ್ಸೆಡ್ ಡೆಪಾಸಿಟ್​ಗಳ ಬಡ್ಡಿದರ (fd rates) ಹೆಚ್ಚಿಸಿದೆ. 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಈ ದರ ಬದಲಾವಣೆ ಅನ್ವಯ ಆಗುತ್ತದೆ. ಒಂದರಿಂದ ಮೂರು ವರ್ಷ, ಹಾಗೂ ಐದರಿಂದ ಹತ್ತು ವರ್ಷದ ಅವಧಿಯವರೆಗಿನ ಠೇವಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಎಫ್​ಡಿಗಳಿಗೂ ಎಸ್​ಬಿಐ ಬಡ್ಡಿ ದರ ಹೆಚ್ಚಿಸಿದೆ. ಹೊಸ ದರಗಳು ಇವತ್ತಿನಿಂದಲೇ (ಡಿ. 27) ಜಾರಿಗೆ ಬರುತ್ತವೆ.

ದರ ಪರಿಷ್ಕರಣೆ ಬಳಿಕ ಎಸ್​ಬಿಐನಲ್ಲಿ ಠೇವಣಿಗಳಿಗೆ ಬಡ್ಡಿ ದರ ಶೇ. 3.50ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 4ರಿಂದ ಶೇ. 7.50ಯವರೆಗೂ ಬಡ್ಡಿದರ ಇದೆ. ಆದರೆ, ಎಸ್​ಬಿಐ ವಿಶೇಷ ಠೇವಣಿ ಸ್ಕೀಮ್ ಆದ 400 ದಿನಗಳ ಅಮೃತ್ ಕಳಶ್ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು ಶೇ. 7.10ರಷ್ಟು ಬಡ್ಡಿ, ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಖುಷಿಯ ಸುದ್ದಿ…! ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಹೆಚ್ಚಳ ಸಾಧ್ಯತೆ; ಇಲ್ಲಿದೆ ಸೇವಿಂಗ್ಸ್ ಸ್ಕೀಮ್​ಗಳ ಹಾಲಿ ದರದ ಪಟ್ಟಿ

ಕನಿಷ್ಠ ಡೆಪಾಸಿಟ್ ಅವಧಿಯಾದ ಏಳು ದಿನದಿಂದ 45 ದಿನದವರೆಗಿನ ಠೇವಣಿಗಳಿಗೆ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಲಾಗಿದೆ. 46ದಿದ 179 ದಿನದವರೆಗಿನ ಠೇವಣಿಗೆ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 180 ದಿನದಂದ 210 ದಿನದವರೆಗಿನ ಅವಧಿಯ ಠೇವಣಿಗಳಿಗೂ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಪ್ರಾಪ್ತವಾಗುತ್ತದೆ.

ಎಸ್​ಬಿಐನ ವಿವಿಧ ಎಫ್​ಡಿ ದರಗಳು, ಡಿಸೆಂಬರ್ 27ಕ್ಕೆ ಅನ್ವಯ…

  • 7 ದಿನದಿಂದ 45 ದಿನದವರೆಗಿನ ಠೇವಣಿ: ಶೇ. 3.50ರಷ್ಟು ಬಡ್ಡಿ
  • 46 ದಿನದಿಂದ 179 ದಿನ: ಶೇ. 4.75ರಷ್ಟು ಬಡ್ಡಿ
  • 180 ದಿನದಿಂದ 210 ದಿನ: ಶೇ. 5.75ರಷ್ಟು ಬಡ್ಡಿ
  • 211 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯವರೆಗೂ: ಶೇ. 6 ಬಡ್ಡಿ
  • 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯವರೆಗೂ: ಶೇ. 6.80 ಬಡ್ಡಿ
  • 2 ವರ್ಷದಿಂದ 3 ವರ್ಷದೊಳಗೆ: ಶೇ. 7 ಬಡ್ಡಿ
  • 3 ವರ್ಷದಿಂದ 5 ವರ್ಷದೊಳಗೆ: ಶೇ. 6.75 ಬಡ್ಡಿ
  • 5 ವರ್ಷದಿಂದ 10 ವರ್ಷದೊಳಗೆ: ಶೇ. 6.50 ಬಡ್ಡಿ

ಇದನ್ನೂ ಓದಿ: ನಾಲ್ಕು ಬ್ಯಾಂಕುಗಳಿಂದ ಎಫ್​ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ

ಹಿರಿಯ ನಾಗರಿಕರಿಗೆ ಪರಿಷ್ಕೃತ ಎಸ್​ಬಿಐ ಎಫ್​ಡಿ ದರಗಳು

  • 7 ದಿನದಿಂದ 45 ದಿನ: ಶೇ. 4 ಬಡ್ಡಿ
  • 46 ದಿನದಿದ 179 ದಿನ: ಶೇ. 5.25 ಬಡ್ಡಿ
  • 180 ದಿನದಿಂದ 210 ದಿನ: ಶೇ. 6.25 ಬಡ್ಡಿ
  • 211 ದಿನದಿಂದ 1 ವರ್ಷದೊಳಗೆ: ಶೇ. 6.5 ಬಡ್ಡಿ
  • 1 ವರ್ಷದಿಂದ 2 ವರ್ಷದೊಳಗೆ: ಶೇ. 7.30 ಬಡ್ಡಿ
  • 2 ವರ್ಷದಿಂದ 3 ವರ್ಷದೊಳಗೆ: ಶೇ. 7.50 ಬಡ್ಡಿ
  • 3 ವರ್ಷದಿಂದ 5 ವರ್ಷದೊಳಗೆ: ಶೇ. 7.25 ಬಡ್ಡಿ
  • 5 ವರ್ಷದಿಂದ 10 ವರ್ಷದೊಳಗೆ: ಶೇ. 7.5 ಬಡ್ಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು