ಚಿನ್ನ ಒಂದು ರೀತಿಯ ಆಪತ್ಕಾಲದ ನಿಧಿ. ಆಭರಣವಾಗಿ ನಮ್ಮ ಘನತೆ ಹೆಚ್ಚಿಸುತ್ತದೆ. ತುರ್ತು ಸಂದರ್ಭ ಬಂದರೆ ಮಾರಿ ಹಣ ಪಡೆಯಬಹುದು, ಅಥವಾ ಕಡಿಮೆ ಬಡ್ಡಿಯಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ಚಿನ್ನದ ಬೆಲೆ ಯಾವತ್ತಿದ್ದರೂ ಕಡಿಮೆ ಆಗುವ ಮಾತಿಲ್ಲ. ಆಗೊಮ್ಮೆ ಈಗೊಮ್ಮೆ ಇಳಿಕೆಯಾದರೂ ಇದರ ಬೆಲೆ ಸಾಮಾನ್ಯವಾಗಿ ಮೇಲ್ಮುಖಿ. 10 ಗ್ರಾಮ್ ಚಿನ್ನದ ಬೆಲೆ 60,000 ರೂ ಆಸುಪಾಸಿನಲ್ಲಿದೆ. ಈ ಬೆಲೆಯಲ್ಲಿ ಚಿನ್ನವನ್ನು ಅಡ ಇಟ್ಟು ಸುಲಭವಾಗಿ ಸಾಲ (Gold Loan) ಪಡೆಯಬಹುದು. ಈಗ ಪ್ರತೀ ಗ್ರಾಮ್ ಚಿನ್ನದ ಮೇಲೆ 4ರಿಂದ 5 ಸಾವಿರ ರೂವರೆಗೂ ಸಾಲ ಸಿಗುತ್ತದೆ. ಬಡ್ಡಿ ದರ ಕೂಡ ತಿಂಗಳಿಗೆ ಶೇ. 1 ಅನ್ನೂ ಮೀರಲ್ಲ. 10 ಗ್ರಾಮ್ ಚಿನ್ನ ಇದ್ದರೆ 50,000 ರೂವರೆಗೂ ಸಾಲ ಪಡೆಯಬಹುದು. ಒಂದಿಷ್ಟು ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಳ್ಳುವುದು ಬಿಟ್ಟರೆ ನಿಮಗೆ ಬೇರೆ ದಾಖಲೆಗಳನ್ನು ಒದಗಿಸುವ ಗೋಜಲು ಇರುವುದಿಲ್ಲ.
ಈಗ ಚಿನ್ನದ ಮೇಲಿನ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರ ಕೂಡ ಕಡಿಮೆ ಇದೆ. ಬಹುತೇಕ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಗೋಲ್ಡ್ ಲೋನ್ಗೆ ಶೇ. 12ಕ್ಕಿಂತ ಹೆಚ್ಚು ಬಡ್ಡಿ (ವಾರ್ಷಿಕ) ಪಡೆಯುವುದಿಲ್ಲ. ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಂತೂ ಗೋಲ್ಡ್ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.45 ಮತ್ತು ಶೇ. 8.65 ಮಾತ್ರ ಇದೆ.
ಇದನ್ನೂ ಓದಿ: ಬಚ್ಚಲು ಮನೆಯಲ್ಲಿ ಸುರಂಗ ಕೊರೆದು ಆಪಲ್ ಸ್ಟೋರ್‌ಗೆ ನುಗ್ಗಿದ ಕಳ್ಳರು 4.10 ಕೋಟಿ ರೂ ಮೌಲ್ಯದ 436 ಐಫೋನ್‌ಗಳನ್ನು ಕದ್ದರು!
ನೀವು ಒಂದು ವೇಳೆ ಚಿನ್ನ ಅಡವಿಟ್ಟು 5 ಲಕ್ಷ ರೂ ಮೊತ್ತದ ಸಾಲ ಪಡೆಯುವ ಉದ್ದೇಶ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಯಾವ್ಯಾವ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಎಷ್ಟು ಬಡ್ಡಿ ಇದೆ, 5 ಲಕ್ಷ ರೂ ಸಾಲಕ್ಕೆ 2 ವರ್ಷದ ಅವಧಿಗೆ ಎಷ್ಟು ಇಎಂಐ ಕಟ್ಟಬೇಕಾಗುತ್ತದೆ ಎಂಬ ವಿವರ ಈ ಕೆಳಕಂಡಂತಿದೆ:
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಯಾಕೆ ಮುಖ್ಯ? ಎಚ್ಚರ ವಹಿಸಬೇಕಾದ ಸಂಗತಿಗಳೇನು? ಇಲ್ಲಿದೆ ವಿವರ
Published On - 4:36 pm, Fri, 21 April 23