AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ

SIP with step-up: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಬಹಳ ಉಪಯುಕ್ತವಾದ ಹೂಡಿಕೆ ಯೋಜನೆ. ಅಲ್ಪ ಹೂಡಿಕೆಯಾದರೂ ನಿಯಮಿತವಾಗಿ ಮಾಡಿದರೆ ದೊಡ್ಡ ಮೊತ್ತ ನಿರ್ಮಾಣವಾಗುತ್ತದೆ ಎನ್ನುವುದಕ್ಕೆ ಎಸ್​ಐಪಿ ಒಳ್ಳೆಯ ನಿದರ್ಶನ. ಕೇವಲ 2,000 ರೂ ಎಸ್​ಐಪಿ ಜೊತೆಗೆ ಸ್ಟೆಪಪ್ ಟೆಕ್ನಿಕ್ ಉಪಯೋಗಿಸಿದರೆ ಏನು ಫಲ ಎನ್ನುವುದನ್ನು ಸಿಎ ನಿತಿನ್ ಕೌಶಿಕ್ ತೋರಿಸಿದ್ದಾರೆ.

ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ
ಎಸ್​ಐಪಿImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 13, 2026 | 3:27 PM

Share

ಸಂಬಳ ಇತ್ಯಾದಿ ನಿಯಮಿತ ಸಂಪಾದನೆ ಹೊಂದಿರುವ ಜನರಿಗೆ ಎಸ್​ಐಪಿ (SIP- Systematic Investment Plan) ಮೂಲಕ ಹೂಡಿಕೆ ಮಾಡುವುದು ಬಹಳ ಪ್ರಯೋಜನಕಾರಿ. ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದಾಗ ದೀರ್ಘಾವಧಿಯಲ್ಲಿ ಅಚ್ಚರಿ ಎನಿಸುವಷ್ಟು ದೊಡ್ಡ ಮೊತ್ತವಾಗಿ ಬೆಳೆದಿರುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳಿಂದ ಇದು ಸಾಧ್ಯ. ಎಸ್​ಐಪಿಗಳು ಎಲ್ಲಾ ಅಗತ್ಯಗಳಿಗೂ ಹೊಂದಿಕೆಯಾಗುವ ಹೂಡಿಕೆ ಯೋಜನೆಗಳಾಗಿವೆ. ಎಸ್​ಐಪಿ ಜೊತೆಗೆ ಸ್ಟೆಪ್ ತಂತ್ರ ಅನುಸರಿಸಿದರೆ ಪ್ರಯೋಜನ ಇನ್ನೂ ಹೆಚ್ಚಿನದ್ದಾಗಿರುತ್ತದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ ಅವರು ಎಸ್​ಐಪಿ ಹಾಗೂ ವಾರ್ಷಿಕ ಸ್ಟೆಪಪ್ ತಂತ್ರ ಮಾಡುವ ಮ್ಯಾಜಿಕ್ ಅನ್ನು ತೋರಿಸಿ, ಎಕ್ಸ್ ಪೋಸ್ಟ್ ಹಾಕಿದ್ದಾರೆ. ‘ಸಣ್ಣ ಮೊತ್ತದ ಎಸ್​ಐಪಿ ಇದ್ದರೆ ವಾರ್ಷಿಕ ಶೇ. 10 ಸ್ಟೆಪಪ್ ಏಕೈಕ ಪರಿಹಾರ ಎನಿಸುತ್ತದೆ’ ಎಂದು ತಿಳಿಸಿರುವ ಕೌಶಿಕ್ ಅವರು ಒಂದು ಉದಾಹರಣೆ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

25ರ ವಯಸ್ಸಿನಲ್ಲಿ ನೀವು 2,000 ರೂಗಳ ಮಾಸಿಕ ಎಸ್​ಐಪಿ ಹೂಡಿಕೆ ಆರಂಭಿಸುತ್ತೀರಿ. ಹೀಗೆ 55 ವರ್ಷ ವಯಸ್ಸಿನವರೆಗೆ, ಪ್ರತೀ ತಿಂಗಳು ಹೂಡಿಕೆ ಮಾಡಿದಾಗ, ಮತ್ತು ಆ ಫಂಡ್​ನಿಂದ ಶೇ. 12ರಷ್ಟು ರಿಟರ್ನ್ ಬಂದರೆ 2,000 ರೂಗಳ ಮಾಸಿಕ ಎಸ್​ಐಪಿಯ ಮೌಲ್ಯ 70.6 ಲಕ್ಷ ರೂ ಆಗುತ್ತದೆ. ಶೇ. 6ರ ಹಣದುಬ್ಬರ ಪರಿಗಣಿಸಿ, 30 ವರ್ಷಗಳ ನಂತರ ಈ 70 ಲಕ್ಷ ರೂನ ನಿಜಮೌಲ್ಯ ಇವತ್ತಿನ 12.3 ಲಕ್ಷ ರೂಗೆ ಸಮವಾಗಿರುತ್ತದೆ ಎನ್ನುವುದು ಕೌಶಿಕ್ ಅವರ ವಾದ.

ನಿತಿನ್ ಕೌಶಿಕ್ ಅವರ ಎಕ್ಸ್ ಪೋಸ್ಟ್

ಮ್ಯಾಜಿಕ್​ನಂತೆ ಕೆಲಸ ಮಾಡುತ್ತೆ ಸ್ಟೆಪಪ್ ಎಸ್​ಐಪಿ

ಎಸ್​ಐಪಿ ಹೂಡಿಕೆಯಲ್ಲಿ ಸ್ಟೆಪಪ್ ವಿಧಾನ ಜನಪ್ರಿಯವಾಗಿದೆ. ಸ್ಟೆಪಪ್ ಎಂದರೆ ಹೂಡಿಕೆ ಹೆಚ್ಚಿಸುವುದು. ಸಂಬಳದವರಾಗಿದ್ದರೆ ವರ್ಷ ವರ್ಷ ವೇತನ ಏರಿಕೆ ಆಗುವ ಅವಕಾಶ ಇರುತ್ತದೆ. ಹೀಗೆ ಆದಾಯ ಹೆಚ್ಚಿದಾಗ ಹೂಡಿಕೆಯನ್ನೂ ಹೆಚ್ಚಿಸುವುದು ಉತ್ತಮ. ಅದೇ ಸ್ಟೆಪಪ್.

ನಿಮ್ಮ ಮಾಸಿಕ 2,000 ರೂ ಎಸ್​ಐಪಿಗೆ ಪ್ರತೀ ವರ್ಷ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗಿ. 30 ವರ್ಷದಲ್ಲಿ ನಿಮ್ಮದು 2.17 ಕೋಟಿ ರೂ ಕಾರ್ಪಸ್ ಆಗಿರುತ್ತದೆ. ಅದೂ ಕೇವಲ 2,000 ರೂ ಮಾಸಿಕ ಹೂಡಿಕೆಯಿಂದಲೇ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಮಾಸಿಕ 10,000 ರೂ ಎಸ್​ಐಪಿ, 25 ವರ್ಷ ಸ್ಟೆಪಪ್​ನೊಂದಿಗೆ…

ಒಂದು ವೇಳೆ ನೀವು ತಿಂಗಳಿಗೆ 10,000 ರೂ ಹೂಡಿಕೆ ಮಾಡಬಲ್ಲಿರಾದರೆ, ಮತ್ತು ಪ್ರತೀ ವರ್ಷ ಶೇ. 10ರಷ್ಟು ಹೂಡಿಕೆ ಹೆಚ್ಚಿಸಬಲ್ಲಿರಾದರೆ, 25 ವರ್ಷದಲ್ಲಿ ನಿಮ್ಮ ಹೂಡಿಕೆ ಹೆಚ್ಚೂಕಡಿಮೆ 4 ಕೋಟಿ ರೂ ಮೊತ್ತ ನಿಮ್ಮೊಂದಿಗೆ ಇರುತ್ತದೆ. ಇದೇ ರೀತಿ ಹೂಡಿಕೆಯನ್ನು ಇನ್ನೂ ಐದು ವರ್ಷ ಮುಂದುವರಿಸಿಬಿಟ್ಟರೆ ನಿಮ್ಮ ಕಾರ್ಪಸ್ ಬರೋಬ್ಬರಿ 8 ಕೋಟಿ ರೂ ಆಗುತ್ತದೆ. ಇವೆಲ್ಲಾ ಎಣಿಕೆಗಳು ನಿಜವಾಗಬೇಕಾದರೆ ನೀವು ಹೂಡಿಕೆ ಮಾಡಿರುವ ಫಂಡ್ ವಾರ್ಷಿಕ ಶೇ. 12ರ ವೇಗದಲ್ಲಿ ಗಳಿಕೆ ಮಾಡಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Mon, 13 April 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್