ನವದೆಹಲಿ, ಡಿಸೆಂಬರ್ 13: ಚಿನ್ನದ ಬೆಲೆ ಆಧಾರಿತವಾದ ಹೂಡಿಕೆ ಸ್ಕೀಮ್ ಸಾವರೀನ್ ಗೋಲ್ಡ್ ಬಾಂಡ್ನ ಕೊನೆಯ ಎರಡು ಸರಣಿ (Sovereign Gold Bond Trance III and IV) ಬಿಡುಗಡೆಯ ದಿನಾಂಕ ಪ್ರಕಟಿಸಲಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಮೊದಲೆರಡು ಬಾಂಡ್ ಟ್ರಾಂಚ್ಗಳು ಮುಗಿದಿದ್ದು, ಇನ್ನೆರಡು ಟ್ರಾಂಚ್ಗಳು ಬಿಡುಗಡೆ ಆಗುತ್ತಿವೆ. ಮೂರನೇ ಟ್ರಾಂಚ್ ಬಾಂಡ್ಗಳು ಡಿಸೆಂಬರ್ 18ಕ್ಕೆ ಬಿಡುಗಡೆ ಆಗುತ್ತವೆ. ನಾಲ್ಕನೇ ಸರಣಿಯ ಬಾಂಡ್ಗಳು 2024ರ ಫೆಬ್ರುವರಿ 12ಕ್ಕೆ ಆರಂಭವಾಗುತ್ತವೆ.
ಮೂರನೇ ಸರಣಿಯ ಎಸ್ಜಿಬಿಗಳು ಡಿಸೆಂಬರ್ 18ರಿಂದ 22ರವರೆಗೆ ಸಾರ್ವಜನಿಕರಿಗೆ ಖರೀದಿಗೆ ಲಭ್ಯ ಇರುತ್ತದೆ. ಡಿಸೆಂಬರ್ 28ಕ್ಕೆ ಬಾಂಡ್ ವಿತರಣೆ ಆಗುತ್ತದೆ.
ಇನ್ನು, ನಾಲ್ಕನೇ ಸರಣಿ ಬಾಂಡ್ಗಳು 2024ರ ಫೆಬ್ರುವರಿ 12ರಿಂದ 16ರವರೆಗೂ ಪಬ್ಲಿಕ್ ಸಬ್ಸ್ಕ್ರಿಪ್ಷನ್ಗೆ ತೆರೆದಿರುತ್ತವೆ. ಫೆಬ್ರುವರಿ 21ಕ್ಕೆ ಬಾಂಡ್ ವಿತರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಶೇ. 8ರವರೆಗೂ ಬಡ್ಡಿ; ಈ ಮೂರು ಬ್ಯಾಂಕ್ಗಳ ಸ್ಪೆಷಲ್ ಠೇವಣಿ ಪ್ಲಾನ್ಗಳಿಗೆ ಡಿಸೆಂಬರ್ 31 ಡೆಡ್ಲೈನ್
ಇದು ಚಿನ್ನದ ಬೆಲೆ ಆಧಾರಿತ ಹೂಡಿಕೆ ಸ್ಕೀಮ್ ಆಗಿದೆ. ಇವತ್ತಿನ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯಲ್ಲಿ ಹಣ ಹೂಡಿಕೆ ಮಾಡಬಹುದು. 8 ವರ್ಷದ ಬಳಿಕ ಹೂಡಿಕೆ ಮೆಚ್ಯೂರ್ ಆಗುತ್ತದೆ. ಆಗ ಚಿನ್ನದ ಬೆಲೆ ಎಷ್ಟು ಇರುತ್ತದೋ ಅಷ್ಟು ರಿಟರ್ನ್ ಸಿಗುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ 1 ಗ್ರಾಮ್ ಇದ್ದು, ಒಬ್ಬ ವ್ಯಕ್ತಿ 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಆದರೆ, ಭೌತಿಕ ಚಿನ್ನವನ್ನು ರಿಟರ್ನ್ ಆಗಿ ಕೊಡಲಾಗುವುದಿಲ್ಲ. ಚಿನ್ನದ ಬೆಲೆಯ ಹಣ ಮಾತ್ರ ರಿಟರ್ನ್ ಆಗಿ ಸಿಗುವುದು.
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ರಿಯಾಯಿತಿ ಪಡೆಯಬಹುದು. ಜೊತೆಗೆ, ಹೂಡಿಕೆ ಮೊತ್ತಕ್ಕೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ಕೊಡಲಾಗುತ್ತದೆ. ಈ ಬಡ್ಡಿ ಹಣವನ್ನು ಆರು ತಿಂಗಳಿಗೊಮ್ಮೆ ಸದಸ್ಯನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ