AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Returns: ವಿಳಂಬವಾಗಿ ಐಟಿ ರಿಟರ್ನ್ಸ್ ಸಲ್ಲಿಸುವ ಕಾಲಾವಕಾಶವೂ ಮುಗಿಯುತ್ತಿದೆ; ಡಿಸೆಂಬರ್ 31ರ ಡೆಡ್​ಲೈನ್ ಮರೆಯದಿರಿ

Consequences of Not Filing Belated ITRs: ಇನ್ನೂ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸದೇ ಇರುವವರಿಗೆ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇದೆ. ಅಷ್ಟರೊಳಗೆ ಫೈಲ್ ಮಾಡದಿದ್ದರೆ ದಂಡ, ಬಡ್ಡಿ, ಶುಲ್ಕ ತೆರಬೇಕಾಗುತ್ತದೆ. 2022-23ರ ಹಣಕಾಸು ವರ್ಷದ ಐಟಿಆರ್ ಸಲ್ಲಿಕೆಗೆ 2023ರ ಜುಲೈ 31ಕ್ಕೆ ಡೆಡ್​ಲೈನ್ ಇತ್ತು. ಎಲ್ಲಾ ರೀತಿಯ ಐಟಿ ತೆರಿಗೆ ಪಾವತಿದಾರರಿಗೆ ಡಿಸೆಂಬರ್ 31ರವರೆಗೆ ಗಡುವು ಕೊಡಲಾಗಿದೆ. ಡಿಸೆಂಬರ್ 31ರ ಬಳಿಕ ರಿಟರ್ನ್ ಫೈಲ್ ಮಾಡುವವರಿಗೆ ಐದು ಸಾವಿರ ರೂ ದಂಡ, ಹೆಚ್ಚುವರಿ ಶುಲ್ಕ, ತೆರಿಗೆ ಬಾಕಿ ಮೊತ್ತಕ್ಕೆ ಬಡ್ಡಿ ಇತ್ಯಾದಿಯನ್ನು ವಿಧಿಸಲಾಗುತ್ತದೆ.

IT Returns: ವಿಳಂಬವಾಗಿ ಐಟಿ ರಿಟರ್ನ್ಸ್ ಸಲ್ಲಿಸುವ ಕಾಲಾವಕಾಶವೂ ಮುಗಿಯುತ್ತಿದೆ; ಡಿಸೆಂಬರ್ 31ರ ಡೆಡ್​ಲೈನ್ ಮರೆಯದಿರಿ
ಐಟಿ ರಿಟರ್ನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 13, 2023 | 12:29 PM

Share

ನವದೆಹಲಿ, ಡಿಸೆಂಬರ್ 13: ಕಳೆದ ಹಣಕಾಸು ವರ್ಷದ (2022-23ರದ್ದು) ಆದಾಯ ತೆರಿಗೆ ರಿಟರ್ನ್ಸ್ ಅನ್ನು (Income tax return) ಇನ್ನೂ ಸಲ್ಲಿಸದೇ ಇರುವವರಿಗೆ ಕೊನೆಯ ಅವಕಾಶ ಸಮೀಪಿಸುತ್ತಿದೆ. 2023ರ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇದೆ. ಈ ಅಂತಿಮ ವಾಯಿದೆಯೊಳಗೆ (deadline) ಐಟಿಆರ್ ಸಲ್ಲಿಸದೇ ಹೋದರೆ ಹೆಚ್ಚಿನ ಮೊತ್ತದ ದಂಡ, ಶುಲ್ಕ, ಬಡ್ಡಿ ಇತ್ಯಾದಿಗಳನ್ನು ತೆರಬೇಕಾಗುತ್ತದೆ.

ಐಟಿ ರಿಟರ್ನ್ ಫೈಲ್ ಮಾಡಲು ಜುಲೈ 31ಕ್ಕೆ ಡೆಡ್​ಲೈನ್ ಇತ್ತು. ಅದಾದ ಬಳಿಕ ಡಿಸೆಂಬರ್ 31ರವರೆಗೂ ವಿಳಂಬವಾಗಿ ರಿಟರ್ನ್ ಫೈಲ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಐಟಿ ಪಾವತಿದಾರರಿಗೂ ಇದು ಡೆಡ್​ಲೈನ್ ಆಗಿದೆ.

ಡೆಡ್​ಲೈನ್ ಮೀರಿದರೆ 5,000 ರು ದಂಡ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಎಫ್ ಪ್ರಕಾರ ಅಂತಿಮ ವಾಯಿದೆಯೊಳಗೆ ರಿಟರ್ನ್ಸ್ ಫೈಲ್ ಮಾಡದೇ ಹೋದರೆ ಲೇಟ್ ಫೈಲಿಂಗ್ ಶುಲ್ಕ ಪಾವತಿಸಬೇಕು. ಹಾಗೆಯೇ, 5,000 ರೂನಷ್ಟು ದಂಡ ತೆರಬೇಕಾಗುತ್ತದೆ. ಐದು ಲಕ್ಷ ರೂ ಒಳಗೆ ವಾರ್ಷಿಕ ಆದಾಯ ಹೊಂದಿರುವವರಿಗಾದರೆ ದಂಡದ ಮೊತ್ತ 1,000 ರೂ ಇರುತ್ತದೆ. ಉಳಿದವರು ಐದು ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: ಆಧಾರ್ ಡೆಡ್​ಲೈನ್ ವಿಸ್ತರಣೆ: 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ದಾಖಲೆ ಅಪ್​ಡೇಟ್ ಮಾಡಲು ಅವಕಾಶ

ತೆರಿಗೆ ಬಾಕಿ ಮೊತ್ತಕ್ಕೆ ಶೇ. 12ರ ದರದಲ್ಲಿ ಬಡ್ಡಿ ಕಟ್ಟಬೇಕು

ಡಿಸೆಂಬರ್ 31ರೊಳಗೆ ಐಟಿ ರಿಟರ್ನ್ಸ್ ಫೈಲ್ ಮಾಡದೇ ಇರುವವರಿಗೆ ಐಟಿ ಕಾಯ್ದೆ ಸೆಕ್ಷನ್ 234ಎ ಅಡಿಯಲ್ಲಿ ಬಡ್ಡಿ ಕಟ್ಟಬೇಕಾಗುತ್ತದೆ. ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಹಣಕ್ಕೆ ಪ್ರತೀ ತಿಂಗಳು ಶೇ. 1ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.

ಇನ್ನೊಂದು ಮುಖ್ಯ ಸಂಗತಿ ಎಂದರೆ, ಐಟಿಆರ್ ಫೈಲ್ ಮಾಡದೇ ಹೋದರೆ ಈಗಿನ ಪ್ರಸಕ್ತ ಅಸೆಸ್ಮೆಂಟ್ ವರ್ಷದ ನಷ್ಟವನ್ನು ಮುಂದಿನ ವರ್ಷದಕ್ಕೆ ವರ್ಗಾಯಿಸಲು ಆಗುವುದಿಲ್ಲ. ತೆರಿಗೆ ಮೊತ್ತದ ಶೇ. 50ರಿಂದ ಶೇ. 200ರವರೆಗಿನ ಹಣವನ್ನು ದಂಡವಾಗಿ ಹೇರಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?