Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, 3ನೇ ಮತ್ತು 4ನೇ ಸರಣಿ ಬಾಂಡ್​ಗಳ ಬಿಡುಗಡೆ ದಿನಾಂಕ ಪ್ರಕಟ

SGB Tranche III Release On December 18-22: ಈ ಹಣಕಾಸು ವರ್ಷದಲ್ಲಿ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನ ಕೊನೆಯ ಎರಡು ಸರಣಿಗಳು ಡಿಸೆಂಬರ್ 18ರಿಂದ 22, ಹಾಗೂ ಫೆಬ್ರುವರಿ 12ರಿಂದ 16ರವರೆಗೆ ಲಭ್ಯ ಇವೆ. ಕನಿಷ್ಠ 1 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ 4 ಕಿಲೋವರೆಗೂ ಚಿನ್ನಕ್ಕೆ ಹಣ ಹಾಕಬಹುದು. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ 8 ವರ್ಷಕ್ಕೆ ಮೆಚ್ಯೂರ್ ಆಗುತ್ತವೆ. ಕೊನೆಯಲ್ಲಿ ಚಿನ್ನದ ಮಾರುಕಟ್ಟೆ ಬೆಲೆಯಷ್ಟು ಹಣ ರಿಟರ್ನ್ ಆಗಿ ಸಿಗುತ್ತದೆ.

Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, 3ನೇ ಮತ್ತು 4ನೇ ಸರಣಿ ಬಾಂಡ್​ಗಳ ಬಿಡುಗಡೆ ದಿನಾಂಕ ಪ್ರಕಟ
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 13, 2023 | 3:19 PM

ನವದೆಹಲಿ, ಡಿಸೆಂಬರ್ 13: ಚಿನ್ನದ ಬೆಲೆ ಆಧಾರಿತವಾದ ಹೂಡಿಕೆ ಸ್ಕೀಮ್ ಸಾವರೀನ್ ಗೋಲ್ಡ್ ಬಾಂಡ್​ನ ಕೊನೆಯ ಎರಡು ಸರಣಿ (Sovereign Gold Bond Trance III and IV) ಬಿಡುಗಡೆಯ ದಿನಾಂಕ ಪ್ರಕಟಿಸಲಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಮೊದಲೆರಡು ಬಾಂಡ್ ಟ್ರಾಂಚ್​ಗಳು ಮುಗಿದಿದ್ದು, ಇನ್ನೆರಡು ಟ್ರಾಂಚ್​ಗಳು ಬಿಡುಗಡೆ ಆಗುತ್ತಿವೆ. ಮೂರನೇ ಟ್ರಾಂಚ್ ಬಾಂಡ್​ಗಳು ಡಿಸೆಂಬರ್ 18ಕ್ಕೆ ಬಿಡುಗಡೆ ಆಗುತ್ತವೆ. ನಾಲ್ಕನೇ ಸರಣಿಯ ಬಾಂಡ್​ಗಳು 2024ರ ಫೆಬ್ರುವರಿ 12ಕ್ಕೆ ಆರಂಭವಾಗುತ್ತವೆ.

ಮೂರನೇ ಸರಣಿಯ ಎಸ್​ಜಿಬಿಗಳು ಡಿಸೆಂಬರ್ 18ರಿಂದ 22ರವರೆಗೆ ಸಾರ್ವಜನಿಕರಿಗೆ ಖರೀದಿಗೆ ಲಭ್ಯ ಇರುತ್ತದೆ. ಡಿಸೆಂಬರ್ 28ಕ್ಕೆ ಬಾಂಡ್ ವಿತರಣೆ ಆಗುತ್ತದೆ.

ಇನ್ನು, ನಾಲ್ಕನೇ ಸರಣಿ ಬಾಂಡ್​ಗಳು 2024ರ ಫೆಬ್ರುವರಿ 12ರಿಂದ 16ರವರೆಗೂ ಪಬ್ಲಿಕ್ ಸಬ್ಸ್​ಕ್ರಿಪ್ಷನ್​ಗೆ ತೆರೆದಿರುತ್ತವೆ. ಫೆಬ್ರುವರಿ 21ಕ್ಕೆ ಬಾಂಡ್ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಶೇ. 8ರವರೆಗೂ ಬಡ್ಡಿ; ಈ ಮೂರು ಬ್ಯಾಂಕ್​ಗಳ ಸ್ಪೆಷಲ್ ಠೇವಣಿ ಪ್ಲಾನ್​ಗಳಿಗೆ ಡಿಸೆಂಬರ್ 31 ಡೆಡ್​ಲೈನ್

ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?

ಇದು ಚಿನ್ನದ ಬೆಲೆ ಆಧಾರಿತ ಹೂಡಿಕೆ ಸ್ಕೀಮ್ ಆಗಿದೆ. ಇವತ್ತಿನ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯಲ್ಲಿ ಹಣ ಹೂಡಿಕೆ ಮಾಡಬಹುದು. 8 ವರ್ಷದ ಬಳಿಕ ಹೂಡಿಕೆ ಮೆಚ್ಯೂರ್ ಆಗುತ್ತದೆ. ಆಗ ಚಿನ್ನದ ಬೆಲೆ ಎಷ್ಟು ಇರುತ್ತದೋ ಅಷ್ಟು ರಿಟರ್ನ್ ಸಿಗುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ 1 ಗ್ರಾಮ್ ಇದ್ದು, ಒಬ್ಬ ವ್ಯಕ್ತಿ 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಆದರೆ, ಭೌತಿಕ ಚಿನ್ನವನ್ನು ರಿಟರ್ನ್ ಆಗಿ ಕೊಡಲಾಗುವುದಿಲ್ಲ. ಚಿನ್ನದ ಬೆಲೆಯ ಹಣ ಮಾತ್ರ ರಿಟರ್ನ್ ಆಗಿ ಸಿಗುವುದು.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ರಿಯಾಯಿತಿ ಪಡೆಯಬಹುದು. ಜೊತೆಗೆ, ಹೂಡಿಕೆ ಮೊತ್ತಕ್ಕೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ಕೊಡಲಾಗುತ್ತದೆ. ಈ ಬಡ್ಡಿ ಹಣವನ್ನು ಆರು ತಿಂಗಳಿಗೊಮ್ಮೆ ಸದಸ್ಯನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ