ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

|

Updated on: Nov 01, 2023 | 12:40 PM

Sukanya Samriddhi Yojana: ಹೆಣ್ಮಕ್ಕಳಿಗೆಂದು ಸರ್ಕಾರ ರೂಪಿಸಿದ ಸ್ಕೀಮ್ ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆಯಲ್ಲಿ ವಾರ್ಷಿಕ ಸೇ. 7.6 ಬಡ್ಡಿ ನಿಗದಿ ಮಾಡಿದೆ. 21 ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ 15 ವರ್ಷದವರೆಗೂ ಹೂಡಿಕೆ ಮಾಡಬಹುದು. ಇದರಲ್ಲಿ ಕನಿಷ್ಠ ಹೂಡಿಕೆ ಒಂದು ವರ್ಷಕ್ಕೆ 250 ರೂ ಇದೆ. ಗರಿಷ್ಠ 1.5 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.

ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us on

ಸರ್ಕಾರದಿಂದ ನಡೆಸಲಾಗುವ ಹಲವು ಸ್ಕೀಮ್​ಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಒಂದು. ಹೆಣ್ಮಕ್ಕಳಿಗೆಂದು ಸರ್ಕಾರ ರೂಪಿಸಿದ ಸ್ಕೀಮ್ ಇದು. ಹೆಣ್ಮಗುವಿನ ಉನ್ನತ ವ್ಯಾಸಂಗ, ಮದುವೆಗೆ ಅನುಕೂಲವಾಗಲೆಂಬುದು ಈ ಯೋಜನೆಯ ಮೂಲ ಆಶಯ. ಮಗಳ ಉಜ್ವಲ ಭವಿಷ್ಯಕ್ಕಾಗಿಯೂ ಈ ಸ್ಕೀಮ್​ನಲ್ಲಿ ಹಣ ತೊಡಗಿಸಬಹುದು. ಈಗ ಹುಟ್ಟಿದ ಹಸುಗೂಸಿನಿಂದ ಹಿಡಿದು 10 ವರ್ಷದೊಳಗಿನ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಈ ಯೋಜನೆ ಆರಂಭಿಸಬಹುದು.

ಸರ್ಕಾರ ಈ ಯೋಜನೆಯಲ್ಲಿ ವಾರ್ಷಿಕ ಸೇ. 7.6 ಬಡ್ಡಿ ನಿಗದಿ ಮಾಡಿದೆ. 21 ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ 15 ವರ್ಷದವರೆಗೂ ಹೂಡಿಕೆ ಮಾಡಬಹುದು. ಇದರಲ್ಲಿ ಕನಿಷ್ಠ ಹೂಡಿಕೆ ಒಂದು ವರ್ಷಕ್ಕೆ 250 ರೂ ಇದೆ. ಗರಿಷ್ಠ 1.5 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.

ನಿಮ್ಮ ಮಗಳ ವಯಸ್ಸು 10 ವರ್ಷ ಇದ್ದಾಗ ನೀವು ಈ ಸ್ಕೀಮ್ ಪಡೆದರೆ ಆಕೆಯ ವಯಸ್ಸು 31 ವರ್ಷ ಆಗುವವರೆಗೂ ಕಾಯಬೇಕಾಗುತ್ತದೆ. ಸಾಧ್ಯವಾದಷ್ಟೂ ಬೇಗ ಈ ಯೋಜನೆ ಆರಂಭಿಸುವುದು ಉತ್ತಮ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಕ್ಲೈಮ್ ತಿರಸ್ಕೃತಗೊಳ್ಳದಂತೆ ಎಚ್ಚರ ವಹಿಸುವುದು ಹೇಗೆ? ತಜ್ಞರ ಈ ಸಲಹೆ ನೋಡಿ

1,000 ರೂನಿಂದ 5,000 ರೂವರೆಗೆ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗುತ್ತದೆ?

ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಂದು ವರ್ಷಕ್ಕೆ 1,50,000 ರೂವರೆಗೆ ಹೂಡಿಕೆ ಮಾಡುವ ಅವಕಾಶ ಇದೆ. ಅಂದರೆ ತಿಂಗಳಿಗೆ 12,500 ರೂ ಹೂಡಿಕೆ ಮಾಡಬಹುದು. ಇಷ್ಟು ಮೊತ್ತವನ್ನು ನೀವು ಹೂಡಿಕೆ ಮಾಡುತ್ತಾ ಹೋದರೆ ಒಟ್ಟು ಹೂಡಿಕೆ ಮತ್ತ 22.5 ಲಕ್ಷ ರೂ ಆಗುತ್ತದೆ. ಮೆಚ್ಯೂರಿಟಿ ಆದ ಬಳಿಕ ನಿಮ್ಮ ಕೈಗೆ ಸಿಗುವ ಮೊತ್ತ 67.34 ಲಕ್ಷ ರೂ.

ತಿಂಗಳಿಗೆ 1,000 ರೂ ಹೂಡಿಕೆ ಮಾಡಿದರೆ?

ನೀವು ತಿಂಗಳಿಗೆ 1,000 ರೂನಂತೆ ಹಣ ಉಳಿಸಿದರೆ, ವರ್ಷಕ್ಕೆ 12,000 ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಹಾಕಬಹುದು. ಅಷ್ಟು ಹೂಡಿಕೆ ಮಾಡಿದರೆ 15 ವರ್ಷದಲ್ಲಿ ಒಟ್ಟು ಮೊತ್ತ 1,80,000 ರೂ ಆಗುತ್ತದೆ. ಮೆಚ್ಯೂರಿಟಿ ಬಳಿಕ ಸಿಗುವ ರಿಟರ್ನ್ 5.38 ಲಕ್ಷ ರೂ ಆಗುತ್ತದೆ.

ಇದನ್ನೂ ಓದಿ: FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ

ತಿಂಗಳಿಗೆ 2,000 ರೂ ಹೂಡಿಕೆ ಮಾಡಿದರೆ?

ನೀವು ತಿಂಗಳಿಗೆ 2,000 ರೂನಂತೆ ವರ್ಷಕ್ಕೆ 24,000 ರೂ ಹಣವನ್ನು ಎಸ್​ಎಸ್​ವೈಯಲ್ಲಿ ವಿನಿಯೋಗಿಸಿ. ಮೆಚ್ಯೂರಿಟಿ ಬಳಿಕ ನಿಮ್ಮ ಹಣ 10.77 ಲಕ್ಷ ರೂ ಆಗುತ್ತದೆ.

ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ?

ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ತಿಂಗಳಿಗೆ 5,000 ರೂನಂತೆ ವರ್ಷಕ್ಕೆ 60,000 ರೂ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 9 ಲಕ್ಷ ರೂ ಆಗುತ್ತದೆ. ಮೆಚ್ಯೂರಿಟಿ ಬಳಿಕ ನಿಮಗೆ ಸಿಗುವ ರಿಟರ್ನ್ 27 ಲಕ್ಷ ರೂ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ