FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ

How To Achieve Early Retirement: ಇಂದಿನ ದಿನಮಾನದಲ್ಲಿ ಬಹಳ ಜನರು ಹೆಚ್ಚು ದಿನ ಕೆಲಸ ಮಾಡಲು ಬಯಸುವುದಿಲ್ಲ. ಆದರೆ ಕೆಲಸವಿಲ್ಲದಿದ್ದರೆ ಹಣ ಎಲ್ಲಿಂದ ಬರುತ್ತದೆ ಎಂದು ಯೋಚಿಸಬಹುದು. ನೀವು ಬೇಗನೇ ನಿವೃತ್ತರಾಗಿ ಆರಾಮವಾಗಿ ಇರಬೇಕೆಂದು ಭಾವಿಸುವುದಾದರೆ ಆ ಕನಸು ಸಾಕಾರಗೊಳಿಸಲು ಮಾರ್ಗಗಳಿವೆ. ಅದರಲ್ಲಿ ಫೈರ್ ಮಾಡಲ್ ಒಂದು. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ
ಹಣಕಾಸು ಸ್ವಾತಂತ್ರ್ಯ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Oct 30, 2023 | 6:04 PM

ಆರವತ್ತು ವರ್ಷ ವಯಸ್ಸಿನವರೆಗೆ ಗಾಣದ ಎತ್ತುಗಳಂತೆ ದುಡಿದು, ನಂತರ ದೈಹಿಕ ಶಕ್ತಿ ದುರ್ಬಲಗೊಂಡ ಬಳಿಕ ನಿವೃತ್ತರಾಗಿ ಅದ್ಯಾವ ಜೀವನ ಸಂತೋಷ ಅನುಭವಿಸುತ್ತೀರಿ. ಅದರ ಬದಲು ಬೇಗನೇ ರಿಟೈರ್ ಆಗಿ ನಿಮ್ಮಿಷ್ಟದ ಜೀವನ ಅನುಭವಿಸಿ ಎಂದು ವಾದಿಸುವವರನ್ನು ನೀವು ನೋಡಿರಬಹುದು. ಇವರ ಮಾತುಗಳು ಈಗೀಗ ಟ್ರೆಂಡ್ ಆಗುತ್ತಿವೆ. ಮನಸಿಗೆ ಖುಷಿಕೊಡುವ ಸಂಗತಿಗಳನ್ನು ಬದಿಗೊತ್ತಿ ಇಡೀ ಜೀವನ ಕೆಲಸ ಮಾಡಬೇಕಿಲ್ಲ. ಬೇಗನೇ ಹೊಟ್ಟೆಪಾಡಿನ ದುಡಿಮೆ ನಿಲ್ಲಿಸಿ ನಮ್ಮ ಆತ್ಮಸಂತೋಷಕ್ಕೆ ಕೆಲಸ ಮಾಡಬೇಕು. 50 ವರ್ಷದೊಳಗೆ ಅಥವಾ 40 ವರ್ಷದೊಳಗೆ ನಿವೃತ್ತಿ ಹೊಂದಬೇಕು ಎಂದು ಆಲೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಚಿಂತನೆಯಲ್ಲಿರುವವರಿಗೆಂದು ‘FIRE ಮಾಡೆಲ್’ ಇದೆ. FIRE ಎಂದರೆ ಫೈನಾನ್ಷಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ (FIRE- Financial Independence Retire Early) ಎಂದು. ಅಂದರೆ, ಹಣಕಾಸು ಸ್ವಾವಲಂಬನೆ ಮತ್ತು ಶೀಘ್ರ ನಿವೃತ್ತಿ ಎಂದಾಗುತ್ತದೆ. ಈ ಫಯರ್ ಸೂತ್ರವನ್ನು ಅಳವಡಿಸಿಕೊಂಡರೆ ನೀವು ನಿವೃತ್ತಿಗಾಗಿ ಕಾಯಬೇಕಾಗಿಲ್ಲ. ನೀವು ಇನ್ನೂ ಕೆಲಸದಲ್ಲಿರುವಾಗಲೇ ಈ ಸೂತ್ರದೊಂದಿಗೆ ನಿಮ್ಮ ನಿವೃತ್ತಿಯನ್ನು ಸರಿಯಾಗಿ ಯೋಜಿಸಬಹುದು. ಆದ್ದರಿಂದ ನೀವು ವೃದ್ಧಾಪ್ಯದವರೆಗೂ ಕೆಲಸ ಮಾಡಬೇಕಾಗಿಲ್ಲ. ಈ ಮಾದರಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ವೃದ್ಧಾಪ್ಯದ ಅಸಹಾಯಕತೆಯನ್ನು ಹೇಗೆ ಹೋಗಲಾಡಿಸಬಹುದು ಎಂಬುದನ್ನು ಇಲ್ಲಿ ನೋಡಬಹುದು.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, FIRE ಮಾದರಿಯು 1992 ರಲ್ಲಿ ವಿಕ್ಕಿ ರಾಬಿನ್ ಮತ್ತು ಜೋ ಡೊಮಿಂಗ್ಯೂಜ್ ಅವರ ‘ಯುವರ್ ಮನಿ ಆರ್ ಯುವರ್ ಲೈಫ್’ ಪುಸ್ತಕದೊಂದಿಗೆ ಪ್ರಾರಂಭವಾಯಿತು. ಈ ಸೂತ್ರ ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ನಿವೃತ್ತಿ ವಯಸ್ಸನ್ನು ನೀವೇ ನಿರ್ಧರಿಸಬಹುದು.

ಫೈರ್ ಸಂಖ್ಯೆಯನ್ನು ಈ ರೀತಿ ಲೆಕ್ಕ ಹಾಕಿ

ಮೊದಲು ನೀವು ನಿಮ್ಮ FIRE ಸಂಖ್ಯೆಯನ್ನು ನಿರ್ಧರಿಸಬೇಕು. ಅಂದರೆ, ಯಾವ ವಯಸ್ಸಿನಲ್ಲಿ ನಿಮ್ಮ ಕೆಲಸದಿಂದ ನೀವು ವಿಮುಕ್ತರಾಗಲು ಬಯಸುತ್ತೀರಿ? ನಿಮ್ಮ ಪ್ರಸ್ತುತ ವೆಚ್ಚಗಳು, ಆದಾಯ ಮತ್ತು ಉಳಿತಾಯದ ಆಧಾರದ ಮೇಲೆ ನೀವು 60 ನೇ ವಯಸ್ಸಿನಲ್ಲಿ ನಿವೃತ್ತರಾಗಲು ಬಯಸುತ್ತೀರಾ ಅಥವಾ ಅದಕ್ಕೂ ಮೊದಲೇ ನೀವು ಕೆಲಸ ಬಿಡಲು ಬಯಸುತ್ತೀರಾ ಎಂಬುದನ್ನು ನೀವು ಲೆಕ್ಕ ಹಾಕಬಹುದು.

ಇದನ್ನೂ ಓದಿ: World Savings Day: ವಿಶ್ವ ಉಳಿತಾಯ ದಿನ ಇಂದು; ನಾಳಿನ ಜೀವನೋಪಾಯಕ್ಕೆ ಇಂದೇ ಆಗಬೇಕು ಹಣ ಉಳಿತಾಯ

ಫೈರ್ ಸೂತ್ರ 1: ವೆಚ್ಚ ಕಡಿಮೆ

ಫೈರ್ ಮಾಡಲ್ ಪ್ರಕಾರ ನಿಮ್ಮ ಪ್ರಸ್ತುತ ವೆಚ್ಚಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕಾಗುತ್ತದೆ. ದೊಡ್ಡ ಮನೆಯ ಬದಲು ಸಣ್ಣ ಮನೆ ಖರೀದಿಸುವುದು, ದುಬಾರಿ ಸಾರಿಗೆ ಬದಲು ಅಗ್ಗದ ಸಾರಿಗೆ, ಹೀಗೆ ನಾನಾ ರೀತಿಯಲ್ಲಿ ಅನಗತ್ಯ ವೆಚ್ಚಗಳನ್ನು ಮುಲಾಜಿಲ್ಲದೇ ಕತ್ತರಿಸಬೇಕು. ಆಗ ಮಾತ್ರ ಹಣ ಉಳಿತಾಯ ಸಾಧ್ಯ. ಸಾಧ್ಯವಾದಷ್ಟೂ ನಿಮ್ಮ ಜೀವನದಲ್ಲಿ ಸರಳತೆ ಇರಲಿ. ಇದರಿಂದ ಮಿತವ್ಯಯದ ಗುರಿ ಈಡೇರಿಸುವುದು ಸಾಧ್ಯ.

ಫೈರ್ ಸೂತ್ರ 2: ಆದಾಯ ಹೆಚ್ಚಿಸಿ

ನಿಮ್ಮ ಆದಾಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಇದಕ್ಕಾಗಿ ನೀವು ಹೆಚ್ಚಿನ ಸಂಬಳದ ಕೆಲಸದತ್ತ ಗಮನ ಹರಿಸಬೇಕು. ಉದ್ಯೋಗದ ಹೊರತಾಗಿ, ಇತರ ಆದಾಯದ ಕಡೆಗೆ ಗಮನ ಹರಿಸಬೇಕು. ಇದಕ್ಕಾಗಿ ನೀವು ಲಾಭಾಂಶವನ್ನು (ಡಿವಿಡೆಂಡ್) ನೀಡುವ ಷೇರುಗಳ ಮೇಲೆ ಹಣ ಕೇಂದ್ರೀಕರಿಸಬೇಕು. ವಾಸ್ತವವಾಗಿ, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶವನ್ನು ನೀಡುವ ಅನೇಕ ಕಂಪನಿಗಳಿವೆ. ನೀವು ಹೆಚ್ಚಿನ ಲಾಭಾಂಶ ನೀಡುವ ಷೇರುಗಳನ್ನು ಹೊಂದಿದರೆ ಕಾಲಕಾಲಕ್ಕೆ ಸ್ಥಿರ ಮೊತ್ತವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಪತ್ತೂ ಹೆಚ್ಚುತ್ತಲೇ ಇರುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?

ಫೈರ್ ಸೂತ್ರ 3: ಗರಿಷ್ಠ ಉಳಿತಾಯ

ನೀವು ಬೇಗನೆ ಕೆಲಸದ ಬಂದದಿಂದ ಮುಕ್ತಿ ಹೊಂದಲು ಬಯಸಿದರೆ, ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಬೇಕು. FIRE ಮಾದರಿಯ ಲೆಕ್ಕಾಚಾರದ ಪ್ರಕಾರ, ನಿಮ್ಮ ಆದಾಯದ 50 ಪ್ರತಿಶತವನ್ನು ನೀವು ಉಳಿಸಬೇಕು. ಆಗ ಮಾತ್ರ ನೀವು ಈ ಗುರಿಯನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗುತ್ತದೆ. ನೀವು ಈಗ 30 ವರ್ಷ ವಯಸ್ಸಿನವರಾಗಿದ್ದೀರಿ ಮತ್ತು ನೀವು 50 ರ ಹೊತ್ತಿಗೆ ಈ ಗುರಿಯನ್ನು ಸಾಧಿಸಲು ಬಯಸುತ್ತೀರಿ ಎಂದು ಭಾವಿಸೋಣ. ನಂತರ ನೀವು ನಿಮ್ಮ ಆದಾಯದ ಅರ್ಧದಷ್ಟು ಉಳಿಸಬೇಕಾಗುತ್ತದೆ. ಮತ್ತು ಈ ಮೊತ್ತವನ್ನು ಹಣ ವೇಗವಾಗಿ ಬೆಳೆಯುವಂತಹ ಯಂತ್ರಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು