ಹಣದುಬ್ಬರ ಏರಿಕೆ ತಡೆಯುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮೇ ತಿಂಗಳ ನಂತರ ಸೆಪ್ಟೆಂಬರ್ 30ರ ಅವಧಿಯಲ್ಲಿ ರೆಪೊ ದರವನ್ನು (Repo Rate) 190 ಮೂಲಾಂಶದಷ್ಟು ಹೆಚ್ಚಿಸಿದೆ. ಪರಿಣಾಮವಾಗಿ ವಿವಿಧ ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿ ದರವನ್ನೂ (Interest Rate) ಹೆಚ್ಚಿಸಿವೆ. ಇದರಿಂದಾಗಿ ಗೃಹ ಸಾಲದ ಮೇಲಿನ ಎಂಸಿಎಲ್‌ಆರ್ ಅಥವಾ ಕನಿಷ್ಠ ಬಡ್ಡಿ ದರಗಳೂ ಹೆಚ್ಚಾಗಿವೆ. ರೆಪೊ ದರದೊಂದಿಗೆ ಸಂಯೋಜನೆಗೊಂಡಿರುವ ಸಾಲದ ದರವೂ (Repo Rate Linked Lending Rate) ಹೆಚ್ಚಾಗಿದೆ. ಈ ಮಾದರಿಯ ಸಾಲದ ದರವು ಆರ್ಬಿಐ ರೆಪೊ ದರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಆರ್ಆರ್ಎಲ್ಎಲ್ಆರ್ನಲ್ಲಿ ರೆಪೊ ದರ, ಬ್ಯಾಂಕ್ ವಿಧಿಸುವ ಮಾರ್ಜಿನ್ ಶುಲ್ಕ ಸೇರಿಸಿ ಬಡ್ಡಿ ದರ ಲೆಕ್ಕ ಹಾಕಲಾಗುತ್ತದೆ. ಇಂಥ ಬಡ್ಡಿದರಗಳಲ್ಲಿ ಸಾಲಗಾರರಿಗೆ ಹೆಚ್ಚು ಏಕರೂಪತೆ ಮತ್ತು ಪಾರದರ್ಶಕತೆ ದೊರೆಯುತ್ತದೆ.
ಗೃಹ ಸಾಲದ ಅಸಲು ಮೊತ್ತವನ್ನು ಬಳಸಿಕೊಂಡದ್ದಕ್ಕೆ ಸಾಲಗಾರನಿಗೆ ಬ್ಯಾಂಕ್ಗಳು ವಿಧಿಸುವ ಶುಲ್ಕವೇ ಬಡ್ಡಿ ದರ. ಗೃಹ ಸಾಲದ ಬಡ್ಡಿ ದರಕ್ಕೆ ಅನುಗುಣವಾಗಿ ತಿಂಗಳ ಇಎಂಐ ಮೊತ್ತವೂ ನಿರ್ಧರಿಸಲ್ಪಡುತ್ತದೆ.
ಈ ಐದು ಬ್ಯಾಂಕ್ಗಳಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿ
ಇದನ್ನೂ ಓದಿ: ITR Refund Status: ಐಟಿಆರ್ ರಿಫಂಡ್ ಸ್ಥಿತಿಗತಿ ಆನ್ಲೈನ್ನಲ್ಲಿ ಪರಿಶೀಲಿಸಲು ಹೀಗೆ ಮಾಡಿ
ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು…
ಗೃಹ ಸಾಲದ ಬಡ್ಡಿ ದರ ನಿರ್ಧರಿಸುವಲ್ಲಿ ಹಲವು ಅಂಶಗಳು ಪರಿಣಾಮ ಬೀರುತ್ತವೆ. ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಬಡ್ಡಿ ದರದ ವಿಧಾನ, ಬೆಂಚ್ಮಾರ್ಕ್ ಲೆಂಡಿಂಗ್ ರೇಟ್, ಸಾಲದ ಮೌಲ್ಯದ ಅನುಪಾತ, ಸಾಲಗಾರನ ಹಣಕಾಸಿನ ವಿವರ, ಮರುಪಾವತಿ ಅವಧಿ, ಆಸ್ತಿ ಇರುವ ಸ್ಥಳ ಹಾಗೂ ಸಾಲ ನೀಡುವ ಬ್ಯಾಂಕ್ ಈ ಎಲ್ಲ ಅಂಶಗಳು ಬಡ್ಡಿ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ