ಬಹಳ ತುರ್ತಾಗಿ ಸಣ್ಣ ಸಾಲ ಬೇಕೆಂದರೆ ಜನರಿಗೆ ಇರುವ ಪ್ರಮುಖ ಆಯ್ಕೆಗಳಲ್ಲಿ ಪರ್ಸನಲ್ ಲೋನ್ (Personal Loan) ಒಂದು. ನಿಮ್ಮ ಬಳಿಕ ಒತ್ತೆ ಇಡಲು ಚಿನ್ನ ಇಲ್ಲದಿದ್ದರೆ ಪರ್ಸನಲ್ ಲೋನ್ ಅನಿವಾರ್ಯ ಆಯ್ಕೆ ಆಗಿರುತ್ತದೆ. ಗೃಹ ಸಾಲ, ಒಡವೆ ಸಾಲ ಇತ್ಯಾದಿ ಅಡಮಾನ ಸಾಲಗಳಿಗೆ (mortgage or secured loan) ಹೋಲಿಸಿದರೆ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಹೆಚ್ಚಿರುತ್ತದೆ. ಪರ್ಸನಲ್ ಲೋನ್ ಅನ್ನು ಅಡಮಾನ ಇಲ್ಲದೆಯೇ ನೀಡುವುದರಿಂದ ಬಡ್ಡಿದರ ತುಸು ಹೆಚ್ಚಿರುತ್ತದೆ. ಯಾವ್ಯಾವ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ಗೆ ಬಡ್ಡಿದರ ಕಡಿಮೆ ಇದೆ, ಈ ಸಾಲಕ್ಕೆ ಯಾವ ದಾಖಲೆಗಳು ಬೇಕು, ಕನಿಷ್ಠ ಬಡ್ಡಿಯಲ್ಲಿ ಸಾಲ ಪಡೆಯಲು ಏನು ಮಾಡಬೇಕು ಎಂಬ ವಿವರ ಮುಂದಿದೆ.
ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನ ಲಾಭ ತಿಳಿಯಿರಿ
ಪರ್ಸನಲ್ ಲೋನ್ ಅಡಮಾನರಹಿತ ಸಾಲವಾದುದರಿಂದ ಬ್ಯಾಂಕುಗಳಿಗೆ ರಿಸ್ಕ್ ಹೆಚ್ಚು. ಗ್ರಾಹಕನ ಮೇಲಿನ ನಂಬುಗೆಯಿಂದ ಒಂದು ಅಂದಾಜಿನಲ್ಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಅಂತೆಯೇ ಹೆಚ್ಚಿನ ಬಡ್ಡಿದರ ವಿಧಿಸುತ್ತವೆ. ಗ್ರಾಹಕನಿಂದ ಸಾಲ ಮರುಪಾವತಿ ಸಾಧ್ಯತೆ ಕಡಿಮೆ ಎಂಬ ಅಂದಾಜು ಇದ್ದಷ್ಟೂ ಬಡ್ಡಿ ಹೆಚ್ಚು ನಿಗದಿ ಮಾಡಲಾಗುತ್ತದೆ.
ಗ್ರಾಹಕನ ಮರುಪಾವತಿ ಶಕ್ತಿ ಎಷ್ಟು ಎಂದು ತಿಳಿಯಲು ಬ್ಯಾಂಕಿಗೆ ಇರುವ ಪ್ರಮುಖ ಉಪಾಯ ಕ್ರೆಡಿಟ್ ಸ್ಕೋರ್. ಪರ್ಸನಲ್ ಲೋನ್ ಅಷ್ಟೇ ಅಲ್ಲ ಯಾವುದೇ ಸಾಲಕ್ಕೆ ಒಬ್ಬ ಗ್ರಾಹಕ ಅರ್ಜಿ ಸಲ್ಲಿಸಿದಾಗ ಮೊದಲು ಅವರ ಕ್ರೆಡಿಟ್ ಸ್ಕೋರ್ ಅನ್ನು ಬ್ಯಾಂಕು ಪರಿಶೀಲಿಸುತ್ತದೆ. 750ಕ್ಕೂ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿದರಕ್ಕೆ ಸಾಲ ಮಂಜೂರು ಮಾಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಷ್ಟೂ ಸಾಲಕ್ಕೆ ಬಡ್ಡಿದರ ಹೆಚ್ಚು ಇರುತ್ತದೆ.
ಇದನ್ನೂ ಓದಿ: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್
ಇದರ ಜೊತೆಗೆ ಬ್ಯಾಂಕು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಪಡೆದು ಪರಿಶೀಲಿಸುತ್ತದೆ. ನಿಮಗೆ ಸಾಲ ತೀರಿಸುವಿಕೆಯ ಶಿಸ್ತು ಮತ್ತು ಸಾಮರ್ಥ್ಯ ಇದೆ ಎನಿಸಿದರೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಮೊತ್ತದ ಸಾಲ ಕೊಡಲು ಬ್ಯಾಂಕ್ ಸಿದ್ಧ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ