ಬ್ಯಾಂಕುಗಳಿಗೆ ಈಗ ಠೇವಣಿಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹೀಗಾಗಿ, ಠೇವಣಿ ದರಗಳನ್ನು ಎಲ್ಲಾ ಬ್ಯಾಂಕುಗಳೂ ಹೆಚ್ಚಿಸುತ್ತಿವೆ. ಹೆಚ್ಚಿನ ಬ್ಯಾಂಕುಗಳು ಈಗ ಶೇ. 8ರವರೆಗೆ ಬಡ್ಡಿದರ ಆಫರ್ ಮಾಡುತ್ತಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ವಿವಿಧ ಠೇವಣಿಗಳ ರೇಟ್ ಹೆಚ್ಚಿಸಿದೆ. ಶೇ. 8.15ರವರೆಗೆ ವಾರ್ಷಿಕ ಬಡ್ಡಿ ಕೊಡುತ್ತಿದೆ. ಇದು ಇಪಿಎಫ್ಗೆ ನೀಡುವ ಬಡ್ಡಿಗೆ ಸಮ. 333 ದಿನಗಳ ಠೇವಣಿಗೆ ಗರಿಷ್ಠ ಬಡ್ಡಿ ಆಫರ್ ಮಾಡುತ್ತಿದೆ ಯುಬಿಐ.
ಯೂನಿಯನ್ ಬ್ಯಾಂಕ್ನಲ್ಲಿ ಒಂದು ವರ್ಷಕ್ಕಿಂತ ತುಸು ಕಡಿಮೆ ಅವಧಿಯ ಈ 333 ದಿನಗಳ ಫಿಕ್ಸೆಡ್ ಡೆಪಾಸಿಟ್ಗೆ ಸಾಮಾನ್ಯ ಗ್ರಾಹಕರಿಗೆ ಶೇ. 7.4ರಷ್ಟು ಬಡ್ಡಿ ಆಫರ್ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟ ಮತ್ತು 80 ವರ್ಷ ಒಳಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 80 ವರ್ಷ ಮೇಲ್ಪಟ್ಟ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್ಗಳಿಗೆ ಇನ್ನೂ ಹೆಚ್ಚಿನ ಬಡ್ಡಿ ಸಿಗುತ್ತದೆ. ಇವರ 333 ದಿನಗಳ ಡೆಪಾಸಿಟ್ಗೆ ಶೇ 8.15ರಷ್ಟು ಬಡ್ಡಿಯನ್ನು ಯೂನಿಯನ್ ಬ್ಯಾಂಕ್ ಒದಗಿಸುತ್ತದೆ.
ಇದನ್ನೂ ಓದಿ: ಯುವಜನರಿಗೆಂದು ಎಲ್ಐಸಿಯಿಂದ ಎರಡು ಹೊಸ ಟರ್ಮ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇತರ ಅವಧಿಗಳಿಗೆ ಠೇವಣಿ ದರ ಎಷ್ಟಿದೆ ಎಂದು ನೋಡುವುದಾದರೆ 399 ದಿನದ ಡೆಪಾಸಿಟ್ಗೆ ಶೇ. 7.25ರಿಂದ ಶೇ. 8ರವರೆಗೆ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರ 399 ದಿನದ ಠೇವಣಿಗೆ ಶೇ. 7.25ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇ. 7.75 ಮತ್ತು ಶೇ. 8 ಬಡ್ಡಿ ಸಿಗುತ್ತದೆ.
ಸಾಮಾನ್ಯ ಗ್ರಾಹಕರ 3 ವರ್ಷದ ಫಿಕ್ಸೆಡ್ ಡೆಪಾಸಿಟ್ಗೆ ಯೂನಿಯನ್ ಬ್ಯಾಂಕ್ ಶೇ. 6.7 ಬಡ್ಡಿ ಆಫರ್ ಮಾಡುತ್ತದೆ. 3ರಿಂದ 10 ವರ್ಷದ ಅವಧಿಯ ಠೇವಣಿಗಳಿಗೆ ಶೇ. 6.5ರಷ್ಟು ಮಾತ್ರವೇ ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ಚಿನ್ನ ಖರೀದಿಸಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್ ಉತ್ತಮ ಆಯ್ಕೆ; ಇಲ್ಲಿವೆ ಕಾರಣಗಳು…
ಈ ಮೇಲಿನವು ಸೇರಿದಂತೆ ವಿವಿಧ ಠೇವಣಿ ದರಗಳನ್ನು ಯುಬಿಐ ಪರಿಷ್ಕರಣೆ ನಡೆಸಿದೆ. ಆಗಸ್ಟ್ 2ರಿಂದ ಈ ನೂತನ ದರಗಳು ಜಾರಿಗೆ ಬಂದಿವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ