1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

UTI Large Cap Fund has 15.35pc CAGR in 39 years: 1986ರಲ್ಲಿ ಆರಂಭವಾದ ಯುಟಿಐ ಲಾರ್ಜ್ ಕ್ಯಾಪ್ ಫಂಡ್ ಈ 39 ವರ್ಷದಲ್ಲಿ ಶೇ. 15ಕ್ಕೂ ಅಧಿಕ ಸಿಎಜಿಆರ್​ನಲ್ಲಿ ರಿಟರ್ನ್ ಕೊಟ್ಟಿದೆ. ಈಗಲೂ ಚಾಲ್ತಿಯಲ್ಲಿರುವ ಮ್ಯೂಚುವಲ್ ಫಂಡ್​ಗಳ ಪೈಕಿ ಅತ್ಯಂತ ಹಳೆಯ ಫಂಡ್ ಇದು. 39 ವರ್ಷದ ಹಿಂದೆ ಇದರಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ 2.71 ಕೋಟಿ ರೂ ಆಗಿರುತ್ತಿತ್ತು.

1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ
ಮ್ಯೂಚುವಲ್ ಫಂಡ್

Updated on: Jan 16, 2026 | 6:10 PM

ನವದೆಹಲಿ, ಜನವರಿ 16: ದೀರ್ಘಾವಧಿಗೆ ಹೂಡಿಕೆಗಳು ಸಾಮಾನ್ಯವಾಗಿ ಸೋಲು ತರುವುದಿಲ್ಲ. ಹೂಡಿಕೆ ಗಣನೀಯವಾಗಿ ಬೆಳೆಯಬೇಕಾದರೆ ದೀರ್ಘಾವಧಿಯೇ ಬೇಕು. ಭಾರತದಲ್ಲಿ ಸದ್ಯ ಜೀವಂತ ಇರುವ ಅತ್ಯಂತ ಹಳೆಯ ಮ್ಯೂಚುವಲ್ ಫಂಡ್​ವೊಂದರ (Mutual Fund) ನಿದರ್ಶನ ಕಣ್ಮುಂದೆ ಇದೆ. ಯುಟಿಐ ಲಾರ್ಜ್ ಕ್ಯಾಪ್ ಫಂಡ್ (UTI Large Cap Fund) ಆರಂಭವಾದಾಗಿನಿಂದ ಇಲ್ಲಿಯವರೆಗೆ ವರ್ಷಕ್ಕೆ ಶೇ. 15.35 ಸಿಎಜಿಆರ್​ನಲ್ಲಿ ಬೆಳೆದಿದೆ. ಮಾರುಕಟ್ಟೆಯನ್ನು ತಲ್ಲಣಗೊಳಿಸಿದ ಹಲವು ಅವಘಡಗಳ ನಡುವೆ ಈ ಫಂಡ್ ಅದ್ಭುತವಾಗಿ ಸಾಗಿ ಬಂದಿದೆ.

ಯುಟಿಐ ಮ್ಯೂಚುವಲ್ ಫಂಡ್ ಸಂಸ್ಥೆ 1964ರಲ್ಲಿ ಆರಂಭವಾಗಿತ್ತು. ಇದರ ಲಾರ್ಜ್ ಕ್ಯಾಪ್ ಫಂಡ್ 1986ರ ಅಕ್ಟೋಬರ್ 16ರಂದು ಶುರುವಾಗಿದೆ. ಯುಟಿಐ ಮಾಸ್ಟರ್​ಶೇರ್ ಯುನಿಟ್ ಸ್ಕೀಮ್ ಆಗಿ ಆರಂಭವಾದ ಈ ಫಂಡ್ 39 ವರ್ಷದಲ್ಲಿ ಶೇ. 15.35 ಸಿಎಜಿಆರ್​ನಲ್ಲಿ ಬೆಳೆದಿರುವುದು ನಿಜಕ್ಕೂ ದೀರ್ಘಾವಧಿ ಹೂಡಿಕೆಯ ಮಹತ್ವವನ್ನು ಸಾರಿ ಹೇಳುವಂತಿದೆ.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಎಷ್ಟಾಗುತ್ತಿತ್ತು ಗೊತ್ತಾ?

ಯುಟಿಐ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ 1986ರಲ್ಲೇ ಯಾರಾದರೂ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಇವತ್ತು ಆ ಹೂಡಿಕೆ ಮೌಲ್ಯ 2.71 ಕೋಟಿ ರೂ ಆಗಿರುತ್ತಿತ್ತು.

5,000 ಎಸ್​ಐಪಿಯಿಂದ 15 ಕೋಟಿ ರೂ?

ಒಂದು ವೇಳೆ 39 ವರ್ಷಗಳ ಹಿಂದೆ ಯುಟಿಐ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ ಮಾಸಿಕ 5,000 ರೂಗಳ ಎಸ್​ಐಪಿ ಶುರು ಮಾಡಿದ್ದರೆ ಇವತ್ತು ಆ ಹೂಡಿಕೆ ಮೌಲ್ಯ 15 ಕೋಟಿ ರೂ ಮೀರಿ ಹೋಗುತ್ತಿತ್ತು. ಹೂಡಿಕೆಯಲ್ಲಿ ಶಿಸ್ತು, ಸಂಯಮ ಇದ್ದರೆ ನಿಜಕ್ಕೂ ದೊಡ್ಡ ಸಂಪತ್ತು ಸೃಷ್ಟಿಸಬಹುದು ಎನ್ನುವುದಕ್ಕೆ ಇದು ಸಾಕ್ಷಿ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

ಉದಾಹರಣೆಗೆ, ನೀವು ಬ್ಯಾಂಕಲ್ಲಿ 30 ವರ್ಷದ ಹಿಂದೆ 20 ಲಕ್ಷ ರೂ ಹೋಮ್ ಲೋನ್ ಪಡೆದಿದ್ದರೆ (ಶೇ. 9 ಬಡ್ಡಿ) ಇವತ್ತಿನವರೆಗೂ ಕಟ್ಟಿರುವ ಇಎಂಐಗಳ ಒಟ್ಟು ಮೊತ್ತ ಸುಮಾರು 60 ಲಕ್ಷ ರೂ ಆಗಿರುತ್ತಿತ್ತು. ನೀವು ಪ್ರತೀ ತಿಂಗಳು 5,000 ರೂನಂತೆ 39 ವರ್ಷ ಎಸ್​ಐಪಿ ಮಾಡಿದರೆ ನೀವು ಕಟ್ಟುವ ಒಟ್ಟು ಮೊತ್ತ 23 ಲಕ್ಷ ರೂ ಆಗಿರುತ್ತದೆ. ಇದರ ಮೌಲ್ಯ ಇವತ್ತು 2.71 ಕೋಟಿ ರೂ. ಇದು ಹೂಡಿಕೆ ಎಷ್ಟು ಮಹತ್ವದ್ದು, ಅದರಲ್ಲೂ ದೀರ್ಘಾವಧಿ ಹೂಡಿಕೆ ಎಂಥ ಲಾಭ ತರಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ